ಏಳುಏಳುಏಳು :ಸಪ್ತಪದೀ ಇದು ಸಪ್ತಪದೀ..


ಎಲ್ಲಕ್ಕೂ ಮುಖ್ಯ: ನಮ್ಮ ಹಣೆಬರಹ ಸರಿಯಿಲ್ಲ. ನಮ್ಮ ಕಷ್ಟಗಳಿಗೆ ಕೊನೆಯಿಲ್ಲ, ದೇವರಿಗೆ ಕಣ್ಣಿಲ್ಲ. ಸ್ಕೂಲ್ನಲ್ಲಿ ಹುಡುಗಿಯರು ಇರಲಿಲ್ಲ. ಕಾಲೇಜಿನಲ್ಲಿ ಧೈರ್ಯ ಇರಲಿಲ್ಲ. ಇಂಜಿನಿಯರಿಂಗ್ ಬರೋವಷ್ಟರಲ್ಲಿ ಎಲ್ರಿಗೂ ಬಾಯ್ ಫ್ರೆಂಡ್ಸ್ ಇದ್ರು. ಇಲ್ದೇ ಇದ್ದವರನ್ನ ಪ್ರಪೋಸ್ ಮಾಡೋಕೆ ಎಂತಹ ಹತಾಶೆಯಲ್ಲೂ ಮನಸು ಬರಲಿಲ್ಲ. ಆಫೀಸೆಂದರೆ ಬಂಜರು ಭೂಮಿ. ಕತೆ-ಗಿತೆ ಬರೀತಾ ಯಾರಾದ್ರೂ ಸಿಗ್ತಾರೆ ಅಂದ್ಕೊಂಡ್ರೆ, ಇಲ್ಲಿರೋರೆಲ್ಲ ಆಂಟಿಯರೇ’..

Confessions of a bachelorಅವನ ದುಖಃ ನನಗೆ ಅರ್ಥವಾಗುತ್ತಿತ್ತು, ಯಾಕೆಂದರೆ ಅದು ನನ್ನ ದುಖಃವೂ ಆಗಿತ್ತು.

ಅಲ್ಲ ಕಣೋ, ಇಷ್ಟು ವರ್ಷ ಆಯ್ತು.. ನಿನಗೆಷ್ಟು ವಯಸ್ಸು?’ ಅಂತ ಕೇಳಿದೆ. ಇಪ್ಪತ್ತೆಂಟು ಅಂದ ಪೆಚ್ಚು ದನಿಯಲ್ಲಿ. ಅಲ್ವೋ, ಇಪ್ಪೆತ್ತೆಂಟು ಅಂತೀಯಾ, ನೀನಾಗೇ ಯಾವ ಹುಡುಗೀನೂ ನೋಡ್ಕೊಳ್ಳಿಲ್ಲ. ಬೇಡ, ಮನೆಯವರಾದ್ರು ಒಂದ್ ಹುಡುಗಿ ನೋಡೋದಲ್ವಾ? ನಮ್ಮ ಜನ್ಮಕಾರಣರು ತಮ್ಮ ಜವಾಬ್ದಾರಿ ಮರೆತಾಗ ನಾವು ಎಚ್ಚರಿಸೋದು ತಪ್ಪಲ್ಲ ಕಣೋ ಅಂದ.

ಅಯ್ಯೋ ಬಿಡು ಗುರು, ನನಗೂ ಹೇಳೀ ಹೇಳೀ ಸಾಕಾಯ್ತು. ನಾವೇ ನೋಡ್ಕೊಳ್ಳೋಣ ಅಂದ್ರೆ, ನಮ್ಮ ಕರ್ಮಕ್ಕೆ ನಮಗೆ ಸಿಗೋರಿಗೆಲ್ಲ ಮದ್ವೆ ಆಗಿರುತ್ತೆ. ಆಗಿಲ್ಲ ಅಂತಿಟ್ಕೋ: ಬಾಯ್ ಫ್ರೆಂಡ್ ಇರ್ತಾನೆ. ಇಲ್ವಾ, ಎಂಗೇಜ್ ಆಗಿರುತ್ತೆ. ಇನ್ನು ಉಳಿದಿರೋ ಪ್ರಾಡಕ್ಟ್ ಹೇಗೆ ಅಂತ ಹೇಳಬೇಕಾ? ಬೇಡ ಬಿಡೂ. ಅಷ್ಟಕ್ಕೂ ನಂಗೀಗ ಮದ್ವೆಗೆ ಆತುರ ಇಲ್ಲ. ಮೂವತ್ತಕ್ಕೆ ಆದ್ರೂ ಚಲ್ತಾ ಹೈ. ಒಬ್ಬ ಗೆಳತಿ ಬೇಕು ಅಷ್ಟೆ. ನಿಂಗೆಷ್ಟು ವಯಸ್ಸು?’ ಅಂತ ಕೇಳಿದ. ಇಪ್ಪತ್ತಾರು ಅಂದೆ. ಮಗನೇ, ಹೆಚ್ಚು ಮಾತಾಡ್ಬೇಡ, ನಮ್ಮ ದಾರಿಗೆ ಅಡ್ಡ ಬರ್ಬೇಡ. ನಿಂದು ಪ್ರಿಯಾರಿಟಿ ಟಿಕೆಟ್ ಇರಬಹುದು ನಂದು ಸರ್ವೀಸ್ ಔಟೇಜ್. ಬೇಗ ಸಾಲ್ವ್ ಮಾಡಿಲ್ಲ ಅಂದ್ರೆ ಇಡೀ ಸಿಸ್ಟಮ್ಮೇ ಎಕ್ಕುಟ್ಟೋಗುತ್ತೆ. ನಿಂದೇನಯ್ಯ ಮಹಾ ಕಷ್ಟ ಅಂದ. ಸರಿ ಸರಿ ಮೊದ್ಲು ಹುಡುಗಿ ಸಿಗ್ಲಿ ಆಮೇಲೆ ಮುಂದಿನ ಮಾತು ಅಂದೆ.

ಹೌದಲ್ಲಾ, ಯಾಕೆ ಹೀಗೆ ಅಂತ ಒಂದು ಥೀಸಿಸ್ ಮಾಡಬೇಕು ಅನಿಸಿತು. ಈ ಸಾಹಿತ್ಯವಲಯದಲ್ಲಿ ಇರೋರೆಲ್ಲ ಹೆಚ್ಚಾಗಿ ಸೀನಿಯರ್ ಸಿಟಿಜ಼ನ್ಸ್. ನಾವು ಬ್ರಹ್ಮಾಚಾರಿಗಳ ಪ್ರಕಾರ, ಮದ್ವೆ ಆಗಿ ಮಕ್ಕಳು ಆಗಿರೋ ಮಹಿಳೆಯರೆಲ್ಲ ಸೀನಿಯರ್ ಸಿಟಿಜ಼ನ್ಸ್. ಇದರ ಬಗ್ಗೆ ನನಗೆ ಲವ್ ಲೆಟರ್ ಬರೆಯುವ ನಮ್ಮ ಕವಯತ್ರಿಯೊಬ್ಬರಿಗೆ ತಕರಾರಿದೆ. ಇರಲಿ ಅವರನ್ನು ಆ ಲಿಸ್ಟ್ನಿಂದ ಕೈಬಿಡೋಣ, ನನಗೆ ಲವ್ ಲೆಟರ್ ಬರೀತಾರೆ ಆದ್ದರಿಂದ :-).

ಆದರೂ, ನಮ್ಮ ಪಾಡು ಯಾವ ಶತ್ರೂಗೂ ಬೇಡ ಕಣ್ರೀ. ಕಷ್ಟ ಪಟ್ಟು ಕವಿತೆ-ಗಿವಿತೆ ಅಂತ ತೋಚಿದ್ದನ್ನೆಲ್ಲ ಗೀಚ್ತೀವಿ. ಹತ್ತಾರು ಕಡೆ ಹಂಚ್ತೀವಿ. ಎಲ್ರೂ ಮುಂದ್ವರ್ಸಿ ಮುಂದ್ವರ್ಸಿ ಅಂತಾರೆ. ಮುಂದ್ವರ್ಸಕ್ಕೆ ಯಾರೂ ಸಿಗೋದೇ ಇಲ್ಲ. ಹಾಗೆ ಅಪ್ಪಿ ತಪ್ಪಿ ಸಿಕ್ರು ಅಂತ ಅಂದುಕೊಂಡರೆ. ನನಗೆ ಮದುವೆ ಆಗಿದೆ, ನನಗೆ ಎರಡ್ ಗಂಡು ಒಂದ್ ಹೆಣ್ಣು, ಬಾಯ್ ಫ್ರೆಂಡ್ ಲಂಡನ್ನಲ್ಲಿ ಇದ್ದಾನೆ, ಮುಂದಿನ ವಾರ ಮದ್ವೆ!......ಬರೀ ಇಂಥಾ ಕೇಸುಗಳೇ. ದೇವರಿಗೆ ಕಣ್ಣು ಕೊಡೋ ಬೇಡರ ಕಣ್ಣಪ್ಪ ಇನ್ನೂ ಹುಟ್ಟಿಲ್ಲ ಅನ್ಸುತ್ತೆ.

ಮೊನ್ನೆ ಗೆಳತಿಯೊಬ್ಬಳು ಕೇಳುತ್ತಿದ್ದಳು, ನಿನಗೆ ಕವಿತೆ, ಸಾಹಿತ್ಯ ಅಂದ್ರೆ ಏನು ಅಂತಾನೆ ಗೊತ್ತಿಲ್ಲದೇ ಇರೋ ಹುಡುಗಿ ಸಿಕ್ರೆ ಏನ್ ಮಾಡ್ತೀಯಾ ಅಂತ?. ಸಾಹಿತ್ಯಕ್ಕೆ ಬೆಂಕಿ ಬೀಳಾ, ಮೊದ್ಲು ಒಬ್ಳು ಹುಡುಗಿ ಅಂತ ಸಿಗಲಿ ಅಂದೆ.

ಕವಿತೆ ಕೆಟ್ಟದಾಗಿದ್ದರೆ ಅದರಲ್ಲಿ ಕವಿಯ ತಪ್ಪು ಎಷ್ಟಿದೆಯೋ ಅಷ್ಟೇ ಈ ಸಮಾಜದ್ದೂ ಇದೆ. ಒಬ್ಬ ಕವಿಗೆ ಒಂದು ಹುಡುಗಿಯನ್ನು ಕೊಡಲಾಗದ ಸಮಾಜ ಒಳ್ಳೆಯ ಕವಿತೆಯನ್ನು ಹೇಗೆ ನಿರೀಕ್ಷಿಸಬಹುದು, ನೀವೇ ಹೇಳಿ?. ಕೆರೆಯ ನೀರನು ತಾನೆ ಕೆರೆಗೆ ಚೆಲ್ಲೋದು?. ವರ ಕೊಡೋದಕ್ಕೆ ಯಾರೂ ತಯಾರಿಲ್ಲ. ಇದರಲ್ಲಿ ನಮ್ಮ ಸ್ವಾರ್ಥ ಏನೂ ಇಲ್ಲ. ನಾವುಗಳು ಹುಡುಗಿ ಸಿಗಲಿ ಹುಡುಗಿ ಸಿಗಲಿ ಅಂತ ಪದೇ ಪದೇ ಯಾಕೆ ಹೇಳ್ತೀವಿ ಅಂದ್ರೆ, ನಿಮಗೆ ಒಳ್ಳೆ ಕವಿತೆ ಸಿಗಲಿ ಅಂತ. ಕವಿಗೆ ಸಾಮಾಜಿಕ ಜವಾಬ್ದಾರಿಗಳು ಇರಬೇಕಂತೆ (ಮೊನ್ನೆ ರಶೀದರ ಬ್ಲಾಗ್ ಓದಿದ್ದೆ).

ಆದ್ರೆ, ಮದ್ವೆ ಯೋಚ್ನೆ ಸದ್ಯಕ್ಕೆ ಇಲ್ಲ. ಅದೂ ಮೊನ್ನೆ ಜೋಗಿಯವರ ಕನ್ನಡಿ ಒಳಗೆ ಗಳಗನಾಥರಿರಲಿಲ್ಲ..’ ಕತೆ ಓದಿದ ಮೇಲೆ, ಪುರುಷ ಸಮಾಜದ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕೊನೆಯೇ ಇಲ್ವಾ ಅಂತ ಹತಾಶನಾದೆ. ಮಾರನೆಯ ದಿನ ಪೇಪರ್ ಓದಿದರೆ- ಗಂಡನಿಗೆ ಬೆಂಕಿ ಹಚ್ಚಿ ಕೊಂದ ಹೆಂಡತಿ!’.......ಅಬ್ಬಿಯಾ, ನಂಗ್ ಮದಿ ಬ್ಯಾಡ್ದೇ..

ಸೋ, ಡೀಲ್ ಏನು ಅಂದ್ರೆ ನಮಗೆ ಒಬ್ಳು ಗೆಳತಿ ಬೇಕು.

* ವಯಸ್ಸು ಇಪ್ಪತ್ತೆರಡರಿಂದ ಇಪ್ಪತ್ತಾರು (ನನ್ನ ಗೆಳಯನಿಗೆ ಇಪ್ಪತ್ತೆಂಟರವರೆಗೂ ನಡೆಯುತ್ತೆ)
* ಜಡೆ ಇದ್ರೂ ಓಕೆ, ಬಾಬ್ ಕಟ್ ಆದ್ರೂ ಓಕೆ. ಮಿರಿಂಡಾ ಸ್ಟೈಲ್ ಬೇಡ
* ಉದ್ದ: ಇದ್ದಷ್ಟು
* ದಪ್ಪ: ಒಂದೇ ಸೀಟಲ್ಲಿ ಕೂರೋವಷ್ಟು
* ಬಣ್ಣ: ನೋಡೋವಷ್ಟು
* ಮದುವೆ ಆಗಿರಬಾರ್ದು,
* ಸದ್ಯಕ್ಕೆ ಆಗೋ ಯೋಚ್ನೆನೂ ಇರಬಾರ್ದು,
* ನಮ್ಮನ್ನೇ ಮದ್ವೆ ಆಗೋ ಯೋಚ್ನೆ ಅಂತೂ ಖಂಡಿತಾ ಇರಬಾರ್ದು,
* ಆಕೆಗೆ ಬೇರೊಂದು ಅಫೇರ್ ಇರಬಾರ್ದು,
* ಮುಂಚೆ ಇದ್ದಿದ್ರೆ ಅದು ಬಿಟ್ಟು ಈಗ ಕನಿಷ್ಠ ಎರಡು ತಿಂಗಳಾಗಿರಬೇಕು (ಎರಡು ತಿಂಗಳ ಮೇಲೆ ಯಾರ್ ತಾನೇ ಜ್ಞಾಪಕ ಇಟ್ಕೋತಾರೆ?)
* ಅಫ್ಕೋರ್ಸ್ ನೋಡೋಕೆ ಸುಂದರವಾಗಿರಬೇಕು.

ಇಷ್ಟಿದ್ದರೆ ಆಕೆಗೆ ಕವಿತೆ ಏನು, ಕನ್ನಡ ಗೊತ್ತಿಲ್ಲದಿದ್ರೂ ಪರ್ವಾಗಿಲ್ಲ. ಕನ್ನಡಾಭಿಮಾನ ಏನಿದ್ರು ನವಂಬರ್‌ನಲ್ಲಿ, ಕನ್ಯಾಭಿಮಾನ ಜನ್ಮಜನ್ಮಾಂತರದ್ದು ಕಣ್ರೀ.

ನಾಳೆ ಜುಲೈ ಏಳನೇ ತಾರೀಖು ಬಹಳ ಅಪರೂಪದ ಶುಭ ದಿನವಂತೆ. ಏಳನೇ ಇಸವಿಯ ಏಳನೇ ತಿಂಗಳಿನ ಏಳನೇ ದಿವಸ. ಭಾರತದ ಪಂಚಾಂಗದ ಪ್ರಕಾರ ಕೂಡ ಆವತ್ತು ಸಪ್ತಮಿ. ಸಪ್ತ ಸಾಗರದಾಚೆಯೆಲ್ಲೋ ಕುಳಿತಿರುವ ಆ ಹುಡುಗಿ ನಮಗೆ ಬೇಗ ಸಿಗಲಿ ಅಂತ ಸೀನಿಯರ್ ಸಿಟಿಜ಼ನ್ಸ್ ಎಲ್ರೂ ಬೇಡಿಕೊಳ್ಳಿ.. ಕನ್ಯಾಮಣಿಗಳು ನಾಚಿಕೊಳ್ಳಿ. ಅಲ್ಲೀವರೆಗೆ ನಿಮಗೆ ಕವಿತೆ ಇಲ್ಲ. ಕಾಟ ತಪ್ತು ಅಂದ್ರಾ?. ಒಳ್ಳೇ ಕವಿತೆ ಇಲ್ಲ ಅಂದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+