ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾನಭಾಗ್ಯ-ವೀಸಾಭಾಗ್ಯ : ಎತ್ತಣಿಂದೆತ್ತಣ ಸಂಬಂಧ?

By Staff
|
Google Oneindia Kannada News


ಹೆಂಡತಿ ಬಸುರಿಯಾಗಿರುವ ಸುದ್ದಿ ತಿಳಿಸುವುದೇ ತಡ ಭಾರತದಿಂದ ಫೋನಿನಲ್ಲಿ ಎಲ್ಲರೂ ಪಾಪ ಗಂಡನಿಗೆ ಅವಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಮಾರುದ್ದ ಉಪದೇಶ ನೀಡುವುರೇ ಜಾಸ್ತಿ.

Much Awaited Joy‘ಯಾಕೋ ತಮಾ....ಮದುವೆಯಾಗಿ ಎಲ್ಡು ವರ್ಷ ತುಂಬಿದರೂ ಇನ್ನೂ ಒಳ್ಳೆ ಸುದ್ದಿ ಕೊಡಲ್ಲಾನ್ನಕ್‌ ಹತ್ತೀ ನೀನು’ !! ಈ ನಿರಾಶಾದಾಯಕವಾದ ವಾಕ್ಯವನ್ನು ಸಾಮಾನ್ಯವಾಗಿ ನಿಮ್ಮ ಅಜ್ಜಿ-ತಾತ, ಅಪ್ಪ-ಅಮ್ಮ, ಅತ್ತೆ-ಮಾವ ಅಥವಾ ಇವರಲ್ಲಿ ಯಾರಾದರು ಒಬ್ಬರು ನಿಮ್ಮ ಮದುವೆನಂತರ ನಿಮ್ಮ ಕಿವಿಗೆ ಹಾಕಿರಲೇ ಬೇಕು ನೋಡಿ. ಅವರಿಗೇನು ಗೊತ್ತು ಒಳ್ಳೆ ಸುದ್ದಿ ಕೊಡುವುದಕ್ಕೆ ನಿಮಗೂ ಇಷ್ಟ ಆದರೆ ಸುದ್ದಿ ಕೊಟ್ಟ ಮೇಲೆ ಪಡಬೇಕಲ್ಲವೆ ದುಪ್ಪಟ್ಟು ಕಷ್ಟ!! ಇದು ಜಾಸ್ತಿ ಅನ್ವಯವಾಗುವುದು ಕನ್ನಡನಾಡು ಬಿಟ್ಟು ಹೊರಬಂದು ಅಪ್ಪ-ಅಮ್ಮ-ಅತ್ತೆ-ಮಾವ ಮತ್ತು ಸಂಬಂಧಿಕರುಗಳಿಂದ ದೂರ ಇರುವ ಹೊರನಾಡ ಕನ್ನಡಿಗರಿಗೆ, ನಮ್ಮ ದೊಡ್ಡವರ ಸಹಾಯವಿಲ್ಲದೆ ಪರದೇಶದಲ್ಲಿ ಮಕ್ಕಳನ್ನು ಮಾಡಿಕೊಂಡರೆ ತುಂಬಾ ಕಷ್ಟಪಡಬೇಕೆಂಬುದು ಶತಸಿದ್ಧ.

ಮೊನ್ನೆ ಒಂದು ದಿವಸ ಹೀಗೆ ಹರಟುತ್ತಾ ಇತ್ತೀಚೆಗೆ ಮದುವೆಯಾಗಿ ಬಂದಿರುವ ನನ್ನ ಸ್ನೇಹಿತನನ್ನು ಕೇಳಿದೆ ’’ಯಾವಾಗಪ್ಪ ನೀನು good news ಕೊಡೋದು’’ ಅಂದೆ ಅದಕ್ಕೆ ಅವನು ’’ಅದೆಲ್ಲಾ US Consulate ಮೇಲೆ ಡಿಪೆಂಡ್‌ ಆಗಿದೆ ಕಣೋ’’ ಎಂದು ಮಾತಿನ ಚಟಾಕಿ ಹಾರಿಸಿಬಿಟ್ಟ, ಇವನು ಸಿಹಿಸುದ್ದಿ ಮಾಡೋದಕ್ಕೂ US Consulate ಎತ್ತಣ ಸಂಬಂಧ ಎಂದು ಹುಬ್ಬೇರಿಸಬೇಡಿ, ಅವನ ಅತ್ತೆ-ಮಾವ, ಅಪ್ಪ-ಅಮ್ಮಂದಿರಲ್ಲಿ ಯಾರಾದರು ಒಬ್ಬರಿಗೆ ವೀಸಾ ಸಿಕ್ಕರೆ ಮಾತ್ರ ಅವನಿಗೂ ಸಿಹಿಸುದ್ದಿ ಕೊಡಲು ಸ್ವಲ್ಪ ಧೈಯ ರ್ ಬರೋದು. ನಮಗೆ ಅವನ ಮಾತು ಕೇಳಿ ನಗು ಬರಬಹುದು ಆದರೆ ಅವನ ಮುಂದಾಲೋಚನೆಗೆ ಭೇಷ್‌ ಅನ್ನಲೇಬೇಕು, ಒಳ್ಳೆ ಸುದ್ದಿಗಾಗಿ ಪೀಡಿಸುವ ನಮ್ಮ ಅತ್ತೆಯಂದಿರಿಗೆ, ಅಳಿಯಂದಿರುಗಳು ಕೊಡುವ ಸಾಮಾನ್ಯ ಉತ್ತರ ಇದಾಗಿದೆ.

ಅಳಿಯಾ, ಯಾವಾಗಪ್ಪ
ನೋಡೊದು ನನ್ನ ಮಗಳ
ಹೊಟ್ಟೆಯಲ್ಲಿ ಕೂಸಾ !
ಅತ್ತೆ, ಅದಕ್ಕೆ ಮೊದಲು
ನಿನಗೆ ಸಿಗಬೇಕಲ್ಲವೇ
ಅಮೆರಿಕಾದ ವೀಸಾ !!

ಅದೃಷ್ಟ ಚೆನ್ನಾಗಿದ್ದು ಅತ್ತೆಮಾವಂದಿರು ಹರ-ಸಾಹಸ ಮಾಡಿ ವೀಸಾ ಗಿಟ್ಟಿಸಿಕೊಂಡು ನಿಮ್ಮಿಂದ ಒಳ್ಳೆ ಸುದ್ದಿ ಕೇಳಿಕೊಂಡು ಸಂತೋಷದಿಂದ ನಾಲ್ಕು ಸೂಟ್‌ಕೇಸು ತುಂಬಿಸಿಕೊಂಡು ಫ್ಲೈಟ್‌ ಏರಿಕೊಂಡು ಏರ್‌-ಪೊರ್ಟ್‌ನಲ್ಲಿ ಇಳಿದುಕೊಂಡದ್ದೆ ತಡ ಆಗ ನೋಡಬೇಕು ಸಿಹಿ ಸುದ್ದಿಮಾಡಿದ ಅಮೆರಿಕಾ ಅಳಿಯನ ಮುಖದಲ್ಲಿ ಮಿಂಚುವ ಸಡಗರದ ಸೊಗಸು. ಅತ್ತೆ ಕೈಯಿಂದ ರುಚಿ-ರುಚಿಯಾದ ಅಡುಗೆ ತಿನ್ನಬೇಕೆನ್ನುವ ಒಳ ಮನಸ್ಸಿನ ಕುಮ್ಮಕ್ಕು. ಪಾಪ ಕಣ್ರೀ ಅಳಿಮಯ್ಯನಾದರು ಏನು ಮಾಡ್ಯಾನು ಹೇಳಿ, ಹೆಂಡತಿಯ ಕೈಯಿಂದ ಅದೇ ಹಳೆ ರುಚಿ ತಿಂದು ತಿಂದು ನಾಲಿಗೆ ಪ್ರಜ್ಞೆ ಕಳೆದುಕೊಂಡಿದೆ. ಏಕೆಂದರೆ ಮದುವೆಯೆಂಬ ಹೊಸ ಕಾಲೇಜಿನಲ್ಲಿ, ಹೆಂಡತಿಯೆಂಬ ಹೊಸ ವಿದ್ಯಾರ್ಥಿ ಮಾಡುವ ಅಡುಗೆಯೆಂಬ chemistry experimentಗೆ ಅಮಾಯಕ ಗಂಡನೇ ತಾನೆ Laboratory?

ಇಷ್ಟಾದರು ಹೆಂಡತಿಯನ್ನ ಬಿಟ್ಟುಕೊಡದ ನಮ್ಮ ಕನ್ನಡದ ಗಂಡುಗಳು ಸಾಮಾನ್ಯವಾಗಿ ಎಳೆಯುವ ರಾಗ ’’ನೋಡ್ರಿ, ನನ್ನವಳಿಗೆ ಅಡುಗೆ ಮಾಡೋದಂದ್ರೆ ಅಷ್ಟಕಷ್ಟೇ, ಆದರೆ ನನ್ನವಳ ಸ್ವಭಾವ ಮಾತ್ರ ತುಂಬಾ ಡಿಸೆಂಟು ರೀ’’, ನಮ್ಮವರ ಈ ರಾಗವೇ ನಮ್ಮ ಮುಂದಿನ ಹನಿಗವನಕ್ಕೆ ಸ್ಫೂತಿ ರ್ !

ನನ್ನವಳಿಗೆ ಅಡುಗೆ
ಮಾಡೋದಂದ್ರೆ ಅಷ್ಟಕಷ್ಟೇ
ಸ್ವಭಾವಮಾತ್ರ ತುಂಬಾ
ಡಿಸೆಂಟು ರೀ!
ಅವಳು ಮಾಡಿದ
ಅಡುಗೆ ತಿಂದ ದಿವಸ
ನಮ್ಮ ಮನೆಮ0ದಿಗೆಲ್ಲಾ
ಡಿಸೆಂಟ್ರೀ !!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X