• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ವಾ’ನರರು ಕಟ್ಟಿದ ಸ್ವರ್ಣಸೇತುಕನ್ನಡ ಕೂಟವೊಂದರ ವಾರ್ಷಿಕ ಸಂಚಿಕೆ ಹೀಗಿರಬೇಕು ಅನ್ನುವಂತಿದೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ 2003ರ ಸಾಹಿತ್ಯ ಸಂಚಿಕೆ ‘ಸ್ವರ್ಣಸೇತು’. ಪುಟಪುಟದಲ್ಲೂ ಸಂಪಾದಕೀಯ ಬಳಗದ ಪರಿಶ್ರಮದ ಹಾಜರಿಯಿದೆ. ‘ಸ್ವರ್ಣಸೇತು’ ಸಾಹಿತ್ಯ ಸಂಚಿಕೆಯ ಕುರಿತ ಈ ಒಳನೋಟದ ಬರಹದಲ್ಲಿ ಕಾಣುವುದು ಪುಸ್ತಕ ವಿಮರ್ಶೆಯಲ್ಲ - ಪುಸ್ತಕ ಪ್ರೀತಿ !

By Staff
|
ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ ಮಾರ್ಚ್‌ 10, 2003

‘ವಾ’ನರರು ಕಟ್ಟಿದ ಸ್ವರ್ಣಸೇತು

ಕನ್ನಡ ಕೂಟವೊಂದರ ವಾರ್ಷಿಕ ಸಂಚಿಕೆ ಹೀಗಿರಬೇಕು ಅನ್ನುವಂತಿದೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ 2003ರ ಸಾಹಿತ್ಯ ಸಂಚಿಕೆ ‘ಸ್ವರ್ಣಸೇತು’. ಪುಟಪುಟದಲ್ಲೂ ಸಂಪಾದಕೀಯ ಬಳಗದ ಪರಿಶ್ರಮದ ಹಾಜರಿಯಿದೆ. ‘ಸ್ವರ್ಣಸೇತು’ ಸಾಹಿತ್ಯ ಸಂಚಿಕೆಯ ಕುರಿತ ಈ ಒಳನೋಟದ ಬರಹದಲ್ಲಿ ಕಾಣುವುದು ಪುಸ್ತಕ ವಿಮರ್ಶೆಯಲ್ಲ - ಪುಸ್ತಕ ಪ್ರೀತಿ !

 • ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌,

E-mail : srivathsajoshi@yahoo.com

Swarnasetu KKNC magazine, 2003ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ‘ಸಾಹಿತ್ಯಿಕ’ ಸದಸ್ಯರಿಗೆಲ್ಲ ನನ್ನ ನಮಸ್ಕಾರಗಳು.

ನಿಮ್ಮ ಕೂಟದ 2003ರ ಸಾಹಿತ್ಯ ಸಂಚಿಕೆ ‘ಸ್ವರ್ಣಸೇತು’ವಿನ ಪ್ರತಿಯನ್ನು ದತ್ತಾತ್ರಿ ರಾಮಣ್ಣ ನೇತೃತ್ವದ ಸಂಪಾದಕ ಮಂಡಲಿಯವರು ಪ್ರೀತಿ-ವಿಶ್ವಾಸಗಳಿಂದ ನನಗೆ ಕಳಿಸಿಕೊಟ್ಟಿದ್ದರು. 180 ಪುಟಗಳ ಈ ಪುಸ್ತಕವನ್ನು ಬಿಡುವು ಸಿಕ್ಕಿದ ವೇಳೆಯಲ್ಲಿ ಓದಿಮುಗಿಸಿದಾಗ ಅನಿಸಿದ್ದಿಷ್ಟು :

ಸಂಪಾದಕ ಮಂಡಳಿ, ಸಂಚಿಕೆಯಲ್ಲಿನ ಶ್ರೀಮಂತ ಬರಹಗಳ ಲೇಖಕರು, ಆಕರ್ಷಕ ಮುಖಪುಟ ಮತ್ತು ಚಿತ್ರರಚಿಸಿದ ಕಲಾವಿದರು - ಎಲ್ಲರೂ ‘ಸ್ತುತ್ಯರ್ಹ’ ಕೆಲಸಮಾಡಿದ್ದಾರೆ! ಹಾಗಾಗಿ ಎಲ್ಲರಿಗೂ ಅಭಿನಂದನೆ ಮತ್ತು ಧನ್ಯವಾದ ಸೂಚಿಸೋಣವೆಂದು ಈ ಪತ್ರ.

ಸ್ವರ್ಣಸೇತು ಸಂಚಿಕೆಯ ಕುರಿತು ಎರಡು ಮಾತು

 • ಮುಖಪುಟ ವಿನ್ಯಾಸ ಸರಳ-ಸುಂದರವಾಗಿದ್ದು ಬಹಳ ಅರ್ಥಪೂರ್ಣವಾಗಿದೆ. ಜನಾರ್ಧನ ಸ್ವಾಮಿಯವರ ‘ಸ್ಟಾಂಪ್‌’ ಕಂಡೇ ಕಾಣುತ್ತದೆ.
 • ವರದಿಗಳು, ಕಥೆ, ಕವನ, ಸಂದರ್ಶನ (ಡೆಟ್ರಾಯಿಟ್‌ ಸಮ್ಮೇಳನದ ಆ ಗಲಾಟೆಯ ನಡುವೆಯೂ ನಿಸಾರ್‌ ಅಹ್ಮದ್‌ರ ಸಮಯ ಪಡೆದು ನಡೆಸಿದ್ದು) - ಹೀಗೆ ‘ಆಲ್‌ರೌಂಡರ್‌’ ಸಾಧನೆ ತೋರಿದ ಜ್ಯೋತಿ ಮಹಾದೇವ್‌ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಬೇಕು. ಈ ‘ಬಹುಮುಖ ಸಾಧನೆ’ಯಲ್ಲಿ ಸೂಪರ್‌ ಎಂದರೆ ‘ಕಂದ ಮನೆಯಲ್ಲಿಲ್ಲ...’ ಕವನ!
 • ಹರಿಹರೇಶ್ವರ ಅವರ ಪ್ರಬಂಧ ಅಧ್ಯಾತ್ಮ ವಿಷಯದಿಂದಾಗಿ ಸ್ವಲ್ಪ ‘ತಲೆಯ ಮೇಲಿಂದ’ ಹಾದುಹೋಗುವಂತಿದ್ದರೆ, ನಟರಾಜ್‌ ಅವರ ಪ್ರಬಂಧ ವಸ್ತುಸ್ಥಿತಿಗೆ ಹತ್ತಿರವಾಗಿದೆ. ‘ಭಾಷೆ, ಸೌಂದರ್ಯ...’ (ಮಹಾಬಲಶಾಸ್ತ್ರಿ) ಸೋದಾಹರಣ ಪ್ರಬಂಧ ಚೆನ್ನಾಗಿದೆ.
 • ಗುರುಪ್ರಸಾದ್‌ ಕಾಗಿನೆಲೆ, ಎಂ.ವಿ.ನಾಗರಾಜರಾವ್‌, ಶಾಂತಾರಾಮ ಸೋಮಯಾಜಿ ಮತ್ತು ಕಡೂರು ರಾಮಸ್ವಾಮಿಯವರ ಕಥೆಗಳು ಖಂಡಿತವಾಗಿಯೂ ಸ್ವರ್ಣಸೇತುವಿನ ಮೌಲ್ಯ ಹೆಚ್ಚಿಸಿವೆ.
 • ಎಲ್ಲ ಕವಿತೆಗಳೂ ಹೈ-ಕ್ಲಾಸ್‌! ಅದರಲ್ಲೂ ಎರಡನ್ನು ಹೆಸರಿಸಿ ಎಂದು ನನ್ನ ಬಳಿ (ಅದು ನಿಮ್ಮ ಅಭಿಪ್ರಾಯವೂ ಆಗಿರಬೇಕಿಲ್ಲ) ಕೇಳಿದರೆ ‘ಒಲವಿನ ಸಸಿ’( ಸುಧಿ ಬೆಂಗಳೂರು) ಮತ್ತು ‘ಜಿಂಕೆ ಜಾನಕಿ’ (ಸಂಧ್ಯಾ ರವೀಂದ್ರನಾಥ್‌).
 • ‘ಅಮೆರಿಕಾಯಣ’ (ಜ್ಯೋತಿ ಶೇಖರ್‌) ವ್ಯಂಗ್ಯಚಿತ್ರಗಳೂ ‘ಕಾರ್ಟೂನ್‌ ಸ್ವಾಮಿ’ಯವರ ಚಿತ್ರಗಳಿಗಿಂತೇನೂ ಕಡಿಮೆಯಿಲ್ಲ !
 • ಚಿಣ್ಣರ ಲೋಕದಲ್ಲಿ , ‘ಆನಂದನ ರಜಾ’ (ವಿವೇಕ್‌ ವಿನಾಯಕ್‌), ‘Hurry, I found peace’(ಅಭಿಜ್ಞಾ ಚಂದ್ರಶೇಖರ್‌) ಮತ್ತು ‘Trip to Kabini’ (ಅಲೋಕ್‌ ಸುಬ್ಬರಾವ್‌) ನನಗಿಷ್ಟವಾದುವು. ಉಳಿದವರೆಲ್ಲರ ಪ್ರತಿಭೆಯೂ ಮೆಚ್ಚತಕ್ಕದ್ದೇ.
 • ‘ಸ್ವರ್ಣಸೇತು’ ಹೆಸರು ಕೂಡ ಚೆನ್ನಾಗಿದೆ. ಬಹುಷಃ ಲೇಖನಗಳ ತಯಾರಿ, ಬರವಣಿಗೆ, ಕ್ರೋಢೀಕರಣದ ವೇಳೆ ಇನ್ನೂ ಈ ಹೆಸರು ನಿರ್ಧರಿತವಾಗಿದ್ದಂತಿಲ್ಲ. ಎಲ್ಲ ಕಡೆ, ‘ನಮ್ಮೀ ಸಂಚಿಕೆಯಲ್ಲಿ..., ನಮ್ಮ ಸಂಚಿಕೆಗೆ..., ಈ ಸಂಚಿಕೆಯ...’ ಎಂದೇ ಕಂಡುಬರುತ್ತಿದೆ. ಆ ಜಾಗದಲ್ಲೆಲ್ಲ ‘ಸ್ವರ್ಣಸೇತು’ ಉಲ್ಲೇಖಿಸಬೇಕು, ಮುಂದಿನ ಸಂಚಿಕೆಯಿಂದ.
 • ಮುಖಾಮುಖಿ, ಪ್ರಬಂಧ, ಕಥೆ, ಕವನ, ಚಿತ್ರಗಳು, ಮಕ್ಕಳ ವಿಭಾಗ - ಹೀಗೆ ವಿವಿಧಗುಚ್ಛಗಳನ್ನು ಪೋಣಿಸಿದ ರೀತಿ ಚೆನ್ನಾಗಿದೆ. ‘ದೇವಾಲಯದ ಬಳಿಯಲೊಂದು ಮನೆಯ ಮಾಡಿ’, ‘ಅವತಾರದ ಅವಾಂತರ’ ಮುಂತಾದ ಹರಟೆ ಬರಹಗಳು (ಅವು ಚೆನ್ನಾಗಿವೆ!) ‘ಲಲಿತ ಪ್ರಬಂಧ’ಗಳಾದುದರಿಂದ ಪ್ರಬಂಧಗಳ ವಿಭಾಗಕ್ಕೆ ಸೇರಬೇಕೇನೊ.
 • ‘ಗ್ಯಾಪ್‌ ಫಿಲ್ಲಿಂಗ್‌ ಐಟಂ’ಗಳನ್ನು ಇನ್ನೂ ಚೆನ್ನಾಗಿ ನಿರ್ವಹಿಸಬಹುದಿತ್ತು. ಕೆಲವು ಕಡೆ ರಚನೆಕಾರರ ಹೆಸರಿಲ್ಲ. ಅಕ್ಷರಕ್ಕೊಂದು ಗಾದೆ (ಪುಟ 48) ಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ‘ಪ ಫ ಬ ಭ ಮ’ ಎಲ್ಲಿ ಮಾಯವಾದುವು?
 • ಕಾಗುಣಿತ ತಪ್ಪುಗಳು ಕೆಲವೊಮ್ಮೆ ಅನಿವಾರ್ಯ. ಆದರೆ ‘ಜಿ.ಪಿ.ರಾಜರತ್ನಂ’ ಎಂದಿರಬೇಕಾದ್ದು ‘ಜೆ.ಪಿ.ರಾಜರತ್ನಂ’ (ಪುಟ 156) ಆಗಿರುವುದು ಅಕ್ಷಮ್ಯ!

ಒಟ್ಟಿನಲ್ಲಿ , ಸ್ವರ್ಣಸೇತು ಕಟ್ಟಿದ ವಾನರರು (ವಾ! ನರರು:-) ಮತ್ತು ಅಳಿಲುಗಳಿಗೆಲ್ಲ ಇನ್ನೊಮ್ಮೆ ಹೃತ್ಪೂರ್ವಕ three cheers!! ನಿಮ್ಮೆಲ್ಲರ ಸಾಹಿತ್ಯ ಕೃಷಿ ಹೀಗೇ ಹುಲುಸಾಗಿ ಬೆಳೆಯಲಿ.

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more