• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕನ್‌ ಪಟ್ಟಣದ ಜನಪದೋತ್ಸವದಲ್ಲಿ ಕನ್ನಡ ಯಕ್ಷಗಾನ !

By ಶ್ರೀವತ್ಸ ಜೋಶಿ
|

ಸೆಪ್ಟಂಬರ್‌ 28ರ ಶನಿವಾರ ಮೇರಿಲ್ಯಾಂಡ್‌ನ ಮೊಂಟ್ಗೋಮೇರಿ ಕೌಂಟಿ(ಜಿಲ್ಲೆ)ಯು ‘’ಮ್ಯಾಜಿಕಲ್‌ ಮೊಂಟ್ಗೋಮೇರಿ - ಆರ್ಟ್ಸ್‌ ಏಂಡ್‌ ಹ್ಯುಮಾನಿಟೀಸ್‌’’ ಎಂಬ ಜನಪದ ಉತ್ಸವವನ್ನು ಮಧ್ಯಾಹ್ನದಿಂದ ಸಂಜೆ ಐದು ಗಂಟೆಯವರೆಗೆ ಸಿಲ್ವರ್‌ಸ್ಪ್ರಿಂಗ್‌ ಡೌನ್‌ಟೌನ್‌ನಲ್ಲಿ ಏರ್ಪಡಿಸಿತ್ತು. ಅದೊಂದು ರೀತಿಯ ‘’ಸ್ಟ್ರೀಟ್‌ ಫೆಸ್ಟಿವಲ್‌’’. ಅರ್ಧದಿನದ ಮಟ್ಟಿಗೆ ಟ್ರಾಫಿಕ್‌ ಎಲ್ಲ ಡೈವರ್ಟ್‌ ಮಾಡಿ, ನಾಲ್ಕು ಮಾರ್ಗಗಳು ಸೇರುವಲ್ಲಿ ಒಂದು ವೇದಿಕೆ.

ಒಂದು ರಸ್ತೆಯು ಇಕ್ಕೆಲಗಳಲ್ಲಿ ವಿವಿಧ ಸ್ಟಾಲ್‌ಗಳು. ಸಿಲ್ವರ್‌ಸ್ಪ್ರಿಂಗ್‌ನಲ್ಲಿ ತನ್ನ ಹೊಸ ವರ್ಲ್ಡ್‌-ಹೆಡ್‌ಕ್ವಾರ್ಟರ್ಸ್‌ ಕಟ್ಟಿಸುತ್ತಿರುವ ಡಿಸ್ಕವರಿ ಚಾನೆಲ್‌ ಈ ಹಬ್ಬಕ್ಕೆ ಪ್ರಾಯೋಜಕತ್ವ ನೀಡಿತ್ತು ; ಹಾಗಾಗಿ ಮುಂದೊಂದು ದಿನ ಡಿಸ್ಕವರಿ ಚಾನೆಲ್‌ನಲ್ಲಿ ಈ ಪ್ರೋಗ್ರಾಂ ಬರುವ ಸಾಧ್ಯತೆಗಳಿವೆ! ಆಫ್ರಿಕನ್‌, ಐರಿಶ್‌, ಸ್ಪೈನ್‌, ಲ್ಯಾಟಿನ್‌ ಮೂಲದ ಜನಪದ ಕಲೆಗಳನ್ನೆಲ್ಲ ಆಯಾ ದೇಶಗಳಿಂದ ಇಲ್ಲಿ ಬಂದು ನೆಲೆಸಿರುವ ಸ್ಥಳೀಯ ಕಲಾವಿದರು ಈ ಉತ್ಸವದಲ್ಲಿ ಪ್ರದರ್ಶಿಸಿದರು. ಇದೇ ಕಲಾಮೇಳದಲ್ಲಿ , ಸ್ಥಳೀಯ ಸಂಸ್ಥೆ ‘ಭೂಮಿಕಾ’ ಕೂಡ ಭಾಗವಹಿಸಿ ಕರಾವಳಿ ಕರ್ನಾಟಕದ ಕಲೆ ಯಕ್ಷಗಾನವನ್ನು ಪ್ರದರ್ಶಿಸಿತು! ಪ್ರಸಂಗ, ನರಕಾಸುರ ವಧೆ. ಮೆಚ್ಚಬೇಕು ಈ ತಂಡದವರ ಸಾಹಸವನ್ನು!

ಇಂಥದೊಂದು ಅಂತರರಾಷ್ಟ್ರೀಯ ಜನಪದ ಮೇಳದಲ್ಲಿ ಇಪ್ಪತ್ತು ನಿಮಿಷಗಳ ಸ್ಲಾಟ್‌ ಪಡೆದು ಪ್ರದರ್ಶಿಸಿದ ಯಕ್ಷಗಾನ ಚೆನ್ನಾಗಿತ್ತೇ, ಅಮೆರಿಕನ್‌ ಪ್ರೇಕ್ಷಕರಿಗೆ ಕನ್ನಡದ ಈ ಕಲಾಪ್ರಕಾರ ಅರ್ಥವಾಯಿತೇ, ರುಚಿಸಿತೇ ಎಂಬುದಕ್ಕಿಂತಲೂ ಇಂಥದೊಂದು ಪ್ರಯತ್ನ ನ ಡೆಯಿತಲ್ಲಾ ಅದು ಮುಖ್ಯ. ಅಂದರೆ ಯಕ್ಷಗಾನ ಒಳ್ಳೆಯದಾಗಲಿಲ್ಲ ಎಂದಲ್ಲ , ಸಿಕ್ಕಿದ ಇಪ್ಪತ್ತು ನಿಮಿಷಗಳನ್ನು ಸಮರ್ಥವಾಗಿ ಬಳಸಿ ವೇದಿಕೆಯ ಮೇಲೆ ಚಿತ್ತಾಕರ್ಷಕ ಬಣ್ಣದ ಲೋಕ ಸೃಷ್ಟಿಸಿಯೇ ಬಿಟ್ಟರು ನಮ್ಮ ಕಲಾವಿದರು!

ಯಕ್ಷಗಾನದ ತಂಡ :

ನರಕಾಸುರ - ನಾಗರಾಜ್‌ ನೀರ್ಚಲ್‌

ಕೃಷ್ಣ - ಸದಾಶಿವ ದೇವಾಡಿಗ

ದೇವೇಂದ್ರ - ಹರಿಪ್ರಕಾಶ್‌ ಹುಂಚ

ಮುರಾಸುರ - ಮನೋಹರ ಕುಲಕರ್ಣಿ

ಸತ್ಯಭಾಮೆ - ಶಾಂತಿ ತಂತ್ರಿ

ಭಾಗವತಿಕೆ (ಪ್ರಿ-ರೆಕಾರ್ಡೆಡ್‌) - ವೆಂಕಟರಮಣ ಐತಾಳ

ತೆರೆಮರೆಯಲ್ಲಿ ಸಹಾಯ - ಮಹಾಬಲೇಶ್ವರ ಹೆಗಡೆ, ಸಂಜಯ ಉಚ್ಚಿಲ್‌, ಪದ್ಮಪ್ರಿಯಾ, ಉದಯ ತಂತ್ರಿ, ಚೇತನಾ ನೀರ್ಚಲ್‌ ಮತ್ತು ಸುರತ್ಕಲ್‌ ವಾಸುದೇವ ರಾವ್‌ (ಭಾರತದಿಂದ ಸಹಕಾರ)

ಭೂಮಿಕಾದ ಸ್ಟಾಲ್‌ (ಬೂತ್‌) - ಸಂಸ್ಕೃತಿ ಪ್ರದರ್ಶನ ಮತ್ತು ಜನಪದ ಗಾಯನ

ಜನಪದ ಉತ್ಸವದಲ್ಲಿ ಭಾಗವಹಿಸಿದ ತಂಡಗಳೆಲ್ಲ ತಂತಮ್ಮ ಸ್ಟಾಲ್‌ಗಳಲ್ಲಿ ಕಲೆ,ಸಂಸ್ಕೃತಿ, ನೃತ್ಯ, ಸಂಗೀತ, ಚಿತ್ರಗಳ ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನಿಟ್ಟಿದ್ದುವು. ಅಂತೆಯೇ ಭೂಮಿಕಾದ ಸ್ಟಾಲ್‌ ಕೂಡ ಸಮೃದ್ಧವಾಗಿತ್ತು. ರಾಮರಾವ್‌ ನೇತೃತ್ವದಲ್ಲಿ ಕನ್ನಡ ಜನಪದ ಗೀತಗಾಯನ ಕೂಡ ಇತ್ತು. ‘ಮಾತನಾಡಣ್ಣಯ್ಯ ಮಾತನಾಡು...’ ಮತ್ತು ‘ಮೂಡಲ್‌ ಕುಣಿಗಲ್‌ ಕೆರೆ...’ ಇತ್ಯಾದಿ ಹಾಡುಗಳು ಬೂತ್‌ ಸಂದರ್ಶಕರ ಕಿವಿಗೆ ಇಂಪೆನಿಸಿದುವು.

ಗಾಯಕರು - ರಾಮ ರಾವ್‌, ಶೋಭಾ ರಾವ್‌, ಲೀಲಾ ಶ್ರೀನಿವಾಸ್‌

ಕೀ ಬೋರ್ಡ್‌ - ಅಖಿಲ್‌ ರಾವ್‌

ಹಾರ್ಮೋನಿಯಂ - ಅರ್ಪಿತ್‌ ರಾವ್‌

ತಬಲಾ - ಸಂದೇಶ್‌ ಶ್ರೀನಿವಾಸ್‌

ಮೃದಂಗ - ಫಲ್ಗುಣ್‌ ಶ್ರೀನಿವಾಸ್‌

ಭಾರತೀಯ ಸಂಸ್ಕೃತಿ-ಕಲೆಯನ್ನು ವಿದೇಶದಲ್ಲಿ, ಜನಸಾಮಾನ್ಯರ ಹಬ್ಬ-ಉತ್ಸವಗಳಲ್ಲಿ ಪ್ರದರ್ಶಿಸಿ ಪ್ರಚುರಪಡಿಸುವ ಪುಟ್ಟ ಪ್ರಯತ್ನಗಳನ್ನು ಮನಃಪೂರ್ವಕವಾಗಿ ಮಾಡುತ್ತಿರುವ ಭೂಮಿಕಾದಂತಹ ಸಂಸ್ಥೆಗಳ ಸಂಖ್ಯೆ ಹೆಚ್ಚಲಿ. (ನಿರೀಕ್ಷಿಸಿ : ಜನಪದ ಉತ್ಸವದ ಕೆಲವು ದೃಶ್ಯಗಳ ಫೋಟೊ ಆಲ್ಬಂ.)

English summary
Yakshkagana on Bhoomikas platform
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X