‘ಕಾವೇರಿ’ ಅಧ್ಯಕ್ಷರಾಗಿ ಸಂಜಯ್‌ ರಾವ್‌

Kaveri First Couple : Sanjay S Rao and Meena
ಮೂವತ್ತೊಂದು ವರ್ಷಗಳ ಹಿಂದೆ ವಿಮಲಾ ಚೆನ್ನಬಸಪ್ಪ ನೇತೃತ್ವದ ಸಮಿತಿಯ ಮೇಲಿಟ್ಟಿದ್ದ ನಂಬುಕೆಯನ್ನೇ ತಮ್ಮ ಮೇಲೂ ಇಟ್ಟಿರುವುದಕ್ಕಾಗಿ ಕೃತಜ್ಞತೆಗಳು. ತವರಿಂದ ದೂರ ಕಡಲಾಚೆಗೆ ಬಂದಿರುವ ಹಾಗೂ ಅಮೆರಿಕೆಯಲ್ಲೇ ಹುಟ್ಟಿ, ಬೆಳೆದಿರುವ ಕನ್ನಡಿಗರಲ್ಲಿ ಕನ್ನಡ ಮತ್ತು ಸಂಸ್ಕೃತಿಯ ಸೊಗಡನ್ನು ಉಳಿಸಿ, ಬೆಳೆಸಲು ನನ್ನ ನೇತೃತ್ವದ ಸಮಿತಿ ಕೈಮೀರಿ ಯತ್ನಿಸಲಿದೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು!"
'ಕಾವೇರಿ"ಯ ಹೊಸ ಅಧ್ಯಕ್ಷ ಸಂಜಯ್‌ ಎಸ್‌.ರಾವ್‌ ಜವಾಬ್ದಾರಿಗೆ ಎದೆಗೊಡಲು ಹೊರಡುವ ಮುನ್ನ ಆಡಿದ ಮಾತಿದು.

ಡಿಸೆಂಬರ್‌ 14ನೇ ತಾರೀಕು ಸಂಜೆ 5 ಗಂಟೆಗೆ 200ಕ್ಕೂ ಹೆಚ್ಚು ಸದಸ್ಯರ ಸಮ್ಮುಖದಲ್ಲಿ ನಡೆದ 'ಕಾವೇರಿ"ಯ ಸಾಮಾನ್ಯ ಸಭೆಯಲ್ಲಿ ಹೊಸ ಅಧಿಕಾರಿ ಸಮೂಹವನ್ನು ಚುನಾಯಿಸಲಾಯಿತು. ಈವರೆಗೆ ಕಾರ್ಯದರ್ಶಿ ಗಾದಿಯಲ್ಲಿದ್ದ ಮೃತ್ಯುಂಜಯ ಮಹಾಶೆಟ್ಟಿ , 'ಕಾವೇರಿ"ಯ ವಾರ್ಷಿಕ ವರದಿಯನ್ನು ಓದುವುದರೊಂದಿಗೆ ಕಾರ್ಯಕ್ರಮ ಶುರುವಾಯಿತು. ವರ್ಷದಲ್ಲಿ ಸಂಗ್ರಹವಾದ ಮೊತ್ತ, ಆದ ಖರ್ಚು, ನಡೆದ ಕಾರ್ಯಕ್ರಮಗಳು ಮೊದಲಾದ ವಿವರಗಳು ಪುಂಖಾನುಪುಂಖ ಬಿಚ್ಚಿಕೊಂಡವು. ನಂತರ ಮಾತಾಡಿದ ಅಧ್ಯಕ್ಷ ರವಿ ಡೆಂಕಣಿಕೋಟೆ, ಸಮಿತಿಯ ಸರ್ವರೂ ಸೇವೆ ಸಲ್ಲಿಸಲು ಕೊಟ್ಟ ಬೆಂಬಲಕ್ಕಾಗಿ ಧನ್ಯವಾದ ಹೇಳಿದರು. ತಮ್ಮ ಅಧಿಕಾರಾವಧಿಯಲ್ಲಿ 'ಕಾವೇರಿ"ಯ ವೃತ್ತಿಪರತೆ ಹಾಗೂ ಆಡಳಿತ ನಡಾವಳಿಗಳಲ್ಲಿ ಸುಧಾರಣೆ ತಂದಿರುವುದಾಗಿ ಹೇಳಿದ ಡೆಂಕಣಿಕೋಟೆ, ತಾವು ಪರಿಚಯಿಸಿರುವ www.kaveri-usa.org ವೆಬ್‌ಸೈಟನ್ನು ಪ್ರತಿಯಾಬ್ಬ ಸದಸ್ಯರೂ ನೋಡುವಂತೆ ಕೇಳಿಕೊಂಡರು.

2002ನೇ ಇಸವಿಯ ಸಮಿತಿಯ ಕೆಲಸಗಳನ್ನು ನೆರೆದಿದ್ದ ಸದಸ್ಯರು ಶ್ಲಾಘಿಸಿದರು. ಇನ್ನಷ್ಟು ಸುಧಾರಣೆಯ ನಿಟ್ಟಿನಲ್ಲಿ ಪ್ರಶ್ನೆಗಳು, ಸಲಹೆಗಳು ಕೊಡಿ ಅಂದಾಗ, ಜನ ಚುರುಕಾಗಿ ಪ್ರತಿಕ್ರಿಯಿಸಿದರು. ನಂತರ 2003ನೇ ಇಸವಿಯ ಸಮಿತಿಯ ಆಯ್ಕೆ ನಡೆಯಿತು.

ಇದು 'ಕಾವೇರಿ" ಸಮಿತಿ- 2002

ಆಫೀಸ್‌ ಬೇರರ್‌ಗಳು :
ಸಂಜಯ್‌ ಎಸ್‌. ರಾವ್‌- ಅಧ್ಯಕ್ಷ
ಹರೀಶ್‌ ಹಿರೇಮಠ್‌- ಉಪಾಧ್ಯಕ್ಷ
ರಾಮಚಂದ್ರ ರಾವ್‌- ಕಾರ್ಯದರ್ಶಿ
ಕೇಶವ ಪ್ರಸಾದ್‌- ಜಂಟಿ ಕಾರ್ಯದರ್ಶಿ
ನಾಗೇಶ್‌ ಶಿವಸ್ವಾಮಿ- ಖಜಾಂಚಿ
ಕಲ್ಪನಾ ಅನಂತ್‌- ಜಂಟಿ ಖಜಾಂಚಿ

ಕಾರ್ಯಕಾರಿ ಸಮಿತಿ ಸದಸ್ಯರು :
ಆಂಜನೇಯ
ದೇವೇಶ್‌ ಕಂಜರಪಣೆ
ಲಕ್ಷ್ಮಿ ನಾಗರಾಜ್‌
ಸತೀಶ್‌ ಕುಮಾರ್‌ ಹೊಸನಗರ
ತ್ಯಾಗರಾಜ್‌ ಬೆಳಗಾವಿ
ಉಡುಪಿ ಪುರುಷೋತ್ತಮ ರಾವ್‌.

ಯುವ ಸಮಿತಿ :
ಅಖಿಲ್‌ ರಾವ್‌
ಅಂಜಲಿ ಬೋರೆ
ಅಪೂರ್ವ ಅನಂತ್‌
ಅತೀತ್‌ ಹಿರೇಮಠ್‌
ನಿತಿನ್‌ ನಾಗೇಶ್‌.

ಮೂವತ್ತೊಂದನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಜಯ್‌ ರಾವ್‌, ಕರ್ನಾಟಕ ಹಾಗೂ ಅಮೆರಿಕಾದ ಬಡ ಬಾಂಧವರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ಕೊಡಲು ದೇಣಿಗೆ ಸಂಗ್ರಹಣೆಗೂ ಒತ್ತು ಕೊಡುವುದಾಗಿ ಹೇಳಿದರು. ಸಾಫ್ಟ್‌ವೇರ್‌ ಎಂಜಿನಿಯರುಗಳು, ವೈದ್ಯರು, ಮಿಲಿಟರಿ ಅಧಿಕಾರಿ- ಹೀಗೆ ಬಗೆಬಗೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಮಿತಿಯ ಅನುಭವಿ ಸದಸ್ಯರು ಹಾಗೂ ಸ್ವಯಂ ಸೇವಕರನ್ನು ಸಂಜಯ ರಾವ್‌ ಸಭೆಯಲ್ಲಿ ಪರಿಚಯಿಸಿದರು.

ಸಂಜಯ ರಾವ್‌ ತಮ್ಮ ಮಾತು ಮುಗಿಸಿದ್ದು - 'ಕನ್ನಡನಾಡಲ್ಲಿ ಕಾವೇರಿ ಜೀವನದಿ ಆದರೆ, ಇಲ್ಲಿ ಅದು ಭಾವ ನದಿ" ಎನ್ನುವ ಶ್ರೀವತ್ಸ ಜೋಶಿಯವರ ಮಾತನ್ನು ನೆನಪಿಸಿಕೊಂಡು, ಈ ಭಾವ ನದಿಯಲ್ಲಿ ಮಿಂದು ಕನ್ನಡ ಡಿಂಡಿಮವನ್ನು ಮೊಳಗಿಸೋಣ ಎಂದು ಕಾವೇರಿ ಬಳಗದ ಗೆಳೆಯರಿಗೆ ಕರೆ ನೀಡಿದರು.

ತಣ್ಣಗಿನ ಚುನಾವಣೆಗೆ ಬಂದವರಿಗೆ ಹಸನಾದ ಉದರ ಸೇವೆಯೂ ಆಯಿತು. ರಾಜಶೇಖರ ದೊಡ್ಡಣ್ಣ ನೇತೃತ್ವದಲ್ಲಿ ಸ್ವಯಂ ಸೇವಕರು ರುಚಿಯಾದ ಅಡುಗೆ ಮಾಡಿದ್ದರು. ಊಟದ ಹದದ ಮಜಾ ಅನುಭವಿಸಿದ ಸದಸ್ಯರಿಗೆ 'ಮೈಸೂರು ಮಲ್ಲಿಗೆ" ಚಿತ್ರವನ್ನು ತೋರುವ ಮೂಲಕ ಮನರಂಜನೆಯ ಮುದವೂ ದಕ್ಕಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+