ಸಾಹಿತ್ಯಗೋಷ್ಠಿಯ ಮುಂದಿನ ಕಾರ್ಯಕ್ರಮದಲ್ಲಿ ಭೈರಪ್ಪ, ದಾಸಸಾಹಿತ್ಯ

ಭೈರಪ್ಪನವರ ಕಾದಂಬರಿಗಳನ್ನು ಓದಲು ಶುರುಹಚ್ಚಿಕೊಳ್ಳುವುದಷ್ಟೇ ಓದುಗನ ಜವಾಬ್ದಾರಿ. ಕಾದಂಬರಿಯೇ ಓದಿಸಿಕೊಂಡು ಹೋಗುತ್ತದೆ. ಕಾರು ಫ್ರೀವೇಗೆ ಬರುವುದಷ್ಟೇ ಬಾಕಿ. ಒಮ್ಮೆ ಬಂದರೆ ಎಲ್ಲಿಯತನಕವೂ ಸುಲಭ ದಾರಿ ! ಅವರ ಕಾದಂಬರಿಗಳಲ್ಲಿ ಬರುವ ಕಥೆಯ ಹಂದರ, ತತ್ವ, ಜಿಜ್ಞಾಸೆ, ತರ್ಕ... ಹೀಗೆ ಕಥೆ ಓದುಗನ ಆಸಕ್ತಿಯನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಮುಖ್ಯ ಸಂಗತಿ ಎಂದರೆ ನೀವು ಅವರ ಕಾದಂಬರಿಗಳನ್ನು ಓದಬೇಕು, ಪುರುಸೊತ್ತು ಮಾಡಿಕೊಂಡು!

ಭೈರಪ್ಪನವರ ಕಾದಂಬರಿಗಳು ಜ್ಞಾಪಕ ಬರುವುದಕ್ಕೆ ಕಾರಣ ವಿಶ್ವನಾಥ್‌ ಹುಲಿಕಲ್‌. ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯ ಗೋಷ್ಠಿ ಬರಲಿರುವ ಕಾರ್ಯಕ್ರಮದಲ್ಲಿ ‘ ಜಲಪಾತ ಒಂದು ವಿಮರ್ಶೆ ’ ಹಾಗೂ ‘ದಾಸ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳು’ ಎಂಬ ಎರಡು ವಿಷಯಗಳ ಬಗ್ಗೆ ಸಂವಾದ ಏರ್ಪಡಿಸಿದೆ.

ಜಲಪಾತ ಕಾದಂಬರಿಯ ಬಗ್ಗೆ ವಿಮರ್ಶೆ ಮಾಡುವವರು ಗಣೇಶ್‌ ಕಡಬ. ದಾಸ ಸಾಹಿತ್ಯದ ಬಗ್ಗೆ ಮಾತನಾಡುವವರು Swara Raaga Sensitive Percussion ಖ್ಯಾತಿಯ ಡಾ. ಕೆ.ಆರ್‌. ಎಸ್‌. ಮೂರ್ತಿ. ಪದ್ಮನಾಭ ರಾವ್‌ ಅವರಿಂದ ಕಾರ್ಯಕ್ರಮ ನಿರ್ವಹಣೆ. ಅನ್ನಪೂರ್ಣ ವಿಶ್ವನಾಥ್‌ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಆರಂಭವಾಗುವುದು.

ಅಂದ ಹಾಗೆ ಕಾರ್ಯಕ್ರಮ ನಡೆಯುವುದು ಅಕ್ಟೋಬರ್‌ 20ರಂದು ಸನಿವೇಲ್‌ನಲ್ಲಿ. (Wildwood Manor Apartments Party Hall, 260 N Mathilda Avenue, Sunnyvale CA 94086) ಅ. 20ರ ಭಾನುವಾರ ಬೆಳಗ್ಗೆ ಹತ್ತು ಗಂಟೆಯಿಂದ 12. 30ರವರೆಗೆ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ವಿಶ್ವನಾಥ್‌ ಹುಲಿಕಲ್‌ರನ್ನು ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+