ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಾಲಿಬು’ಗೆ ಗಂಧರ್ವನೊಂದಿಗೆ ಬಂದ ವಸಂತ

By Staff
|
Google Oneindia Kannada News

ಮಾಲಿಬು : ಮೇ 5 ರಂದು ಮಾಲಿಬು ನಗರದ ಹಿಂದೂ ದೇವಾಲಯದಲ್ಲಿ ವಸಂತೋತ್ಸವದ ಹರ್ಷ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ ವಸಂತ ಹಬ್ಬ. ಆ ಸಂಗೀತಮಯ ಕಾರ್ಯಕ್ರಮಕ್ಕೆ ರಂಗೇರಿಸಿದ್ದು ಯಾರೆಂದು ಗುರುತಿಸುವುದು ಕಷ್ಟ.

ಚಲನ್‌ ಸಂಗೀತ ಶಾಲೆಯ ಮಕ್ಕಳು ಸುದರ್ಶನ್‌ ಅವರ ಮಾರ್ಗದರ್ಶನದಲ್ಲಿ ಅಚ್ಚ ಕನ್ನಡದ ಸಾಲು ಸಂಗೀತ ಉಣಿಸಿದರು. ತೆಂಕಣ ನಾಡಿನ ಕನ್ನಡ ಕಲಿ ಶಾಲೆಯ ಮಕ್ಕಳ ಹಾಡುಗಳ ಜೊತೆಗೆ ಶರಣ ಸಾಹಿತ್ಯ ಪ್ರೇಮಿಗಳು ವಚನಗಳ ಗಾನದನಿಯ ಜೊತೆಯಾಗಿಸಿದರು. ಮತ್ತೊಂದು ಗುಂಪು ವಸಂತನ ರಾಗ-ರಂಗ ಮಾಲಿಕೆಯ ರಿಂಗಣ. ಎಲ್ಲ ಉತ್ಸಾಹಗಳ ಪೋಣಿಸಿದ್ದು ಸ್ಯಾನ್‌ ಡಿಯೆಗೋದ ಡಾ. ಚಂದ್ರಶೇಖರ್‌ ಐತಾಳ.

ಸರೋದ್‌ ಮಾಂತ್ರಿಕ ರಾಜೀವ ತಾರಾನಾಥ್‌ರಿಗೆ ಸನ್ಮಾನ

ಎಲ್ಲರೂ ಕಲೆತಾಗಲೇ ಹಬ್ಬವಲ್ವೇ ? ಅಂದೇ ತಾಯಿ ದಿನವನ್ನೂ ಆಚರಿಸಲಾಯಿತು. ದಿನದ ಮಹತ್ವದ ಬಗ್ಗೆ ಹಿರಿಯ ನುಡಿ ಆಡಿದವರು ವಿಶ್ವೇಶ್ವರ ದೀಕ್ಷಿತರು. ವರಕವಿ ಬೇಂದ್ರೆಯವರ ಪದ್ಯವನ್ನು ವಾಚಿಸುತ್ತ- ವಿಶ್ವ ಮಾತೆ, ಭೂಮಿ ತಾಯಿ, ಭಾರತ ಮಾತೆ, ಕನ್ನಡತಾಯಿ ಮತ್ತು ಜೀವದಾಯಿಯನ್ನು ಗೌರವಿಸಿದರು. ಅಲ್ಲಿ ಸೇರಿದ್ದ ಮಕ್ಕಳೆಲ್ಲರೂ ಅಮ್ಮಂದಿರಿಗೆ ಹೂವಿತ್ತು ಅಭಿನಂದಿಸಿದರು.

ಸಮಾರಂಭ ದೊಡ್ಡದು. ಭಾರತೀಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಸರೋದ್‌ ವಿಶಾರದ, ಪಂಡಿತ್‌ ರಾಜೀವ ತಾರಾನಾಥ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮತ್ತೆ ಅವರೊಂದಿಗೆ ಸಂದರ್ಶನ. ರಾಜೀವ ತಾರಾನಾಥರು ಕರ್ನಾಟಕದ ಮತ್ತು ಇಲ್ಲಿನ ಸಂಗೀತ ವಾತಾವರಣದ ವ್ಯತ್ಯಾಸಗಳ ಬಗ್ಗೆ ಮಾತನಾಡಿದರು. ಸಂಗೀತ ಕಲಿಯಲು ಪ್ರಯತ್ನ ಮುಖ್ಯವೇ ಹೊರತು ಪ್ರದೇಶವಲ್ಲ ಎಂದರು.

ವಸಂತೋತ್ಸವಕ್ಕೆ ಧಾರ್ಮಿಕ ಕಳೆ

ನಂತರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಸ್ಥಿತಿಗತಿಯನ್ನು ವಿವರಿಸಲಾಯಿತು. ಜಗನ್ನಾಥ ಶಂಖಂ ಕಾರ್ಯದರ್ಶಿ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಅಮೃತ ಬಸವಪಟ್ಟಣ ಸಂಪಾದಿಸಿದ ‘ಸಂಗಮ’ ಮ್ಯಾಗಜಿನ್‌ ಬಿಡುಗಡೆ ಮಾಡಲಾಯಿತು.

ಎಲ್ಲರೂ ಕಾಯುತ್ತಿದ್ದ ಹರಿಕತೆ ಕಾರ್ಯಕ್ರಮವನ್ನು ಭದ್ರಗಿರಿ ಸರ್ವೋತ್ತಮ ದಾಸರು ಚೆಂದಾಗಿ ನಡೆಸಿಕೊಟ್ಟರು. ರಾಮ-ಸೀತಾ ಕಲ್ಯಾಣ ಕತೆಯನ್ನು ದೇಶ ಕಾಲಗಳಿಗೆ ಅನ್ವಯಿಸಿ ಎಲ್ಲರ ಮನಮುಟ್ಟುವಂತೆ ಹೇಳಿದರು. ಸರ್ವೋತ್ತಮ ದಾಸರು ವಸಂತೋತ್ಸವಕ್ಕೆ ಧಾರ್ಮಿಕ ಕಳೆ ತಂದವರು. ಅವರೊಂದಿಗೆ ಡಾ. ಚಂದ್ರಶೇಖರ ಐತಾಳ ಮತ್ತು ಡಾ. ನೀಲಕಂಠ ಗುಂಡಪ್ಪ ಅವರು ಹಾರ್ಮೋನಿಯಂ ಮತ್ತು ಮೃದಂಗ ನುಡಿಸಿದರು.

ಕೊನೆಯದಾಗಿ ಊಟ. ಅಕ್ಕರೆಯ ಹೆಚ್ಚು ಬೆರೆಸಿ ಪ್ರೇಮಾ ನಾಗರಾಜ ಅವರ ನೇತೃತ್ವದಲ್ಲಿ ತಯಾರಾದ ಮನೆ ಊಟ ಬಂದವರ ಹಸಿವು ತಣಿಸಿದೆ ಅಂತ ಬೇರೆ ಹೇಳಬೇಕೇ ?

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X