ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವೇಕಾನಂದ ಮೂವ್‌ಮೆಂಟ್‌ ಬಗ್ಗೆ ಭಾಷಣ

By Staff
|
Google Oneindia Kannada News

ಫುಲ್ಲರ್‌ಟನ್‌ : ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌(ಎಸ್‌ವಿವೈಎಂ)ಅಧ್ಯಕ್ಷ ಡಾ. ಬಾಲಸುಬ್ರಹ್ಮಣ್ಯಂ ಅವರು ಅಮೆರಿಕಾಕ್ಕೆ ಆಗಮಿಸಲಿದ್ದು, ಸಂಸ್ಥೆಯ ಆಗು ಹೋಗುಗಳು, ನಡೆದು ಬಂದ ದಾರಿಯ ಬಗ್ಗೆ ಸೆಪ್ಟೆಂಬರ್‌ 23ರಂದು ಭಾಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಮೆರಿಕಾದ ಫ್ಲೋರಿಡಾ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಏಯ್ಡ್ಸ್‌ ತಡೆಗಟ್ಟುವ ತರಬೇತಿ ಕಾರ್ಯಾಗಾರಕ್ಕೆ ಆಗಮಿಸಲಿರುವ ಬಾಲಸುಬ್ರಹ್ಮಣ್ಯಂ ಜೊತೆ ಬಿಂದು ಬಾಲಸುಬ್ರಹ್ಮಣ್ಯಂ ಕೂಡ ಬರುತ್ತಾರೆ. ಸಂಜೆ 4.30ಕ್ಕೆ ಆರಂಭವಾಗುವ ಕಾರ್ಯಕ್ರಮ ನಡೆಯುವುದು ಪಾರ್ಕ್‌ ಹರ್ಸ್ಟ್‌ ಕಮ್ಯೂನಿಟಿ ಸೆಂಟರ್‌ನಲ್ಲಿ (Park Hurst Community Center 2832 Alderberry Ct., Fullerton, CA 92835). ಕಾರ್ಯಕ್ರಮದ ನಂತರ ರಾತ್ರಿ ಊಟವಿರುತ್ತದೆ.

ಹಸಿವು ಮತ್ತು ಅಜ್ಞಾನದಿಂದ ಮಿಲಿಯಗಟ್ಟಲೆ ಮಂದಿ ಸಾಯುವಾಗಲೂ ಹೊಟ್ಟೆ ತುಂಬಿಸಿಕೊಂಡು, ಕೈತುಂಬ ಕಾಸಿಟ್ಟುಕೊಂಡು ಚಿಕ್ಕಾಸೂ ಕೊಡದಿರುವವನು ದೇಶದ್ರೋಹಿ ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ನೆನೆಸಿಕೊಳ್ಳುತ್ತಾ , ಸಂಸ್ಥೆಯು ಆರ್ಥಿಕ ಸಹಾಯವನ್ನೂ ಯಾಚಿಸುತ್ತಿದೆ. ಕಾರ್ಯಕ್ರಮಕ್ಕೆ ಬರುವವರು ಮಕ್ಕಳನ್ನು ಕರೆದುಕೊಂಡು ಬಂದರೆ ಉತ್ತಮ. ವಿವೇಕಾನಂದರ ವಿಚಾರ ಧಾರೆ ಈಗಿನ ಯುವಕರನ್ನು ತಲುಪುವುದು ಅತ್ಯಗತ್ಯ ಎಂದು ಬಾಲಸುಬ್ರಹ್ಮಣ್ಯ ಹೇಳುತ್ತಾರೆ.

ಸಂಸ್ಥೆಗೆ ಆರ್ಥಿಕ ಸಹಾಯ ಮಾಡುವವರು, ಕಾರ್ಯಕ್ರಮದ ಬಗ್ಗೆ ಹೆಚ್ಚು ತಿಳಿದುಕೊಳ್ಳಲಿಚ್ಚಿಸುವವರು ಈ ಫೋನ್‌ ನಂಬರ್‌ಗಳಿಗೆ ಫೋನ್‌ ಮಾಡಬಹುದು. ನಂದಿನಿ - 714-674-0105; 714-774-2638; 213-486-4927 ಈ- ಮೇಯ್ಲ್‌ ವಿಳಾಸ :[email protected]

ಮೈಸೂರಿನ ಕೆಂಚೇನ ಹಳ್ಳಿ ಮೂಲದ ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ ಧಾರ್ಮಿಕ ಮತ್ತು ರಾಜಕೀಯ ಸೆಳಕಿನಿಂದ ದೂರವಿದ್ದು ಕೆಲಸ ನಿರ್ವಹಿಸುವ ಸಂಸ್ಥೆ. ಮೈಸೂರು ಮೆಡಿಕಲ್‌ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳಿಂದ ಆರಂಭವಾದ ಎಸ್‌ವಿವೈಎಂ, ಗುಡ್ಡಗಾಡು ಜನರ ಏಳ್ಗೆಯನ್ನು ಮುಖ್ಯ ಉದ್ದೇಶವನ್ನಾಗಿರಿಸಿಕೊಂಡಿದೆ. ಬ್ರಹ್ಮಗಿರಿಯ ಬೆಟ್ಟದ ನಿವಾಸಿಗಳಿಗಾಗಿ 1987ರಲ್ಲಿ ಸಣ್ಣ ಕ್ಲಿನಿಕ್‌ ಒಂದು ಆರಂಭವಾಗುವುದರೊಂದಿಗೆ ಸಮಾಜ ಉಪಯೋಗಿ ಕೆಲಸ ಆರಂಭವಾಯಿತು. ಹೀಗೆ ಬೆಳೆದ ಸಂಸ್ಥೆಗೆ 1991-92ರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ದೊರಕಿತ್ತು.

ಕಾರ್ಯಕ್ರಮ ನಡೆವ ಸ್ಥಳಕ್ಕೆ ದಾರಿ ಇಲ್ಲಿದೆ

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X