ಶಂಕರ ನೇತ್ರಾಲಯದಿಂದ ಸಂಗೀತಸಂಜೆ
ವಾಷಿಂಗ್ಟನ್ ಡಿಸಿ : ಜಗತ್ತಿನ ಪ್ರತಿ ಮೂರು ಮಂದಿ ಕುರುಡರ ಪೈಕಿ ಮೂರನೆಯವನು ಭಾರತೀಯನಾಗಿರುತ್ತಾನೆ ಅಂದರೆ ನಂಬುತ್ತೀರಾ ? ಈ ಭೀಕರ ಸತ್ಯವನ್ನು ಅರಗಿಸಿಕೊಂಡು ಅಂಧತ್ವ ನಿವಾರಣೆಗಾಗಿ ಹೋರಾಡುತ್ತಿರುವ ಚೆನ್ನೈ ಮೂಲದ ಶಂಕರ ನೇತ್ರಾಲ ಏಪ್ರಿಲ್ 22ರ ಭಾನುವಾರ ಸಂಗೀತ ಸಂಜೆಯಾಂದನ್ನು ಹಮ್ಮಿಕೊಂಡಿದೆ.
ನೂರ್ ಮಹಲ್ ಬ್ಯಾಂಕ್ವೆಟ್ ಹಾಲ್(10418 Main Street, Fairfax, VA 22030)ನಲ್ಲಿ ಸಂಜೆ ಐದು ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ. ಟಿಕೇಟು 35 ಡಾಲರಿನದು . ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಟಿಕೇಟು ಖರೀದಿಸಬೇಕೆಂದಿಲ್ಲ. ಶಂಕರ ನೇತ್ರಾಲಯದ ಸ್ಥಾಪಕ ಎಸ್. ಎಸ್. ಬದ್ರಿನಾಥ್ ಸಂಗೀತ ಸಂಜೆಯಲ್ಲಿ ನಿಮ್ಮೊಂದಿಗಿರುತ್ತಾರೆ.
ಟಿಕೇಟಿನ ಬಗ್ಗೆ, ಅಥವಾ ಅಂಧತ್ವ ನಿವಾರಣೆಗೆ ಶ್ರಮಿಸುತ್ತಿರುವ ಶಂಕರ ನೇತ್ರಾಲಯದ ಬಗ್ಗೆ ಏನೇ ಮಾಹಿತಿ ಬೇಕಿದ್ದರೂ, ಈ ಆರು ಮಂದಿಯನ್ನು ನೀವು ಸಂಪರ್ಕಿಸಬಹುದು. ಡಾ. ಶಿವ ಸುಬ್ರಹ್ಮಣ್ಯಂ (301- 9839699) ಎಸ್. ಕೃಷ್ಣ ಮೂರ್ತಿ(301- 9830799), ಚಂದ್ರ ಬಪ್ಪನಾಡ್(301- 2582831), ರಾಮ್ ಪಾಟ್ಟಿ (410- 8602537), ಪೃಥ್ವಿ ರಾಜ್‌ರಾವ್ (301- 5287863), ಎಸ್. ವಿ. ಆಚಾರ್ಯ(301- 2510378)
ಶಂಕರ ನೇತ್ರಾಲಯ ಭಾರತದ ಚೆನ್ನೈ ಮೂಲದ ಕಣ್ಣಿನ ಆಸ್ಪತ್ರೆ. 2000ನೇ ಸಾಲಿನಲ್ಲಿ ಒಂಬತ್ತು ಸಾವಿರ ಮಂದಿಗೆ ದೃಷ್ಠಿ ಮರುಕಳಿಸುವ ಸರ್ಜರಿಯನ್ನು ಯಶಸ್ವಿಯಾಗಿ ಇಲ್ಲಿನ ವೈದ್ಯರು ಮಾಡಿದ್ದಾರೆ. ಬಡವರಿಗೆ ಕಣ್ಣಿನ ಚಿಕಿತ್ಸೆಯನ್ನು ಶಂಕರ ನೇತ್ರಾಲಯದಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಶಂಕರ ನೇತ್ರಾಲಯದ ಬಗ್ಗೆ ಇನ್ನಷ್ಟು ಓದಬೇಕಿದ್ದರೆ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications