ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್ಟನ್‌ ಸಹೃದಯರೇನಿಮಗಿದೋ ಲಯ ಲಹರಿ

By Staff
|
Google Oneindia Kannada News

ಪಿಟೀಲಿನ ಮೆಲ್ಲನೆಯ ಹೃದ್ಯ ದನಿ. ಲಯಕ್ಕೆ ಪಕ್ಕ ವಾದ್ಯಗಳು. ಕೊಂಚ ಸಮಯದ ನಂತರ ನಾಧಿಡ್‌ ಧಿನ್ನ ನಾಧಿಡ್‌ ಧಿನ್ನ... ಧಿತ್ತದಿಗಿಡ ತೋಂ... ತಬಲಾ, ಮೃದಂಗ, ಕಂಜಿರ ಎಲ್ಲಾ ಅಬ್ಬರದ ದನಿ ಹೊಮ್ಮಿಸಬಲ್ಲ ವಾದ್ಯಗಳೇ. ತಾಳಕ್ಕೆ ಹೆಜ್ಜೆ ಹಾಕೋ ಹಸಿರೆದೆಯ ಜನರ ಮನ ತಣಿಸಲು ಇಂಥಾ ಒಂದು ಅಪರೂಪದ ‘ಸಂಗೀತ ಘಟ್ಟಿ’ ಸಂಜೆ ಏರ್ಪಾಡಾಗಿದೆ. ಇಲ್ಲಿ ಯಾರೂ ಹಾಡೋದಿಲ್ಲ. ಸಂಗೀತ ವಾದ್ಯಗಳೇ ಹಾಡಿನ ಲಹರಿಯನ್ನು ಹೊಮ್ಮಿಸಲಿವೆ. ಮತ್ತೊಂದು ವಿಶೇಷ ಏನು ಗೊತ್ತೆ? ಪಾಶ್ಚಿಮಾತ್ಯ ಸಂಗೀತ ವಾದ್ಯಗಳಾದ ಡ್ರಂಗಳೂ ಕರ್ನಾಟಕ ಸಂಗೀತ ವಾದ್ಯಗಳೊಡನೆ ಸೇರಿ, ಉಲಿಯಲಿವೆ !

ಈ ಅಪರೂಪದ ಸಂಗೀತದೌತಣ ಏರ್ಪಾಟಾಗಿರುವುದು ಜೂನ್‌ 1ರ ಶುಕ್ರವಾರ ಸಂಜೆ 8 ಗಂಟೆಗೆ. ಏರ್ಪಾಟು ಮಾಡಿರುವುದು ನಾದತರಂಗಿಣಿ ಅಂಡ್‌ ವಾಷಿಂಗ್ಟನ್‌ ಕನ್ಸರ್ವೇಟರಿ ಆಫ್‌ ಮ್ಯೂಸಿಕ್‌. ಕಾರ್ಯಕ್ರಮ ಇಲ್ಲಿ ನಡೆಯುತ್ತದೆ- ವಾಷಿಂಗ್ಟನ್‌ ಕನ್ಸರ್ವೇಟರಿ ಮ್ಯೂಸಿಕ್‌, 5144, ಮೆಸಾಚ್ಯುಸೆಟ್ಸ್‌ ಅವೆನ್ಯು, ಬೆಥೆಸ್ಡ, ಎಂಡಿ 20816.

ವಾದ್ಯಗಳಿಂದ ಸಂಗೀತ ಹೊಮ್ಮಿಸುವವರು...
ಪಿಟೀಲು- ಕೆ.ಎಸ್‌.ಮಣಿ ಹಾಗೂ ರಾಧಿಕಾ ಮಣಿ
ಮೃದಂಗ- ಅನೂರ್‌ ದತ್ತಾತ್ರೇಯ ಶರ್ಮ
ಪಕ್ಕವಾದ್ಯ- ಶ್ರೀನಾಥ್‌ ಬಾಲಸುಬ್ರಹ್ಮಣ್ಯಂ
ಕಂಜಿರ- ಸುಧೀಂದ್ರ ರಾವ್‌
ಘಟ- ರುದ್ರಪಟ್ನಂ ಸತ್ಯಕುಮಾರ್‌
ಡೋಲು- ಎ.ವಿ.ಕಾಶೀನಾಥ್‌
ತಬಲ- ತಿರುಮಲೆ ಶ್ರೀನಿವಾಸ್‌
ಪಾಶ್ಚಾತ್ಯ ಡ್ರಂಗಳು- ಗೌತಮ್‌ ಶ್ರೀರಾಮ್‌

ಮತ್ತೊಂದು ಮಾತು. ನೀವು ಈ ಕಾರ್ಯಕ್ರಮಕ್ಕೆ ಚಿಕ್ಕಾಸೂ ತೆರಬೇಕಿಲ್ಲ. ಇದು ಸಹೃದಯರಿಗೆ ಮುಫತ್‌ ಮನರಂಜನೆ. ಇನ್ನೂ ಏನಾದರೂ ಅನುಮಾನ ಇದ್ದರೆ ನಾದತರಂಗಿಣಿಯನ್ನು 301-924-2651 ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಿ. ತೆರಿಗೆ ಕಡಿತವಾಗಬಲ್ಲ ಸ್ವಯಂ ದೇಣಿಗೆ ಕೊಡಲು ಮುಂದೆ ಬರುವವರಿಗೂ ಎಸ್‌ಎಸ್‌ವಿಟಿ ಸ್ವಾಗತವಿದೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X