ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲಾಚೆಗಿನ ತೆರೆಗೆ ಕಡಲ ತಟದ ಮುನ್ನುಡಿ, ನೀವೂ ನೋಡಿಬಿಡಿ

By Staff
|
Google Oneindia Kannada News

ಕಡಲ ತಡಿಗಳು ಮರಳ ಹಲಗೆಯ ಮೇಲೆ ಬರೆದಿವೆ ಮುನ್ನುಡಿ
ಒಡಲ ನೋವಿನ ಚಿತ್ರ ರೂಪಕ ತೆರೆದ ಮನಸಿನ ಕನ್ನಡಿ...

Chirag-Entertainers to show Munnudi in USಬೊಳುವಾರು ಮೊಹಮ್ಮದ್‌ ಕುಂಞ್ಞ ಅವರ ‘ಮುತ್ತುಚ್ಚೇರ’ ಸಣ್ಣ ಕತೆಯನ್ನು ಅಚ್ಚುಕಟ್ಟಾದ ಸಿನಿಮಾ ಆಗಿಸಿದ ಪಿ.ಶೇಷಾದ್ರಿ ನಿರ್ದೇಶನದ ಚಿತ್ರ ಮುನ್ನುಡಿ ಅಮೆರಿಕೆಗೆ ಬರಲಿದೆ. ಇಂಥಾ ಅಪರೂಪದ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳ ಕೊಳ್ಳೆ ಹೊಡೆದಿರುವ ಚಿತ್ರವನ್ನು ಅಮೆರಿಕನ್ನಡಿಗರ ಬಳಿಗೆ ತಂದಿರುವ ಚಿರಾಗ್‌ ಎಂಟರ್‌ಟೇನರ್ಸ್‌ ಡಾಟ್‌ ಕಾಂನ ಪ್ರಸಾದ್‌ ಅವರಿಗೆ ಧನ್ಯವಾದ.

ಫೆಬ್ರವರಿ 8, ಶುಕ್ರವಾರ (ರಾತ್ರಿ 9.30ಕ್ಕೆ) ಮತ್ತು ಫೆ.9, ಶನಿವಾರ (ರಾತ್ರಿ 8.30ಕ್ಕೆ) Naz 8 Cinemas, Fremont Blvd. Fremont, CA 94536 ನಲ್ಲಿ ಈ ಚಿತ್ರ ನೋಡುವ ಅವಕಾಶ.

ಸಂಕ್ಷಿಪ್ತ ಕಥಾ ಸಾರ : ದಕ್ಷಿಣ ಕನ್ನಡದ ಬ್ಯಾರಿಗಳ ಊರು. ಕಡುಬಡತನ. ಬೀಡಿ ಕಟ್ಟುವ ಕಸುಬು ಹೊಟ್ಟೆಗೆ ಕೊಟ್ಟರೆ ಬಟ್ಟೆಗೆ ಕೊಡದು. ಈ ಕಾರಣಕ್ಕೇ ನಿಖಾ ಇಲ್ಲಿ ಸಾಮಾನ್ಯ. ವ್ಯಾಪಾರಕ್ಕೆ ಬರುವ ಅರಬ್ಬಿಗಳಿಗೆ ಸಾಥಿ ಬೇಕು. ಅದಕ್ಕೆ ಅವರಿರುವವರೆಗೆ ನಿಖಾ ಜಾರಿ. ಆಮೇಲೆ ತಲಾಖು. ತಲಾಖು ಕೊಡದಿದ್ದರೆ? ಜೀವನವಿಡೀ ಅವನ ಬರುವಿಕೆಗೆ ಇದಿರು. ತಂದೆ ಇಲ್ಲದ ಮಗಳೂ ಬೆಳೆಯುತ್ತಾಳೆ. ಅವಳನ್ನು ನಿಖಾ ಆಗುವವರಾರು? ಆಕೆಯೂ ಅರಬ್ಬರ ಪಾಲಾಗಬೇಕೆ?! ಈ ತಿರುಳಿನ ಚಿತ್ರ ವಿರೋಧದ ದನಿಯಾಂದಿಗೆ ಮುಗಿಯುತ್ತದೆ. ತಾರಾ, ಛಾಯಾ ಸಿಂಗ್‌, ದತ್ತಣ್ಣ, ಶಶಿಕುಮಾರ್‌ ತಾರಾಗಣವಿದೆ. ಪಿ.ಶೇಷಾದ್ರಿ ನಿರ್ದೇಶನ, ವಿ.ಮನೋಹರ್‌ ಸಂಗೀತವಿದೆ. ಗೀತೆಗಳು- ಸಂಭಾಷಣೆ : ಬೊಳುವಾರು ಮೊಹಮ್ಮದ್‌ ಕುಂಞ್ಞ.

ಚೆನ್ನಾಗಿರುವ ಹೆಂಡ್ತಿ, ಪ್ರೀತಿಯ ಹುಡುಗಿಯೂ ಉಂಟು

ಅದಕ್ಕೂ ಮುನ್ನ ಫೆಬ್ರವರಿ 3, ಭಾನುವಾರ ಮಧ್ಯಾಹ್ನ 2.30ಕ್ಕೆ ದಿನೇಶ್‌ ಬಾಬು ನಿರ್ದೇಶನದ ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ ಚಿತ್ರ ಪ್ರದರ್ಶನವಿದೆ. ಸ್ಥಳ : Grand Marquee Cinema, Charleston, WV. ಸುಂದರನಲ್ಲದ ಗಂಡನನ್ನು ಜರೆಯುವ ಹೆಂಡತಿ. ಆ ಪೀಕಲಾಟದಿಂದ ಪಾರಾಗಲು ಬಾಸ್‌ ನೆರವನ್ನು ಪಡೆಯುವ ಗಂಡ. ಅವನ ಸಂಶಯ. ಎಡಬಿಡಂಗಿತನಗಳ ಕಾಮಿಡಿಯೇ ಈ ಚಿತ್ರದ ತಿರುಳು. ಅನಂತ ನಾಗ್‌, ಕಾಶಿ, ವಿಷ್ಣುವರ್ಧನ್‌, ರಮೇಶ್‌ ಅಭಿನಯವಿದೆ. ಸಂಗೀತ : ರಾಜೇಶ್‌ ರಾಮನಾಥ್‌.

ನಿಲ್ಲಿ, ಇನ್ನೂ ಮುಗಿದಿಲ್ಲ...
ಫೆಬ್ರವರಿ 9, ಶನಿವಾರ ರಾತ್ರಿ ಮುನ್ನುಡಿ ಪ್ರದರ್ಶನವಿದ್ದರೆ, ಅದೇ ದಿನ ಮಧ್ಯಾಹ್ನ 1.00 ಗಂಟೆಗೆ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ನನ್ನ ಪ್ರೀತಿಯ ಹುಡುಗಿ ಚಿತ್ರ ಪ್ರದರ್ಶನವಿದೆ. ಮೊನ್ನೆಯಷ್ಟೇ ಸಂಕ್ರಾಂತಿ ಉಡುಗೊರೆಯಾಗಿ ‘ಕಾವೇರಿ’ಈ ಚಿತ್ರ ಪ್ರದರ್ಶನವನ್ನು ಆಯೋಜಿಸಿತ್ತು. ಮನೋಮೂರ್ತಿ ಸಂಗೀತ ನಿರ್ದೇಶನದ ನಂಬರ್‌ ಒನ್‌ ಹಾಡು ಕಾರ್‌ ಕಾರ್‌, ನಮ್ಮೂರಿನ ಅಮೆರಿಕ ಹುಡುಗಿ ದೀಪಾಲಿ, ಹೊಸ ಮುಖ ಧ್ಯಾನ್‌, ಸುರೇಶ್‌ ಹೆಬ್ಳೀಕರ್‌ ಮೊದಲಾದವರ ತಾರಾಗಣವಿದೆ.

ಟಿಕೇಟು ವಗೈರೆ ವಿವರಗಳಿಗೆ ಕ್ಲಿಕ್ಕಿಸಿ- ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X