‘ಕಾವೇರಿಕನ್ನಡ ಸಂಘ’ದ ಔತಣಕೂಟದಲ್ಲಿ ಎಲ್ಲರೊಳಗೊಂದಾದ ಎಚ್.ಡಿ. ದೇವೇಗೌಡರು
ವಾಷಿಂಗ್ಟನ್ ಡಿಸಿ : ಕನ್ನಡ ಸಂಸ್ಕೃತಿಯನ್ನು ದೂರದ ಅಮೇರಿಕಾದಲ್ಲಿ ಮರು ಸೃಷ್ಟಿಸುತ್ತಿರುವ ಇಲ್ಲಿ ನ ಅನಿವಾಸಿ ಕನ್ನಡಿಗರನ್ನು ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿನಂದಿಸಿದ್ದಾರೆ.
ಪ್ರಸ್ತುತ ಅಮೇರಿಕಾ ಪ್ರವಾಸದಲ್ಲಿರುವ ದೇವೇಗೌಡರು ಜುಲೈ 18 ರಂದು ತಮ್ಮ ಗೌರವಾರ್ಥ ‘ಕಾವೇರಿ ಕನ್ನಡ ಸಂಘ’ ಏರ್ಪಡಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡು ಇಲ್ಲಿನ ಕನ್ನಡ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮುನ್ನ ‘ಶ್ರೀ ಶಿವ ವಿಷ್ಣು ಮಂದಿರ’ಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿಗಳು, ಮಂದಿರದ ಭವ್ಯತೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಲು ದುಡಿಯುತ್ತಿರುವ ಪ್ರತಿಯಾಬ್ಬರ ಶ್ರಮವನ್ನು ಕೊಂಡಾಡಿದರು.
ಅಚ್ಚುಕಟ್ಟಾಗಿ ಪ್ರಕಟವಾಗಿದ್ದ ‘ಕಾವೇರಿ ಸುದ್ದಿಪತ್ರ’ವನ್ನು ನೋಡಿ ಆಶ್ಚರ್ಯಾನಂದ ವ್ಯಕ್ತಪಡಿಸಿದ ದೇವೇಗೌಡರು, ಇಲ್ಲಿನ ಕನ್ನಡಿಗರೊಂದಿಗೆ ಬೆರೆಯುವ ಅಪರೂಪದ ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
ಪ್ರತಿಯಾಬ್ಬರೊಂದಿಗೂ ಆತ್ಮೀಯವಾಗಿ ಬೆರೆತು ಮಾತನಾಡಿದ ಮಾಜಿ ಪ್ರಧಾನಿಗಳು ನೆರೆದಿದ್ದ ಸಭಿಕರಿಗೆ ಔತಣಕೂಟವನ್ನು ಅವಿಸ್ಮರಣೀಯವಾಗಿಸಿದರು. ಕಾವೇರಿ ಕನ್ನಡ ಸಂಘದ ಅಧ್ಯಕ್ಷ ನಾಗಶಂಕರ್ ಅವರು ದೇವೇಗೌಡ ಹಾಗೂ ಭಾರತೀಯ ರಾಯಭಾರಿ ಕಚೇರಿಯ ಗಣ್ಯರನ್ನು ಔತಣಕೂಟಕ್ಕೆ ಸ್ವಾಗತಿಸಿ ಮಾತನಾಡಿದರೆ, ದೇವೇಗೌಡರನ್ನು ಕುರಿತು ‘ಅಕ್ಕ’ ಬಳಗದ ಅಧ್ಯಕ್ಷ ಅಮರ್‌ನಾಥ್ ಗೌಡ ಮಾತನಾಡಿದರು. ಶಶಿಕಲಾ ಚಂದ್ರಶೇಖರ್ ವಂದನಾರ್ಪಣೆ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications