ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

London bridge is falling down!

By Staff
|
Google Oneindia Kannada News

ಭಾರತೀಯ ವಿದ್ಯಾಭವನದ ಮೂಲಕ ಬ್ರಿಟನ್‌ನಲ್ಲಿನ ಕನ್ನಡಿಗರಿಗೆ ಕನ್ನಡ ತರಗತಿಗಳನ್ನು ಕಲ್ಪಿಸುವ ‘ಅಕ್ಕ’ ಬಳಗದ ವಿ.ಎಂ. ಕುಮಾರಸ್ವಾಮಿ ಅವರ ಪಟ್ಟು ಬಿಡದ ಪ್ರಯತ್ನ ಕಡೆಗೂ ಫಲ ನೀಡಿದೆ. ಕನ್ನಡ ತರಗತಿಗಳನ್ನು ಆರಂಭಿಸಲು ಭಾರತೀಯ ವಿದ್ಯಾ ಭವನದ ಆಡಳಿತ ವರ್ಗ ಒಪ್ಪಿಕೊಂಡಿದೆ. ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು.

ತಮಿಳು, ತೆಲುಗು ಮುಂತಾದ ಭಾಷೆಗಳ ಕಲಿಕಾ ಕೋರ್ಸ್‌ಗಳನ್ನು ನಡೆಸುತ್ತಿದ್ದ ಭಾರತೀಯ ವಿದ್ಯಾಭವನ ಕನ್ನಡದ ಬಗೆಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಅನ್ಯಾಯವನ್ನು ಪ್ರತಿಭಟಿಸಿ, ಕನ್ನಡ ತರಗತಿಗಳನ್ನು ಆರಂಭಿಸುವಂತೆ ಭಾರತೀಯ ವಿದ್ಯಾಭವನ ಆಡಳಿತ ಮಂಡಳಿಯ ಮೇಲೆ ಒತ್ತಡವನ್ನು ತರುವ ನೇತೃತ್ವ ವಹಿಸಿದವರು ಕುಮಾರಸ್ವಾಮಿ. ಈ ಬಗ್ಗೆ ಕನ್ನಡಿಗರನ್ನು , ಅವರ ಅಭಿಪ್ರಾಯಗಳನ್ನೂ ಅಂತರ್ಜಾಲದ ಮೂಲಕ ಕುಮಾರಸ್ವಾಮಿ ಕಲೆಹಾಕಿದ್ದರು. ಈ ಪ್ರಯತ್ನಕ್ಕೀಗ ಫಲ ದೊರೆತಿದೆ. ಭಾರತೀಯ ವಿದ್ಯಾಭವನದ ಅಂಗಳದಲ್ಲಿ ಕನ್ನಡ ಮೊಳೆತಿದೆ.

ಭಾರತೀಯ ವಿದ್ಯಾಭವನದ ಆಡಳಿತ ಸಂಯೋಜಕ ಜಾನ್‌ ಮುಯ್ರ್‌ ಅವರು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು , ಕನ್ನಡ ಕೋರ್ಸ್‌ಗಳನ್ನು ಆರಂಭಿಸಲು ವಿದ್ಯಾಭವನ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಜಾನ್‌ ಅವರು ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರ ಇಂತಿದೆ-

ಪ್ರೀತಿಯ ಕುಮಾರಸ್ವಾಮಿ,
ತರಗತಿಗಳನ್ನು ಆರಂಭಿಸುವ ಕುರಿತು ನಮ್ಮ ನಿರ್ದೇಶಕರಾದ ಡಾ.ನಂದಕುಮಾರ್‌ ಅವರೊಂದಿಗೆ ಮಾತನಾಡಿದ್ದೇನೆ. ಅವರು ಕನ್ನಡ ತರಗತಿಗಳನ್ನು ಪ್ರಾರಂಭಿಸುವ ಶೈಕ್ಷಣಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

ಕನ್ನಡದಲ್ಲಿ ತರಗತಿಗಳನ್ನು ಆರಂಭಿಸಲು ವಿದ್ಯಾಭವನ ಮುಂದಾಗಿದೆ ಎನ್ನುವುದನ್ನು ತಮಗೆ ತಿಳಿಸಲು ಹರ್ಷಿಸುತ್ತೇನೆ. ಆದರೆ ಈ ಕೋರ್ಸ್‌ ಪ್ರಾರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳ ನೋಂದಾವಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾವು ಸಹಕರಿಸಿದ್ದೇ ಆದಲ್ಲಿ , ಮುಂದಿನ ವರ್ಷದಿಂದ ಕನ್ನಡ ಕೋರ್ಸ್‌ ಆರಂಭಿಸಬಹುದು.

ನಿಮ್ಮ ,
ಜಾನ್‌ ಮುಯ್ರ್‌.

ಕನ್ನಡ ಕಲಿಯಲು ಆಸಕ್ತರಾಗಿದ್ದೀರಾ?

ಕನ್ನಡ ಕಲಿಸಲು ಭಾರತೀಯ ವಿದ್ಯಾಭವನವೇನೊ ಒಪ್ಪಿಕೊಂಡಾಯಿತು. ಉಳಿದಿರುವುದು ವಿದ್ಯಾರ್ಥಿಗಳ ನೋಂದಾವಣೆಯ ಕೆಲಸ. ಕನ್ನಡ ಕಲಿಯಲು ನೀವು ಆಸಕ್ತರಾಗಿದ್ದದ್ದಲ್ಲಿ , ಕುಮಾರಸ್ವಾಮಿ ಅವರನ್ನು [email protected] ಇ ಮೇಲ್‌ ಮೂಲಕ ಸಂಪರ್ಕಿಸಬಹುದು. ಕನ್ನಡ ತರಗತಿಗಳು, ವಿದ್ಯಾರ್ಥಿಗಳು ಹಾಗೂ ವಿದ್ಯಾಭವನದ ನಡುವೆ ಪ್ರೀತಿಯ ಸೇತುವೆಯಾಗಿ ಕುಮಾರಸ್ವಾಮಿ ಅವರಿದ್ದಾರೆ.

ಈ ಸುದ್ದಿಯನ್ನು ನಿಮ್ಮ ಗೆಳೆಯರಿಗೂ ತಿಳಿಸಿ.

(ಇನ್ಫೋ ಇನ್‌ಸೈಟ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X