ನ.17 ರಂದು ಕಾವೇರಿಯಿಂದ ದೀಪಾವಳಿ, ರಾಜ್ಯೋತ್ಸವ ಆಚರಣೆ
ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆಗೆ ಕಾವೇರಿ ಕನ್ನಡ ಸಂಘ ಸಜ್ಜಾಗಿದೆ. ನವಂಬರ್ 17 ರ ಶನಿವಾರ ಸಾಂಸ್ಕೃತಿಕ ಸಂಜೆ ಹಾಗೂ ಭೋಜನ ಕೂಟ ಏರ್ಪಾಟಾಗಿದೆ. ಕಾವೇರಿ ಸದಸ್ಯರು ಮಾತ್ರವಲ್ಲದೆ ಇತರರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
Watkins Mill High School, Gaithersburg MD ನಲ್ಲಿ ನ.17 ರ ಸಂಜೆ 4.30 ರಿಂದ ರಾತ್ರಿ 10 ರವರೆಗೆ ಥರಾವರಿ ಕಾರ್ಯಕ್ರಮಗಳು ನಿಮಗಾಗಿ ಕಾದಿವೆ. ಆಚರಣೆಯ ಉತ್ಸಾಹದಲ್ಲಿರುವ ಕಾವೇರಿಯ ಮಹಿಳಾ ಸದಸ್ಯರು ಸಮೂಹ ನೃತ್ಯ ಪ್ರದರ್ಶಿಸಲಿದ್ದಾರೆ, ನಿರ್ದೇಶನ ಪ್ರತಿಭ ದೊಡ್ಡಮನಿ ಅವರದ್ದು. ನೃತ್ಯ ಮಾತ್ರವಲ್ಲದೆ ನಾಟಕವೂ ಉಂಟು. ‘ಕಣ್ಣಿಗೆ ಮಣ್ಣು ’ ನಾಟಕವನ್ನು ಡಾ।। ಕೆ.ಎಲ್.ವಸಂತ್ ಅವರ ತಂಡ ಪ್ರದರ್ಶಿಸುವುದು.
ಸಾಂಸ್ಕೃತಿಕ ಸಂಜೆಯ ವಿಶೇಷ ಕರ್ನಾಟಕದ ಪ್ರಸಿದ್ಧ ಕಲೆಯಾದ ಯಕ್ಷಗಾನ ಪ್ರದರ್ಶನ. ಕಾವೇರಿ ಸದಸ್ಯರಾದ ಶಾಂತಿ ತಂತ್ರಿ ಮುಂದಾಳತ್ವದಲ್ಲಿ 15 ಮಂದಿ ಕಲಾವಿದರು ಯಕ್ಷಗಾನ ಪ್ರದರ್ಶನದಲ್ಲಿ ಭಾಗಿಯಾಗುವರು. ಸಂಗೀತ, ವಿಶೇಷ ವೇಷಭೂಷಣ ಯಕ್ಷಗಾನ ಆಕರ್ಷಣೆ.
ಕಾರ್ಯಕ್ರಮಕ್ಕೆ ಪ್ರವೇಶ ಧನವುಂಟು. ಕಾವೇರಿ ಸದಸ್ಯರಿಗಾದರೆ 8 ಡಾಲರ್, ಇತರರಿಗೆ 12 ಡಾಲರ್. 5 ವರ್ಷದೊಳಗಿನ ಮಕ್ಕಳಿಗೆ ಪುಕ್ಕಟೆ ಪ್ರವೇಶ.
ಹೆಚ್ಚಿನ ವಿವರಗಳಿಗೆ ಇವರನ್ನು ಸಂಪರ್ಕಿಸಿ :
President : Nagashankar (240)631 0569
Vice President : Dr. Shamala (301)330 0919
Secretary : Sanjay Rao (703)869 1461
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications