ಆಸ್ಟಿನ್‌ ವಾರ್ತಾ ಪತ್ರದ ಆಗಸ್ಟ್‌ ಕಂತು

1. ಭಾರತದಲ್ಲಿ ಸಂರಕ್ಷಣಾಭಿವೃದ್ಧಿಯ ಬಗೆಗೆ ನಾಗರಿಕರ ಪ್ರಯತ್ನಗಳು (Citizens Efforts Towards Sustainable Development in India) ಎಂಬ ವಿಷಯದ ಮೇಲೆ ಮೈಖೆಲ್‌ ಮಜ್‌ಗಾಂವ್‌ಕರ್‌ ಉಪನ್ಯಾಸ ನೀಡಲಿದ್ದಾರೆ. ಆಗಸ್ಟ್‌4ರ ಶನಿವಾರ ಸಂಜೆ ಏಳು ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ.

2. ಗುಬ್ಬಿ ವೀರಣ್ಣ ಅವರ ಮಗಳು ಬಿ.ಜಯಶ್ರೀ ಅವರ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ. ವೀಸಾದ ತೊಂದರೆಗಳಿಂದಾಗಿ ಜಯಶ್ರೀ ಅವರು ಬರಲಾಗುತ್ತಿಲ್ಲ. ಆದ್ದರಿಂದ ನಿಮಗೆ ಗೊತ್ತಿರುವ, ಅಮೆರಿಕಾ ಪ್ರವಾಸದಲ್ಲಿರುವ ಕಲಾವಿದರು ಕಾರ್ಯಕ್ರಮ ಪ್ರಸ್ತುತ ಪಡಿಸಲು ಸಿದ್ಧರಿದ್ದರೆ ತಕ್ಷಣ ಸಂಪರ್ಕಿಸಿ.

3. ಪ್ರಶಸ್ತಿಗಳು -

ಮೋಟೋರೋಲಾ ಸೆಮಿ ಕಂಡಕ್ಟರ್‌ ಉತ್ಪನ್ನ ವಿಭಾಗದಲ್ಲಿನ ವಿಶೇಷ ಸಾಧನೆಗಾಗಿ ಕನ್ನಡ ಕೂಟದ ಹಿರಿಯ ಸದಸ್ಯ ರಾಮ ಹೆಗ್ಡೆ ಅವರಿಗೆ ‘ಗೋಲ್ಡನ್‌ ಕ್ವಿಲ್‌’ ಪ್ರಶಸ್ತಿ ಲಭಿಸಿದೆ. ರಾಮಹೆಗ್ಡೆ ಅವರಿಗೆ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು !

ದೇಸೀ ಒಲಿಂಪಿಕ್ಸ್‌ : ‘ದೇಸೀ ಒಲಿಂಪಿಕ್ಸ್‌ ನ ಬಾಸ್ಕೆಟ್‌ ಬಾಲ್‌ ಟೂರ್ನಮೆಂಟ್‌’ನಲ್ಲಿ ಕ್ಯಾನ್ಯಾನ್‌ ಕ್ರೀಕ್‌ ಪಾಡ್ರೆಸ್‌ ಗ್ರುಯ್ಲಿಕ್‌ ಜಯಗಳಿದೆ. ಈ ತಂಡದಲ್ಲಿ ದ್ದ ನಾಲ್ವರು ಕನ್ನಡ ಸಂಘದ ಸದಸ್ಯರು ಇವರು - ರವಿ ದೊಡ್ಡೇಗೌಡ, ಪ್ರಭುದೇವ್‌ ಕೋನಾನ, ರಂಜಿತ್‌ ನಾಯಕ್‌ ಮತ್ತು ಗಿರಿ ರಂಗನ್‌(ಕ್ಯಾಪ್ಟನ್‌). ತಂಡದಲ್ಲಿದ್ದ ಇತರರು (ಕನ್ನಡ ಸಂಘದ ಸದಸ್ಯರಲ್ಲ)- ನಾಗೇಶ್‌ ಗಾವಿರನೇನಿ, ರಾಮ್‌ನಾರಾಯಣ್‌, ಮನೋಹರ್‌ ರಾವ್‌ ಮತ್ತು ಎಡ್‌ ಸ್ಲಾಡೆಕ್‌. ಗೆದ್ದವರಿಗೆ ಕಂಗ್ರಾಟ್ಸ್‌ !

4. ಕನ್ನಡ ಸಂಘಕ್ಕೆ ಹೊಸಬರು ಬಂದಿದ್ದಾರೆ. ಕಾರ್ತಿಕ್‌, ಶ್ರೀದೇವಿ ಮತ್ತು ಪ್ರಸನ್ನರಿಗೆ ಸಂಘ ತುಂಬು ಸ್ವಾಗತ ಬಯಸುತ್ತದೆ.

5. ಊರಿಗೆ ಹೊರಟವರಿದ್ದರೆ....

ಸೆಪ್ಟೆಂಬರ್‌ ಅಂತ್ಯದಲ್ಲಿ ಮತ್ತು ಅಕ್ಟೋಬರ್‌ 20 ಹೊತ್ತಿಗೆ ಕೊರಿಯನ್‌ ಏರ್‌ ಮೂಲಕ ಭಾರತಕ್ಕೆ ಹೋಗುವವರಿದ್ದರೆ ಕನ್ನಡ ಸಂಘದ ಪ್ರಸನ್ನರನ್ನೊಮ್ಮೆ ದಯವಿಟ್ಟು ಸಂಪರ್ಕಿಸಿ.

6. ಯುಟಿ ವಿದ್ಯಾರ್ಥಿಯಾಬ್ಬ ಸೆಕೆಂಡ್‌ ಹ್ಯಾಂಡ್‌ ಫರ್ನಿಚರ್‌ಗಾಗಿ ಹುಡುಕಾಡುತ್ತಿದ್ದಾರೆ. ನಿಮ್ಮ ಬಳಿ ಇದೆಯೇ ?

7. ಸೋಷಿಯಲ್‌ ಸೆಕ್ಯುರಿಟಿ ಬಗ್ಗೆ ಕನ್ನಡ ಸಂಘದ ವೆಬ್‌ ಸೈಟಿನಲ್ಲಿ ಹೊಸ ಮಾಹಿತಿಗಳಿವೆ. ಒಮ್ಮೆ ಕಣ್ಣಾಡಿಸಿ.

8. ಕನ್ನಡ ಸಂಘದ ಬಳಿ ‘ಅನಿಶ್‌’ ಕನ್ನಡ ಚಲನ ಚಿತ್ರ ಮಾರಾಟಕ್ಕಿದೆ. ಕ್ರಯ - 18 ಡಾಲರ್‌. ವಿವರಕ್ಕೆ ಕ್ಲಿಕ್ಕಿಸಿ.8. ಹಳೇ ಕಂಪ್ಯೂಟರ್‌ಗಳನ್ನು ಕನ್ನಡ ಸಂಘ ಸಂಗ್ರಹಿಸುತ್ತಿದೆ. ಅವುಗಳನ್ನು ಭಾರತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು. ನಿಮ್ಮ ಬಳಿ ಇದೆಯಾ ?

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+