ಮಕ್ಕಳಿಗಾಗಿ ಆಟೋಟ-ಪ್ರತಿಭಾ ಸ್ಪರ್ಧೆ: ಆಸ್ಟಿನ್‌ನಲ್ಲಿ ಕ್ರೆೃ ಉತ್ಸವ-2002
ಕ್ರೆೃ ಉತ್ಸವ- 2002 ಕ್ಕೆ ಆಸ್ಟಿನ್ ಸಜ್ಜಾಗುತ್ತಿದೆ. ಚೈಲ್ಡ್ ರಿಲೀಫ್ ಆ್ಯಂಡ್ ಯು (CRY) ಸಂಸ್ಥೆಯು ಮಕ್ಕಳಿಗೋಸ್ಕರ ಆಟೋಟ ಮತ್ತಿತರ ಕಾರ್ಯ ಚಟುವಟಿಕೆಗಳನ್ನು ಈ ಉತ್ಸವದಲ್ಲಿ ಹಮ್ಮಿಕೊಂಡಿದ್ದು, ಮಕ್ಕಳ ಪ್ರತಿಭೆ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸಿದೆ.
ಉತ್ಸವದಲ್ಲಿ ಚಿತ್ರ ಬರೆಯುವ ಸ್ಪರ್ಧೆಯನ್ನೂ ಹಮ್ಮಿಕೊಂಡಿದ್ದು, ಭಾಗವಹಿಸಲಿಚ್ಚಿಸುವವರು ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಬೇಕು. ಹಿಂದುಳಿದ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಕ್ರೆೃ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಉತ್ಸವದಲ್ಲಿ ಭಾಗವಹಿಸುವ ಮೂಲಕ ನೀವು ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕೆ ನೆರವಾದಂತಾಗುತ್ತದೆ.
ಉತ್ಸವ ಆರಂಭವಾಗುವುದು ಏಪ್ರಿಲ್ 17ರ ಭಾನುವಾರ ಮಧ್ಯಾಹ್ನ 2.00 ಗಂಟೆಗೆ. ಸ್ಥಳ - The Texas Union Ballroom, The University of Texas at Austin ಕ್ರೆೃ ವೆಬ್ ಸೈಟಿನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ. http://www.us.cry.org/austin/cryfair. ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವವರು, ಕ್ರೆೃ ವೆಬ್ ಸೈಟ್ ಮೂಲಕವೂ ಹೆಸರು ನೋಂದಾಯಿಸಬಹುದು.
ಉತ್ಸವಕ್ಕೆ ಪ್ರವೇಶ ಶುಲ್ಕ ಇಲ್ಲ. ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸುವವರು ನೋಂದಣಿ ಶುಲ್ಕ ಕಟ್ಟಬೇಕು. ಉತ್ಸವಕ್ಕೆ ಮುಂಚಿತವಾಗಿಯೇ ಬ್ಲೂ ಟಿಕೆಟ್(5 ಡಾಲರ್) ಮತ್ತು ಗ್ರೀನ್ ಟಿಕೆಟ್ (10 ಡಾಲರ್) ಗಳನ್ನು ತೆಗೆದುಕೊಳ್ಳಬಹುದು. ಬ್ಲೂ ಟಿಕೆಟನ್ನು ಉತ್ಸವ ದ್ವಾರದ ಬಳಿ 5 ಕೂಪನ್‌ಗಳಾಗಿ, ಹಾಗೂ ಗ್ರೀನ್ ಟಿಕೆಟನ್ನು 12 ಕೂಪನ್‌ಗಳಾಗಿ ಪರಿವರ್ತಿಸುವ ಅವಕಾಶವೂ ಇದೆ.
ಈ ಕೂಪನ್‌ಗಳನ್ನು ಉತ್ಸವದೊಳಗೆ ತಿಂಡಿ, ಗೇಮ್ಸ್ ಮತ್ತಿತರ ಸ್ಪರ್ಧೆಗಳಿಗೆ ಉಪಯೋಗಿಸಬಹುದು.
ಕ್ರೆೃ ಬೂತ್‌ಗಳಲ್ಲಿ, ಅಥವಾ ಕ್ರೆೃ ಸ್ವಯಂ ಸೇವಕರಿಂದ ನೀವು ಟಿಕೇಟುಗಳನ್ನು ಖರೀದಿಸಬಹುದು. ವೆಬ್‌ಸೈಟ್ ಕ್ಲಿಕ್ಕಿಸುತ್ತೀರಾದರೆ, http://www.sulekha.com/austin. ಹೆಚ್ಚಿನ ಮಾಹಿತಿಬೇಕಿದ್ದಲ್ಲಿ ಶ್ರೀಮತಿ ಶ್ರೀನಿವಾಸನ್ ಅವರನ್ನು ಸಂಪರ್ಕಿಸಬಹುದು (512)349-5535. ಈಮೇಯ್ಲ್ : [email protected]
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications