ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಕಾ ಚರ್ಚಾ ವೇದಿಕೆಯಲ್ಲಿ ‘ಗಮಕ ಕಲೆ’

By Staff
|
Google Oneindia Kannada News

ಮೇರಿಲ್ಯಾಂಡ್‌ : ಪ್ರತಿ ತಿಂಗಳು ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನಡೆಸುವುದರಲ್ಲಿ ಹೆಸರಾದ ‘ಭೂಮಿಕಾ’ ಆಗಸ್ಟ್‌ 12 ರಂದು ಹೊಸ ಕಾರ್ಯಕ್ರಮ ಹೊತ್ತು ತಂದಿದೆ. ಮಧ್ಯಾಹ್ನ 12 ರಿಂದ 2 ರವರೆಗೆ Bauer Dr. Community Center ನಲ್ಲಿ ನಿಗದಿತ ಕಾರ್ಯಕ್ರಮದಂತೆ ‘ಭೂಮಿಕಾ’ ಸದಸ್ಯರು ಒಟ್ಟಾಗಲಿದ್ದಾರೆ.

ಈ ಮುನ್ನ ಕಾವೇರಿ ಸಾಂಸ್ಕೃತಿಕ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸಾಹಿತ್ಯ ವಿಹಾರ’ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ಹೊಸ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು. ಅಂದಹಾಗೆ, ಪ್ರಸ್ತುತ ‘ಭೂಮಿಕಾ’ ಹಮ್ಮಿಕೊಂಡಿರುವ ಕಾರ್ಯಕ್ರಮ- ‘ಕರ್ನಾಟಕದ ಗಮಕ ಕಲೆ’ ವಿಷಯದ ಬಗೆಗಿನ ಚರ್ಚೆ, ವಿಜಯ ಕುಲಕರ್ಣಿ ನಡೆಸಿಕೊಡುತ್ತಾರೆ.

ಗಮಕದ ಮೂಲ, ಉತ್ಪತ್ತಿ ಹಾಗೂ ಗುಣ ಲಕ್ಷಣಗಳು, ಗಮಕದ ಶೈಲಿಗಳು, ಕಲೆ ಮತ್ತು ಕಲಾವಿದ (ಗಮಕಿ) ಕುರಿತಂತೆ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ. ಮಹಾಕಾವ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಮತ್ತು ಸಾಂಪ್ರದಾಯಿಕ ರಂಗಭೂಮಿ ಸೇರಿದಂತೆ ವಿವಿಧೆಡೆಗಳಲ್ಲಿ ಗಮಕವನ್ನು ಅಳವಡಿಸುವ ಕುರಿತು, ಭಾರತ ಹಾಗೂ ಇತರೆಡೆಗಳಲ್ಲಿ ಗಮಕಕ್ಕೆ ಸಂವಾದಿಯಾದ ಕಲೆಗಳ ಕುರಿತೂ ಚರ್ಚಿಸಲಾಗುವುದು.

ಕಾರ್ಯಕ್ರಮ ಕಳೆಗಟ್ಟಲೆಂದು ಮಹಾಕಾವ್ಯವೊಂದರ ಸಾಹಿತ್ಯದ ತುಣುಕನ್ನು ಉದಾಹರಿಸಿ ಚರ್ಚೆ ನಡೆಯಲಿದೆ. ಈ ಚರ್ಚೆ ಏಕಮುಖಿಯಲ್ಲ , ಸಂವಾದದಲ್ಲಿ ನೀವೂ ಪಾಲ್ಗೊಂಡಾಗ ಮಾತ್ರ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗುವುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-

ವಿಜಯ ಕುಲಕರ್ಣಿ : 301-8712234
ಜಯ ನಾಗೇಂದ್ರ : 301-3529256
ಪದ್ಮಜಾ ಪ್ರಭಾಕರ: 301-9249360
ಇಂದಿರಾ ಶ್ರೀನಿವಾಸ್‌ : 301-6701665

ಕಮ್ಯುನಿಟಿ ಸೆಂಟರ್‌ಗೆ ದಾರಿ -
From Beltway to I270N to Exit 6 From I270 S to Exit : 6 which is Rt 28(W. Montgomery Ave) towards Rockville. This becomes Viers Mill Rd (Rte 586). Make left at Norbeck Rd (Rt 28) After 3 traffic lights, make left on to Bauer Drive. Community center is on your left. Tel: 3014684015

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X