ಎನ್‌ಆರ್‌ಐ ಕನ್ನಡಿಗ ವಿದ್ಯಾರ್ಥಿಗಳಿಗೆ ‘ಇಂಡಿಯಾ ಹೆರಿಟೇಜ್’ ಪ್ರಶಸ್ತಿ
ಕ್ಯಾಲಿಪೋರ್ನಿಯಾ : ಮೇ 20 ರಂದು ಷೆರಟಾನ್ ಹೋಟೆಲ್ ಸಭಾಂಗಣದಲ್ಲಿ ಸಂಭ್ರಮ . ಅಂದು ‘ಇಂಡಿಯಾ ಹೆರಿಟೇಜ್’ ಪ್ರಶಸ್ತಿ ಪಡೆದವರಲ್ಲಿ ು ನಾಲ್ಕು ಮಂದಿ ಅನಿವಾಸಿ ಕನ್ನಡಿಗ ವಿದ್ಯಾರ್ಥಿಗಳಿದ್ದುದು ಕಾರ್ಯಕ್ರಮದ ವಿಶೇಷ.
ಪ್ರಶಸ್ತಿ ವಿಜೇತ ಕನ್ನಡಿಗರು- ಜೂನಿಯರ್ ಹೈ ಕ್ಯಾಟಗರಿಯಲ್ಲಿ ಪ್ರಿಯಾಂಕಾ ವೆಂಕಟೇಶ್ ಪ್ರಥಮ ಸ್ಥಾನ (500 ಡಾಲರ್) ಪಡೆದರೆ, ತೃತೀಯ ಸ್ಥಾನ (200 ಡಾಲರ್) ಟೀನಾ ಸಿಮಿ ರಾಯ್ ಗೆ ಸಂದಿತು. ಸೀನಿಯರ್ ಹೈ ಕ್ಯಾಟಗರಿಯಲ್ಲಿ ಅರುಣ್ ಮೂರ್ತಿ ಮತ್ತು ದೀಪಾ ಶಿಂಧೆ ಅವರಿಗೆ ಕ್ರಮವಾಗಿ ಪ್ರಥಮ (500 ಡಾಲರ್) ಮತ್ತು ಐದನೇ ಸ್ಥಾನ (250 ಡಾಲರ್) ಗಿಟ್ಟಿಸಿಕೊಂಡರು.
ಕನ್ನಡ ಸಾಂಸ್ಕೃತಿಕ ಸಂಘ(ಕೆಸಿಎ)ದ ಸದಸ್ಯರಾದ ವೆಂಕಟೇಶ್- ಉಜ್ವಲ ದಂಪತಿಗಳ ಮಗಳು ಪ್ರಿಯಾಂಕ. ಕಾರ್ಯಕ್ರಮದಲ್ಲಿ ಸಹೋದರ ವಿಕ್ರಮ್ ಜೊತೆ ವಯಲಿನ್ ಬಾರಿಸಿ ತಮ್ಮ ಪ್ರತಿಭೆ ಮೆರೆದರು. ಟೀನಾ ಕೆಸಿಎ ಸದಸ್ಯರಾದ ಅರುಣ ಮತ್ತು ಸುನಿಲ್ ರಾಯ್ ಅವರ ಮಗಳು. ಟೊರಾನ್ಸ್‌ನ ದಿವಂಗತ ಉಮಾ ಮತ್ತು ಶಿವ ಮೂರ್ತಿಯವರ ಮಗ ಅರುಣ್ ಮೂರ್ತಿ ಯುಸಿ ಬರ್ಕ್‌ಲಿಯಲ್ಲಿ ಕಂಪ್ಯೂಟರ್ ಸಾಯನ್ಸ್- ಇಂಜಿನಿಯರಿಂಗ್ ಓದುತ್ತಿದ್ದಾರೆ. ಬರ್ಕ್‌ಲಿ ಚಾನ್ಸಿಲರ್ಸ್ ಸ್ಕಾಲರ್ ಶಿಪ್, ವಿಶ್ವ ವಿದ್ಯಾಲಯದ ಟೆನಿಸ್ ಟೀಮ್‌ನ ಕೋ-ಕ್ಯಾಪ್ಟನ್ ಆಗಿರುವ ಅರುಣ್ ಬಾಸ್ಕೆಟ್ ಬಾಲ್, ಸಿನೆಮಾ, ಸಂಗೀತ ಮತ್ತು ಟೀವಿಯನ್ನು ಹವ್ಯಾಸದ ಸಂಗಾತಿಗಳನ್ನಾಗಿಸಿಕೊಂಡವರು.
ದೀಪಾ ಶಿಂಧೆ ಇರ್ವಿನ್ ಹೈಸ್ಕೂಲ್‌ನ ವಿದ್ಯಾರ್ಥಿನಿ. ರಾಷ್ಟ್ರೀಯ ಮೆರಿಟ್ ಸ್ಕಾಲರ್ ಶಿಪ್ ಪಡೆಯುತ್ತಿರುವ ಆಕೆ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಟ್ರಸ್ಟಿ ಸ್ಕಾಲರ್ ಆಗಿ ಸೇರಬಯಸುತ್ತಾರೆ. ಆಕೆಯ ಇಷ್ಟದ ವಿಷಯ ಬಿಜಿನೆಸ್. ಇರ್ವಿನ್‌ನಲ್ಲಿ ಪ್ರತಿ ಭಾನುವಾರ ಚಿನ್ಮಯ ಬಾಲವಿಹಾರದಲ್ಲಿ ದೀಪಾ ಪಾಠ ಮಾಡುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications