ಆಸ್ಟಿನ್‌ ಅಂಗಳದಲ್ಲಿ ಪುರಂದರ ಹಾಗೂ ಹರಿದಾಸ ವೃಂದದ ಕಲರವ

Punrandara Dasaruಆಸ್ಟಿನ್‌ ಮತ್ತೆ ರಂಗುಗೊಂಡಿದೆ. ಈ ಬಾರಿಯ ಕನ್ನಡಿಗರ ಚಟುವಟಿಕೆಗಳಿಗೆ ಇಂಬು ನೀಡಿರುವುದು ಪುರಂದರ ದಾಸರ ಜಯಂತಿ ಹಾಗೂ ದಾಸರ ಆರಾಧನಾ ಕಾರ್ಯಕ್ರಮ. ಫೆಬ್ರವರಿ 10 ರಂದು ಪುರಂದರ ದಾಸರ ಜಯಂತಿ, ಫೆ. 23ರಂದು ದಾಸರ ಆರಾಧನಾ ಕಾರ್ಯಕ್ರಮ; ಒಟ್ಟಿನಲ್ಲಿ ದಾಸ ಸಾಹಿತ್ಯಾಮೃತ ಸವಿಯುವ ಸಂದರ್ಭ!
ಪುರಂದರ ದಾಸರ ಜಯಂತಿ

ಸೆಂಟ್ರಲ್‌ ಟೆಕ್ಸಾಸ್‌ನ ನೂತನ ಹಿಂದೂ ದೇವಸ್ಥಾನ ಫೆಬ್ರವರಿ 10 ರ ಭಾನುವಾರ ಪುರಂದರ ದಾಸರ ಜಯಂತಿ ಆಚರಣೆ ಕಾರ್ಯಕ್ರಮ ಏರ್ಪಡಿಸಿದೆ. ಪುರಂದರ ದಾಸರ ಮತ್ತು ಇತರ ಹರಿದಾಸರ ಕೃತಿಗಳಿಗೆ ಗಾಯಕಿ ಜಯಪ್ರಭ ಜಗದೀಶ್‌ ಜೀವ ತುಂಬಲಿದ್ದಾರೆ. ಕಾರ್ಯಕ್ರಮ ದೇವಸ್ಥಾನದಲ್ಲೇ ನಡೆಯುವುದು.

ಬೆಳಗ್ಗೆ 10.15ಕ್ಕೆ ಭಜನೆ; ನಂತರ ಪುರಂದರ ದಾಸರ ಇಷ್ಠ ದೈವ ಪುರಂದರ ವಿಠ್ಠಲನಿಗೆ ಮಹಾಪೂಜೆ. ಮಧ್ಯಾಹ್ನ ಸಿದ್ಧಿ ಪ್ರದಾಯಕ ಗಣೇಶನಿಗೆ ಮಂಗಳಾರತಿ. ಪ್ರಸಾದ ವಿತರಣೆಯ ನಂತರ ಸಂಗೀತ ಕಾರ್ಯಕ್ರಮ- ಮಧ್ಯಾಹ್ನ 1 ಗಂಟೆಯ ಸುಮಾರಿಗೆ. ಅಪರಾಹ್ನ 3ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುವುದರಿಂದ 2.30 ಸುಮಾರಿಗೆ ಸಂಗೀತ ಕಾರ್ಯಕ್ರಮ ಮುಗಿಯುತ್ತದೆ. ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕನ್ನಡ ಸಂಘದ ಪ್ರಸನ್ನರಿಗೆ ಮೇಯ್ಲ್‌ ಮಾಡಿ.

ದಾರಿ ಯಾವುದಯ್ಯಾ ದೇವಸ್ಥಾನಕೆ?

ದಾರಿ ಇಲ್ಲಿದೆ, ಗುರುತು ಹಾಕಿಕೊಳ್ಳಿ-

From Austin, take I35 North, exit at Midway DriveExit 297 Make a Right at Midway drive Go 0.6 mile to the top of the hill You will see Bonham school on Your left A little further, Temple site is on your right. You will see road construction into the property.
From Waco, take I35 South, exit at Midway driveExit 297 Make a Left at Midway drive Go 0.6 mile to the top of the hill You will see Bonham school on Your left A little further, Temple site is on your right. You will see road construction into the property

ದಾಸರ ಆರಾಧನೆ

ಚಿನ್ಮಯ ಮಿಶನ್‌ ಹಾಲ್‌ನಲ್ಲಿ ದಾಸರ ಆರಾಧನಾ ಕಾರ್ಯಕ್ರಮವನ್ನು ಫೆಬ್ರವರಿ 23ರಂದು ಏರ್ಪಡಿಸಲಾಗಿದೆ. ಅಪರಾಹ್ನ 2 ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಸಂಜೆ 6 ಕ್ಕೆ ಮುಗಿಯುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸಂಯೋಜಕರನ್ನು ತಕ್ಷಣವೇ ಸಂಪರ್ಕಿಸಬೇಕು.

ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳಿಂದ ಪಿಲ್ಲರಿ ಗೀತೆಯನ್ನು ಹಾಡಿಸುವ ಯೋಜನೆಯಿದೆ. ಶ್ರೀ ಗಣನಾಥ..., ಕೆರೆಯ ನೀರನು... ಮತ್ತು ಪದುಮನಾಭಾ... ಹಾಡುಗಳನ್ನು ಪಿಲ್ಲರಿ ಗೀತೆಯಲ್ಲಿ ಹಾಡಿಸಲಾಗುವುದು. ನಿಮ್ಮ ಮಕ್ಕಳೂ ಈ ಗೀತ ಗುಚ್ಛದಲ್ಲಿ ಭಾಗವಹಿಸ ಬೇಕೆ? ಸಂಪರ್ಕಿಸಿ : [email protected]

ಕಾರ್ಯಕ್ರಮ ಹೀಗೆ ಸಾಗುತ್ತದೆ :
2.00- 2.15 : ಮಕ್ಕಳಿಂದ ಪಿಲ್ಲರಿ ಗೀತೆ
2.15- 3.30: ಮಕ್ಕಳಿಂದ ವೈಯಕ್ತಿಕ ಗೀತೆ
3.30- 6.00: ಹಿರಿಯರಿಂದ ವೈಯಕ್ತಿಕ ಹಾಡುಗಳು

ಕಾರ್ಯಕ್ರಮದಲ್ಲಿ ಪುರಂದರ ದಾಸ, ಕನಕ ದಾಸ, ವಿಜಯ ದಾಸ, ವಾದಿರಾಜ, ಶ್ರೀಪಾದ ರಾಯ, ಜಗನ್ನಾಥ ದಾಸರ ಕೀರ್ತನೆಗಳನ್ನು ಹಾಡಬಹುದು. ಹೆಚ್ಚಿನ ಮಾಹಿತಿಗಾಗಿ ಚಿನ್ಮಯ ಮಿಶನ್‌ನ ವೆಬ್‌ಸೈಟ್‌ ಕ್ಲಿಕ್ಕಿಸಿ - http://www.angelfire.com/tx2/chinmaya/

(ಇನ್ಫೋ ವಾರ್ತೆ)

ದಾಸರೆಂದರೆ ಪುರಂದರ ದಾಸರಯ್ಯಾ..

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+