ಕ್ಷುಲ್ಲಕ ಕಾರಣ, ಪತಿ-ಪತ್ನಿ ನಡುವೆ ವಿರಸ: ಕೊಡಲಿಯಿಂದ ಕೊಚ್ಚಿ ಪತ್ನಿ ಹತ್ಯೆ
ಯಾದಗಿರಿ, ಆಗಸ್ಟ್ 20: ಹೆಂಡತಿಯನ್ನೇ ಕೊಚ್ಚಿ ಕೊಲೆ ಮಾಡಿ ಬಳಿಕ ಪತಿ ಪೊಲೀಸರಿಗೆ ಶರಣಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಗಂಡ-ಹೆಂಡತಿ ಎಂದ ಮೇಲೆ ಜಗಳ ಸಾಮಾನ್ಯ ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಹೆಂಡತಿಯನ್ನೇ ಕೊಲೆ ಮಾಡಿದ್ದ, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಶಹಾಪೂರ ತಾಲೂಕಿನ ಹತ್ತಿಗೂಡುರ ಗ್ರಾಮದಲ್ಲಿ ನಡೆದಿದೆ.
ಹತ್ತಿಗೂಡುರ ಗ್ರಾಮದ ನಿವಾಸಿ ರೇಣುಕಾ(30) ಕೊಲೆಯಾದ ಮಹಿಳೆ. ಪತಿ ಪತ್ನಿ ನಡುವೆ ಮಾತಿನಿಂದ ಆರಂಭವಾದ ಜಗಳ ಕೊಲೆಯಿಂದ ಅಂತ್ಯ ಕಂಡಿದೆ.

ಕ್ಷುಲ್ಲಕ ಕಾರಣಕ್ಕೆ ಪತಿ, ಪತ್ನಿ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ, ಕೋಪಗೊಂಡ ಪತಿ ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಕೊಂಡ ಶಹಾಪೂರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾಗೆಯೇ ಪ್ರಕರಣ ಸಂಬಂಧ ವಿಚಾರಣೆ ಆರಂಭಿಸಿದ್ದಾರೆ.
ತನ್ನ ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ ತಪ್ಪು ಒಪ್ಪಿಕೊಂಡಿದ್ದಾನೆ.
ಎಷ್ಟೇ ಕೋಪ ಬಂದರೂ ಯಾರನ್ನೋ ಸಾಯಿಸುವ ಮಟ್ಟಕ್ಕೆ ಹೋಗಬಾರದು, ಈಗ ಆತನಿಗೆ ತಪ್ಪಿನ ಅರಿವಾಗಿದೆ ಆದರೆ ಪತ್ನಿ ಮರಳಿ ಬರುತ್ತಾಳೆಯೇ?












Click it and Unblock the Notifications