ಧರ್ಮ ಉಳಿಸಲು ಕೊಲ್ಲಲು ಹಿಂಜರಿಯಬೇಡಿ ಎಂದಿದ್ದ ಶಾಸಕನ ವಿರುದ್ಧ ಕೇಸ್
ಯಾದಗಿರಿ, ಡಿಸೆಂಬರ್ 15: ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ತೆಲಂಗಾಣದ ಬಿಜೆಪಿ ಶಾಸಕನ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳುಂತೆ ಈಶಾನ್ಯ ವಲಯದ ಐಜಿಪಿ ಅಲೋಕ್ ಸೂಚಿಸಿದ್ದಾರೆ.
'ಪ್ರತಿಯೊಬ್ಬ ಹಿಂದುವೂ ತಮ್ಮ ಮನೆಯಲ್ಲಿ ಖಡ್ಗವನ್ನು ಹೊಂದಿರಬೇಕು, ಧರ್ಮ ಉಳಿಸಲು ಅವಶ್ಯಕತೆ ಬಿದ್ದರೆ ಕೊಲ್ಲಲು ಹಿಂಜರಿಯಬಾರದು' ಎಂದು ತೆಲಂಗಾಣದ ಘೋಷಾ ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ಯಾದಗಿರಿಯಲ್ಲಿ ಮಂಗಳವಾರ ನಡೆದ ವಿರಾಟ್ ಸಮಾವೇಶದಲ್ಲಿ ಉಗ್ರ ಭಾಷಣ ಮಾಡಿದ್ದರು.

ರಾಜಾಸಿಂಗ್ ಠಾಕೂರ್ ಮಾಡಿದ ಉಗ್ರ ಭಾಷಣ ಇದೀಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸನವಾಗಿದೆ. ಈ ಬಗ್ಗೆ ಪರಿಶೀಲಿಸಿದ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್, ರಾಜಾಸಿಂಗ್ ಠಾಕೂರ್ ವಿರುದ್ಧ ಮಾರಕಾಸ್ತ್ರ ಪ್ರದರ್ಶನ ಮತ್ತು ಪ್ರಚೋದನಕಾರಿ ಹೇಳಿಕೆ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.
ಅಷ್ಟೇ ಅಲ್ಲದೇ ಆ ಕಾರ್ಯಕ್ರಮದ ಬಂದೋಬಸ್ತ್ ಗೆ ಇದ್ದ ಪೊಲೀಸ್ ರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications