• search
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳೆಯನ್ನು ಸ್ಪರ್ಶಿಸಿದ ಆರೋಪ : ಪತ್ರಕರ್ತನಿಗೆ ವೈಟ್ ಹೌಸ್ ನಿಷೇಧ

|

ವಾಷಿಂಗ್ಟನ್ ಡಿಸಿ, ನವೆಂಬರ್ 08 : ಸಿಎನ್ಎನ್ ಪತ್ರಿಕಾ ಸಂಸ್ಥೆಯ ಪತ್ರಕರ್ತ ಜಿಮ್ ಅಕೋಸ್ಟಾ ಅವರನ್ನು 'ಜನರ ವೈರಿ, ಒರಟು, ಭಯಂಕರ ಮನುಷ್ಯ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜರಿದಿದ್ದು, ಅವರು ಶ್ವೇತ ಭವನ ಪ್ರವೇಶಿಸದಂತೆ ನಿಷೇಧಿಸಲಾಗಿದೆ.

ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆದ ಮರುದಿನ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಪ್ರಶ್ನೆ ಕೇಳುತ್ತಿದ್ದ ಸಿಎನ್ಎನ್ ವೈಟ್ ಹೌಡ್ ಕರಸ್ಪಾಂಡಂಟ್ ಜಿಮ್ ಅಕೋಸ್ಟಾ ಅವರಿಂದ ಮೈಕನ್ನು ಕಿತ್ತುಕೊಳ್ಳಲು ಯತ್ನಿಸಲಾಗಿತ್ತು ಮತ್ತು ಸ್ವತಃ ಟ್ರಂಪ್ ಅವರು ಮೈಕ್ ಕೊಟ್ಟು ಕೂಡುವಂತೆ ಆದೇಶಿಸಿದ್ದರು.

ಡೊನಾಲ್ಡ್ ಟ್ರಂಟ್ ಅವರ ಆದೇಶವನ್ನು ಪಾಲಿಸದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಅಲ್ಲದೆ, ವೈಟ್ ಹೌಸ್ ನ ಸಿಬ್ಬಂದಿಯೋರ್ವಳು ಬಲವಂತವಾಗಿ ಜಿಮ್ ಅವರಿಂದ ಮೈಕನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದ್ದರು. ಆದರೆ ಜಿಮ್ ಅಕೋಸ್ಟಾ ಅವರು ಅವಕಾಶ ನೀಡಿರಲಿಲ್ಲ.

Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ?

ಪಟ್ಟು ಬಿಡದ ಜಿಮ್ ಅಕೋಸ್ಟಾ ಅವರು, ಅಮೆರಿಕಾ ಕೇಂದ್ರ ಭಾಗದಲ್ಲಿನ ಅಲೆಮಾರಿ ಜನಾಂಗದ ಬಗ್ಗೆ ಪ್ರಶ್ನೆ ಕೇಳಿದಾಗ, 'ಇನ್ನು ಸಾಕು' ಎಂದು ಕಿರುಚಿದ್ದ ಟ್ರಂಪ್, ಜಿಮ್ ಅವರ ಬಾಯಿ ಮುಚ್ಚಲು ಯತ್ನಿಸಿದ್ದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಡೆ ಭಾರೀ ವಿವಾದಕ್ಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಜಿಮ್ ಅವರನ್ನು ಮುಂದಿನ ಆದೇಶದವರೆಗೆ ವೈಟ್ ಹೌಸ್ ಪ್ರವೇಶಸಬಾರದೆಂದು ತಾಕೀತು ಮಾಡಿದೆ. ಟ್ರಂಪ್ ಅವರಿಂದ ಪತ್ರಿಕಾ ಸ್ವಾತಂತ್ರ್ಯ ಹರಣವಾಗಿದೆ ಎಂದು ಭಾರೀ ಕೂಗು ಎದ್ದಿದೆ.

ಯುವ ಮಹಿಳೆಯನ್ನು ಸ್ಪರ್ಶಿಸಿದ್ದು ಸುಳ್ಳು

ಜಿಮ್ ಅವರು ವೈಟ್ ಹೌಸ್ ನ ಮಹಿಳೆಯನ್ನು ಸ್ಪರ್ಶಿಸದಿದ್ದರೂ, ಅವರು ಆ ಯುವ ಮಹಿಳಾ ಸಿಬ್ಬಂದಿಯನ್ನು ಸ್ಪರ್ಶಿಸಿ ಅಸಭ್ಯತೆಯಿಂದ ನಡೆದುಕೊಂಡಿದ್ದಾರೆ ಎಂದು ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಆರೋಪಿಸಿದ್ದಾರೆ. ಈ ಆರೋಪವನ್ನು 'ಸುಳ್ಳು' ಎಂದು ಜಿಮ್ ಅಕೋಸ್ಟಾ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಆ ವಿಡಿಯೋ ಕ್ಲಿಪ್ಪಿಂಗ್ ಅನ್ನು ನೋಡಿದಾಗ, ಜಿಮ್ ಅವರು ಮಹಿಳೆಯನ್ನು ಯಾವುದೇ ರೀತಿಯಲ್ಲೂ ಸ್ಪರ್ಶಿಸಿಲ್ಲದಿರುವುದು ಕಂಡುಬಂದಿದೆ.

ಮುರಿದ ಬ್ಯಾಲೆಟ್, ಉದ್ದದ ಕ್ಯೂ ಮತ್ತು ಅಕ್ರಮ! ಇದು ಅಮೆರಿಕ ಚುನಾವಣೆ!

ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಪಷ್ಟನೆ

"ಅಧ್ಯಕ್ಷರು ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುತ್ತಾರೆ. ಅವರಾಗಲಿ, ಅವರ ಆಡಳಿತವಾಗಲಿ ಪತ್ರಿಕೋದ್ಯಮಿಗಳಿಂದ ಕಠಿಣ ಪ್ರಶ್ನೆಗಳನ್ನು ನಿರೀಕ್ಷಿಸುತ್ತದೆ ಮತ್ತು ಸ್ವಾಗತಿಸುತ್ತದೆ. ಆದರೆ, ತನ್ನ ಕರ್ತವ್ಯ ಮಾಡುತ್ತಿದ್ದ ಮಹಿಳೆಯ ಮೇಲೆ ಕೈ ಇಡುವುದನ್ನು ಎಂದೂ ಸಹಿಸುವುದಿಲ್ಲ. ಜಿಮ್ ಅವರ ನಡವಳಿಕೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ" ಎಂದು ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಟ್ವೀಟ್ ಮಾಡಿದ್ದರು.

ಇರಾನ್‌ನಿಂದ ತೈಲ ಆಮದು: ಭಾರತಕ್ಕೆ ವಿನಾಯಿತಿ ನೀಡಿದ ಅಮೆರಿಕ

ವಿಡಿಯೋ : ಜಿಮ್ ಯಾವುದೇ ತಪ್ಪು ಮಾಡಿಲ್ಲ

ಈ ವಿವಾದಿತ ಘಟನೆಗೆ ಸಂಬಂಧಿಸಿದಂತೆ, ಜಿಮ್ ಅಕೋಸ್ಟಾ ಅವರ ನಡವಳಿಕೆಯನ್ನು ಪುಷ್ಟೀಕರಿಸುವಂಥ ವಿಡಿಯೋವನ್ನು, ಡೆಮಾಕ್ರೆಟಿಕ್ ಪಕ್ಷವನ್ನು ಬೆಂಬಲಿಸುವ ಅಮೆರಿಕದ ವಕೀಲೆ, ಪ್ಲೇಬಾಯಿ ಬರಹಗಾರ್ತಿ ಆಮೀ ವೆಂಡರ್ಪೂಲ್ ಎಂಬುವವರು ಒಂದು ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. "ಜಿಮ್ ಅಕೋಸ್ಟಾ ಅವರು ಯಾವುದೇ ತಪ್ಪು ಮಾಡಿಲ್ಲವೆಂಬುದನ್ನು ಸಮರ್ಥಿಸಿಕೊಳ್ಳಲು ಈ ವಿಡಿಯೋ ಹಾಕಿಲ್ಲ. ಎಲ್ಲವೂ ಇಲ್ಲಿ ಸ್ಪಷ್ಟವಾಗಿದೆ. ಜಿಮ್ ಅವರು ಯಾವುದೇ ತಪ್ಪು ಮಾಡಿಲ್ಲ. ವೈಟ್ ಹೌಸ್ ಸಿಬ್ಬಂದಿ ಪ್ರತಿಬಾರಿ ಅಧ್ಯಕ್ಷರನ್ನು ಹೇಗೆ ನೋಡುತ್ತಿದ್ದಾರೆ ನೋಡಿ. ಇದು ಅತ್ಯಂತ ನಾಚಿಕೆಗೇಡಿನದು" ಎಂದು ಡೋನಾಲ್ಡ್ ಟ್ರಂಪ್ ಮತ್ತು ಅವರ ದಾರ್ಷ್ಟ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಛತ್ರಿ ಮುಚ್ಚಲು ಹೆಣಗಿದ ಟ್ರಂಪ್, ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲು

ಸಿಬ್ಬಂದಿಯನ್ನು ಸಮರ್ಥಿಸಿಕೊಂಡ ಸಿಎನ್ಎನ್

ಸಿಬ್ಬಂದಿಯನ್ನು ಸಮರ್ಥಿಸಿಕೊಂಡ ಸಿಎನ್ಎನ್

ಸಿಎನ್ಎನ್ ಕೂಡ ತನ್ನ ಉದ್ಯೋಗಿಯನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದು, ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಸುಳ್ಳು ಹೇಳಿದ್ದಾರೆ. ಅಧ್ಯಕ್ಷನ್ನು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ವೈಟ್ ಹೌಸ್ ಪ್ರವೇಶವನ್ನು ನಿರಾಕರಿಸಲಾಗಿದೆ. ಜಿಮ್ ಮೇಲ್ ಸ್ಯಾಂಡರ್ಸ್ ತಪ್ಪು ಆರೋಪ ಹೊರಿಸಿದ್ದಾರೆ. ಮತ್ತು ನಡೆಯದೇ ಇರುವ ಘಟನೆಯನ್ನು ತಪ್ಪಾಗಿ ವಿವರಿಸಿದ್ದಾರೆ. ಹಿಂದೆಂದೂ ನಡೆಯದಂಥ ಈ ಘಟನೆ ಪ್ರಜಾಪ್ರಭುತ್ವಕ್ಕೇ ಮಾರಕ. ಈ ದೇಶ ಇನ್ನೂ ಉತ್ತಮ ವ್ಯಕ್ತಿಗೆ ಅರ್ಹವಾಗಿದೆ. ಜಿಮ್ ಅಕೋಸ್ಟಾ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಮ್ ಪರವಾಗಿ ಕೇಬಲ್ ನೆಟ್ವರ್ಕ್ ಸಂಸ್ಥೆ ನಿಂತಿದೆ.

ನಾನೂ ನಿಮ್ಮ ವೈರಿಯಲ್ಲ

ಜಿಮ್ ಅಕೋಸ್ಟಾ ಅವರು ಮತ್ತೆ ಟ್ವೀಟ್ ಮಾಡಿದ್ದು, "ನಾವು ಜನರ ವೈರಿಗಳಲ್ಲ. ನಾನು ನಿಮ್ಮ (ಡೊನಾಲ್ಡ್ ಟ್ರಂಪ್) ವೈರಿಯೂ ಅಲ್ಲ. ನೀವು ನನ್ನ ವೈರಿಯಲ್ಲ. ನಿಮ್ಮ ಅಮೆರಿಕನ್ ಸಹೋದ್ಯೋಗಿಯನ್ನು ವೈರಿ ಎಂದು ಕರೆಯುವುದು ತಪ್ಪು. ನಾವೆಲ್ಲ ಒಂದೇ ತಂಡದಲ್ಲಿದ್ದೇವೆ. ನಾವೆಲ್ಲ ಅಮೆರಿಕನ್ನರು" ಎಂದು ಜಿಮ್ ಅಕೋಸ್ಟಾ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ತಿರುಗೇಟು ನೀಡಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
White House has barred CNN reporter Jim Acosta for allegedly 'Placing hand on woman' staffer. Donald Trump has been widely criticised for this action taken against reporter, terming it as threat to democracy. A video shows Jim has done nothing wrong.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more