ಜೇಮ್ಸ್ ವೆಬ್ ದೂರದರ್ಶಕ ಉಡಾವಣೆ: ಟೆಲಿಸ್ಕೋಪ್ ವಿಶೇಷತೆ ಏನು?
ನ್ಯೂಯಾರ್ಕ್, ಡಿಸೆಂಬರ್ 23: ಕ್ರಿಸ್‌ಮಸ್ ದಿನದಂದು ಅಂದರೆ ಡಿಸೆಂಬರ್ 25 ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಮಹತ್ವಾಕಾಂಕ್ಷೆಯ ''ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್'' ಉಡಾವಣೆ ಮಾಡಲಿದೆ. ಈ ಮೊದಲು ಡಿಸೆಂಬರ್ 25ರಂದು ಉಡಾವಣೆ ಮಾಡುವುದಾಗಿ ನಾಸಾ ಘೋಷಿಸಿತ್ತು, ಬಳಿಕ ಮುಂದೂಡಿತ್ತು.
ಅರಿಯಾನೆ 5 ರಾಕೆಟ್ ಮೂಲಕ ದೂರದರ್ಶಕವನ್ನು ಉಡಾಯಿಸಲು ಯೋಜನೆ ರೂಪಿಸಲಾಗಿದೆ. ಉಡಾವಣೆಯಾದ 30 ನಿಮಿಗಷಗಳಲ್ಲಿ ಜೇಮ್ಸ್ ವೆಬ್ ದೂರದರ್ಶಕವು ರಾಕೆಟ್‌ನಿಂದ ಪ್ರತ್ಯೇಕಗೊಳ್ಳಲಿದೆ. ನಂತರ ಸೌರ ಫಲಕದ ಸಹಾಯದಿಂದ ತನ್ನ ಪ್ರಯಾಣವನ್ನು ಮುಂದುವರೆಸಲಿದೆ.
As launch prep continues, let's swot up on #Webb's science goals! 👩🔬 The telescope will explore:
— ESA Webb Telescope (@ESA_Webb) December 22, 2021
🪐 Other worlds
🌟 The lifecycle of stars
🌌 The very first galaxies
🎇 The early Universe
⚫️ Black holes#Science with Webb: https://t.co/AbgekRT9cF#WebbSeesFarther #JWST pic.twitter.com/cAQDxMk3pV
30 ದಿನಗಳ ಬಳಿಕ ದೂರದರ್ಶಕವು ಸೆಕೆಂಡ್ ಲ್ಯಾಗ್‌ರೇಂಜ್ ಪಾಯಿಂಟ್(ಎಲ್2)ಗೆ ತಲುಪಲಿದೆ. ನಾಸಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹಾಗೂ ಕೆನಡಾ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ಈ ದೂರದರ್ಶಕವನ್ನು ಅಭಿವೃದ್ಧಿಪಡಿಸಿವೆ.

ಹಬಲ್ ದೂರದರ್ಶಕವು ಈ ಬ್ರಹ್ಮಾಂಡದ ಕುರಿತು ನಮಗೆ ಅಗಾಧ ಮಾಹಿತಿ
ಹಬಲ್ ದೂರದರ್ಶಕವು ಈ ಬ್ರಹ್ಮಾಂಡದ ಕುರಿತು ನಮಗೆ ಅಗಾಧ ಮಾಹಿತಿಯನ್ನು ಒದಗಿಸಿದೆ. ಈಗ ಉಡಾವಣೆಯಾಗಲಿರುವ ಜೇಮ್ಸ್ ವೆಬ್ ದೂರದರ್ಶಕವು ಬ್ರಹ್ಮಾಂಡದಲ್ಲಿ ಆರಂಭದಲ್ಲಿ ಸೃಷ್ಟಿಯಾದ ಕೆಲವು ನಕ್ಷತ್ರಪುಂಜಗಳನ್ನು ಪತ್ತೆಹಚ್ಚಲು ಹಾಗೂ ನಮ್ಮ ಕ್ಷೀರಪಥ ಸೇರಿದಂತೆ ವಿವಿಧ ತಾರಾಪುಂಜಗಳು ಸೃಷ್ಟಿಯಾಗಿದ್ದು, ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲೂ ಖಗೋಳವಿಜ್ಞಾನಿಗಳಿಗೆ ನೆರವಾಗಲಿದೆ.
ಜೇಮ್ಸ್ ವೆಬ್‌ನ ಮೂಲ ದರ್ಪಣವು ಚಿನ್ನ ಲೇಪಿತವಾಗಿದ್ದು, 6.5 ಮೀಟರ್ ವ್ಯಾಸವನ್ನು ಹೊಂದಿದೆ. ಹಬಲ್ ಸೂರದರ್ಶಕದಲ್ಲಿ ಇದು 2.4 ಮೀ. ಆಗಿದೆ. ಜೇಮ್ಸ್ ವೆಬ್ ದೂರದರ್ಶಕದ ಅವರೋಹಿತ ಪರಿವೀಕ್ಷಣಾ ಸಾಮರ್ಥ್ಯದಿಂದಾಗಿ, ದೂರದ ತಾರಾಪುಂಜಗಳಲ್ಲಿರುವ ನಕ್ಷತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಲು ಸಾಧ್ಯವಾಗಲಿದೆ.

ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ ಜೇಮ್ಸ್ ವೆಬ್
1990ರಲ್ಲಿ ಉಡಾವಣೆಯಾದ ಹಬಲ್ ದೂರದರ್ಶಕವು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿದ್ದರೆ , ಜೇಮ್ಸ್ ವೆಬ್ ದೂರದರ್ಶಕವು ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿ ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ. ಹೀಗಾಗಿಯೇ ಈ ದೂರದರ್ಶಕದ ಉಡಾವಣೆ ಮತ್ತು ನಿಯೋಜನೆಯು ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ ವಿಜ್ಞಾನಿಗಳು. ಖಗೋಳ ಲೋಕದಲ್ಲಿ ಮಹಾನ್ ಕ್ರಾಂತಿಯೇ ನಡೆಯುತ್ತಿದೆ. ಅಸಾಧ್ಯ ಎಂದು ಭಾವಿಸಿದ್ದನ್ನು ಸಾಧ್ಯ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ. ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಪ್ರಯತ್ನ ಶೀಘ್ರವೇ ಸಾಕಾರಗೊಳ್ಳಲಿದೆ.

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆ
ಹೌದು. ಬ್ರಹ್ಮಾಂಡ ಸೃಷ್ಟಿಯ ರಹಸ್ಯವನ್ನು ಬೇಧಿಸಲು ಟೈಮ್ ಮಷಿನ್ ಮಾದರಿಯ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆಗೆ ಫ್ರೆಂಚ್ ಗಯಾನದಲ್ಲಿ ಕೌಂಟ್‍ಡೌನ್ ಶುರುವಾಗಿದೆ. ಇದು ಯಶಸ್ವಿಯಾದಲ್ಲಿ ಮುಂದಿನ ನಾಲ್ಕು ಶತಮಾನಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕೇವಲ 10 ವರ್ಷಗಳಲ್ಲಿ ತಿಳಿದುಕೊಳ್ಳಬಹುದಾಗಿದೆ.
ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷ.

ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್
ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು. ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಇದನ್ನು ಕೆಲವರು ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯುತ್ತಾರೆ.
2007ರಲ್ಲೇ ಇದನ್ನು ಪ್ರಯೋಗಿಸಲು ಸಿದ್ಧತೆ ನಡೆದಿತ್ತು. ಆದ್ರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು. ಇದರ ನಿರ್ಮಾಣಕ್ಕೆ ಆರಂಭದಲ್ಲಿ 50 ಕೋಟಿ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 730 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.
ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ಹಿಡಿಯುತ್ತದೆ. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ. ಇಲ್ಲಿಂದ ವಿಶ್ವವನ್ನು ತುಂಬಾ ಸ್ಪಷ್ಟವಾಗಿ ಗಮನಿಸಲು ಅವಕಾಶ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಟೆಲಿಸ್ಕೋಪ್ ವಿಶೇಷತೆ ಏನು?
ವಿಶೇಷತೆ ಏನು?: ಹಬಲ್ ಟೆಲಿಸ್ಕೋಪ್‍ಗಿಂತ ಜೇಮ್ಸ್ ಟೆಲಿಸ್ಕೋಪ್ ವಿಸ್ತೀರ್ಣದಲ್ಲಿ ಎರಡೂವರೆ ಪಟ್ಟು ದೊಡ್ಡದು. ಕಾಂತಿಯನ್ನು ಗ್ರಹಿಸಲು ಅಳವಡಿಸಲಾದ ಪ್ರಧಾನ ಕನ್ನಡಿಯ ಅಗಲ 6.5 ಮೀಟರ್ ಇದೆ. ಈ ಪ್ರಧಾನ ಕನ್ನಡಿಯನ್ನು 18 ಷಟ್‍ಭುಜಾಕೃತಿಗಳಾಗಿ ವಿಂಗಡಿಸಿ ನಿರ್ಮಿಸಲಾಗಿದೆ.
ಉಡಾವಣೆ ವೇಳೆ ಈ ಕನ್ನಡಿ ಮಡಚಿಟ್ಟ ಸ್ಥಿತಿಯಲ್ಲಿ ಇರುತ್ತದೆ. ಗಮ್ಯ ಸೇರಿದ ನಂತರ ತೆರೆದುಕೊಳ್ಳಲಿದೆ. ಸೂರ್ಯನ ಕಡೆ ಇರುವ ಟೆಲಿಸ್ಕೋಪ್ ಭಾಗ 22 ಮೀಟರ್ ಉದ್ದವಿದ್ದು ಇದು 85 ಡಿಗ್ರಿವರೆಗೂ ಬಿಸಿಯೇರಬಹುದು. ಟೆಲಿಸ್ಕೋಪ್‍ಗೆ ಆಗುವ ಸಂಭಾವ್ಯ ಹಾನಿ ತಡೆಯಲು ಏಳು ಸುತ್ತಿನ ರಕ್ಷಣಾ ಕವಚ ನಿರ್ಮಾಣ ಮಾಡಲಾಗಿದೆ. ಸೂರ್ಯನಿಗೆ ವಿರುದ್ಧವಿರುವ ಭಾಗ -233 ಡಿಗ್ರಿ ಸೆಂಟಿಗ್ರೇಡ್ ಇದ್ದು ಅತೀಶೀತಲವಾಗಿರುತ್ತದೆ. 40 ಕಿಲೋಮೀಟರ್ ದೂರದಲ್ಲಿರುವ ಒಂದು ನಾಣ್ಯವನ್ನು ಸ್ಪಷ್ಟವಾಗಿ ತೋರಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿದೆ.