• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆ

|

ವಾಷಿಂಗ್ಟನ್, ನವೆಂಬರ್ 18: ಭಾರತ ಮೂಲದ ಅಮೆರಿಕನ್ನರಾದ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಮತ್ತು ಪ್ರೊಫೆಸರ್ ಅರುಣ್ ಮಜುಂದಾರ್ ಅವರು ಜೋ ಬೈಡನ್- ಕಮಲಾ ಹ್ಯಾರಿಸ್ ಅವರ ಹೊಸ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಪ್ರಸ್ತುತ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಕೋವಿಡ್ 19 ಕಾರ್ಯಾಪಡೆಗೆ ಪ್ರಮುಖ ಸಲಹೆಗಾರರಾಗಿ ಡಾ. ವಿವೇಕ್ ಮೂರ್ತಿ ಕಾರ್ಯನಿರ್ವಹಿಸುತ್ತಿದ್ದು, ಅವರು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ಸೂಕ್ತರಾಗಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅರುಣ್ ಮಜುಂದಾರ್ ಅವರನ್ನು ಎನರ್ಜಿ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಭಾರತದಲ್ಲಿದ್ದಾರೆ ಜೋ ಬೈಡನ್ ದೂರದ ಸಂಬಂಧಿಕರು

ಮಂಡ್ಯ ಜಿಲ್ಲೆಯ ಹಲ್ಲಗೆರೆ ಮೂಲದವರಾದ 43 ವರ್ಷದ ವಿವೇಕ್ ಮೂರ್ತಿ ಅವರು ಜೋ ಬೈಡನ್ ಅವರ ಅಧಿಕಾರ ಹಸ್ತಾಂತರ ಕೋವಿಡ್ ಸಲಹಾ ಮಂಡಳಿಯ ಸಹ ಮುಖ್ಯಸ್ಥರಾಗಿದ್ದಾರೆ. ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅವರು ಬೈಡನ್ ಅವರ ಆಪ್ತ ಸಲಹೆಗಾರರಾಗಿದ್ದಾರೆ.

ಇದೇ ರೀತಿ ಅರುಣ್ ಮಜುಂದಾರ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದು, 2009ರಲ್ಲಿ ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಆಧುನಿಕ ಸಂಶೋಧನಾ ಯೋಜನೆಗಳ ಸಂಸ್ಥೆ- ಎನರ್ಜಿಯ ಮೊದಲ ನಿರ್ದೇಶಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಈಗ ಅವರು ಇಂಧನ ಸಂಬಂಧಿ ವಿಚಾರಗಳಿಗೆ ಬೈಡನ್ ಅವರ ಪ್ರಮುಖ ಸಲಹೆಗಾರರಾಗಿದ್ದಾರೆ.

ಜೋ ಬೈಡನ್ ಪರಾಮರ್ಶನಾ ತಂಡಗಳಲ್ಲಿ ಭಾರತ ಮೂಲದ 20 ಮಂದಿಗೆ ಸ್ಥಾನ

ಮಾಜಿ ಇಂಧನ ಕಾರ್ಯದರ್ಶಿ ಅರ್ನಸ್ಟ್ ಮೋನಿಜ್, ಸ್ಟ್ಯಾನ್‌ಫೋರ್ಡ್ ವಿವಿಯ ವಿಧ್ವಾಂಸ ಡ್ಯಾನ್ ರೀಚರ್ ಮತ್ತು ಮಾಜಿ ಇಂಧನ ಉಪ ಕಾರ್ಯದರ್ಶಿ ಎಲಿಜಬೆತ್ ಶೇರ್ವುಡ್ ರಂಡಾಲ್ ಅವರ ಹೆಸರು ಕೂಡ ಇಂಧನ ಕಾರ್ಯದರ್ಶಿ ಹುದ್ದೆಗೆ ಕೇಳಿಬರುತ್ತಿದೆ.

English summary
US Elections: Indian Americans Vivek Murthy and Arun Majumdar likely picks in Joe Biden-Kamala Harris cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X