ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಟ: ಮೋದಿ ಹೆಗಲಿಗೆ ಹೆಗಲು ಕೊಟ್ಟ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 16: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಅಮೆರಿಕವು ಭಾರತಕ್ಕೆ ವೆಂಟಿಲೇಟರ್‌ ಅನ್ನು ಒದಗಿಸಲಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಹಾಗೆಯೇ ನರೇಂದ್ರ ಮೋದಿಯವರ ಜೊತೆಗೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್

ಕೊವಿಡ್ 19 ವಿರುದ್ಧ ಹೋರಾಡಲು ಲಸಿಕೆ ಕಂಡು ಹಿಡಿಯುವಲ್ಲಿ ಅಮೆರಿಕವು ಭಾರತದ ಜೊತೆ ಕೈಜೋಡಿಸಿದೆ. ಭಾರತ ಹಾಗೂ ಅಮೆರಿಕದಲ್ಲಿ ಉತ್ತಮ ಸಂಶೋಧಕರಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಲಭ್ಯವಾಗಲಿದೆ

ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಲಭ್ಯವಾಗಲಿದೆ

ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಲಭ್ಯವಾಗಲಿದೆ. ಮಾಜಿ ಫಾರ್ಮಾಸುಟಿಕಲ್ ಎಕ್ಸಿಕ್ಯೂಟಿವ್ ಅನ್ನು ಇದಕ್ಕೆ ನೇಮಿಸಲಾಗಿದ್ದು, ಸಂಶೋಧನೆಗೆ ಚುರುಕು ದೊರೆತಿದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯ ಸಂಶೋಧಕರಿಂದಲೂ ಸಹಾಯ

ಅಮೆರಿಕದಲ್ಲಿರುವ ಭಾರತೀಯ ಸಂಶೋಧಕರಿಂದಲೂ ಸಹಾಯ

ಕಳೆದು ಕೆಲವು ತಿಂಗಳಿನಿಂದ ಲಸಿಕೆ ಕಂಡು ಹಿಡಿಯಲು ಅಮೆರಿಕ ಹಾಗೂ ಅಮೆರಿಕದಲ್ಲಿರುವ ಭಾರತೀಯ ಸಂಶೋಧಕರು ಕಷ್ಟಪಡುತ್ತಿದ್ದಾರೆ. ಹಾಗೆಯೇ ಕೊರೊನಾವನ್ನು ಶೀಘ್ರ ಪತ್ತೆಹಚ್ಚಬಹುದಾದಂತಹ ಸಾಧನದ ತಯಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆ

ಮೋದಿ ಉತ್ತಮ ಸ್ನೇಹಿತ

ಮೋದಿ ಉತ್ತಮ ಸ್ನೇಹಿತ

ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಒಳ್ಳೆಯ ಸ್ನೇಹಿತ ಎಂದಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಒಂದೊಮ್ಮೆ ಹೈಡ್ರೊಕ್ಸಿಕ್ಲೋರೊಕ್ವಿನ್ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದ ಟ್ರಂಪ್ , ಭಾರತವು 29 ಮಿಲಿಯನ್ ಡೋಸ್‌ಗಳನ್ನು ಅಮೆರಿಕಕ್ಕೆ ನೀಡಲು ಒಪ್ಪಿದ ಬಳಿಕ ಶಾಂತವಾಗಿದ್ದರು.

ವಿಶ್ವದಾದ್ಯಂತ 3 ಲಕ್ಷ ಮಂದಿ ಸಾವು

ವಿಶ್ವದಾದ್ಯಂತ 3 ಲಕ್ಷ ಮಂದಿ ಸಾವು

ವಿಶ್ವದಾದ್ಯಂತ ಕೊರೊನಾ ವೈರಸ್‌ನಿಂದ 3 ಲಕ್ಷ ಮಂದಿ ಮೃತಪಟ್ಟಿದ್ದಾರೆ. 44 ಲಕ್ಷ ಮಂದಿ ಕೊರೊನಾದಿಂದ ನರಳುತ್ತಿದ್ದಾರೆ. ಅಮೆರಿಕದಲ್ಲಿ ಈಗಾಗಲೇ 80 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

English summary
US President Donald Trump on Saturday tweeted that his country would donate ventilators to India in the fight against COVID-19. "We stand with India and Prime Minister Narendra Modi during this pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X