• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಟ್ರಂಪ್‌ಗೆ ವೋಟ್ ಹಾಕಿ, ಇಲ್ಲ ಅಂದ್ರೆ..!’: ಅಮೆರಿಕನ್ ಮತದಾರರಿಗೆ ಬೆದರಿಕೆ

|

1, 2, 3... ಅಷ್ಟೇ, 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತೆರೆ ಬೀಳಲಿದೆ. ಹೀಗಾಗಿ ಅಮೆರಿಕನ್ನರಿಗೆ ವೋಟ್ ಮಾಡಲು ಇನ್ನೇನು 3 ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ ಈ ಹೊತ್ತಲ್ಲೇ ಇಡೀ ಅಮೆರಿಕ ಬೆಚ್ಚಿಬೀಳುವ ಘಟನೆ ನಡೆದಿದೆ. ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್, ಇ-ಮೇಲ್ ಮೂಲಕ ಅಮೆರಿಕನ್ನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಟ್ರಂಪ್‌ಗೆ ವೋಟ್ ಹಾಕಬೇಕು, ಇಲ್ಲ ಅಂದ್ರೆ ನಾವು ಬರ್ತೀವಿ ಅಂತಾ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ.

ಅಂದಹಾಗೆ ಹ್ಯಾಕರ್ಸ್ ಕಳೆದ ವಾರ ಆನ್‌ಲೈನ್‌ನಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ ಮತದಾರರ ಮಾಹಿತಿ ಇದೆ ಎಂಬುದನ್ನು ಹ್ಯಾಕರ್ಸ್ ತೋರಿಸಿಕೊಟ್ಟಿದ್ದರು.

ಟ್ರಂಪ್ ವೆಬ್‌ಸೈಟ್ ಹ್ಯಾಕ್, ಬೆಂಬಲಿಗರಿಗೆ ಬಿಗ್ ಶಾಕ್

ಈ ಘಟನೆ ನಡೆದು ಒಂದು ವಾರ ಕಳೆಯುವ ಒಳಗಾಗಿ ಅಮೆರಿಕದ ಮತದಾರರಿಗೆ ಬೆದರಿಕೆ ಸಂದೇಶಗಳು ಬರುತ್ತಿವೆ. ಮುಖ್ಯವಾಗಿ ಅಮೆರಿಕದ ಫ್ಲೋರಿಡಾ, ಅಲಾಸ್ಕಾ ರಾಜ್ಯಗಳಲ್ಲಿ ಈ ರೀತಿ ಇ-ಮೇಲ್ ಹರಿದಾಡುತ್ತಿವೆ. 9 ಕೋಟಿಗೂ ಹೆಚ್ಚು ಅಮೆರಿಕನ್ನರು ವೋಟ್ ಹಾಕಿದ್ದು, ಮತದಾನಕ್ಕೆ ನವೆಂಬರ್ 3 ಕಡೆಯ ದಿನವಾಗಿರಲಿದೆ.

ರಿವೇಂಜ್ ತೆಗೆದುಕೊಳ್ತಾ ಇರಾನ್..?

ರಿವೇಂಜ್ ತೆಗೆದುಕೊಳ್ತಾ ಇರಾನ್..?

ಕೆಲ ತಿಂಗಳ ಹಿಂದಷ್ಟೇ ಇರಾನ್‌ನ ಅಣು ವಿದ್ಯುತ್ ಸ್ಥಾವರದ (ಇಲ್ಲಿ ಪರಮಾಣು ಬಾಂಬ್ ಸಂಶೋಧನೆ ನಡೆಯುತ್ತಿದೆ ಎಂಬ ಆರೋಪವಿತ್ತು) ಮೇಲೆ ಸೈಬರ್ ದಾಳಿ ನಡೆದಿತ್ತು. ಹ್ಯಾಕರ್‌ಗಳಿಂದ ಇರಾನ್‌ನ ಅಣು ಸ್ಥಾವರದ ಒಳಗೆ ಭೀಕರ ಸ್ಫೋಟಗಳು ಸಂಭವಿಸಿದ್ದವು. ಒಂದು ಬಾರಿ ಅಲ್ಲ ಅಂತಾ, ಎರಡೆರಡು ಸಾರಿ ಈ ರೀತಿ ದಾಳಿ ನಡೆದಿತ್ತು. ದಾಳಿ ಹಿಂದೆ ಇಸ್ರೇಲ್ ಹಾಗೂ ಅಮೆರಿಕ ಕಾರ್ಯತಂತ್ರ ಇದೆ ಎಂಬುದು ಇರಾನ್ ಆರೋಪವಾಗಿತ್ತು. ಜಗತ್ತಿನಾದ್ಯಂತ ಘಟನೆ ಭಾರಿ ಚರ್ಚೆಗೆ ಈಡು ಮಾಡಿತ್ತು. ಅಲ್ಲದೆ ಇರಾನ್‌ನ ಅಶಕ್ತ ಸ್ಥಿತಿ ನೋಡಿ, ವಿರೋಧಿಗಳು ನಕ್ಕಿದ್ದರು. ಈಗ ಇರಾನ್ ತನಗಾದ ನೋವಿಗೆ ರಿವೇಂಜ್ ತೆಗೆದುಕೊಳ್ಳುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಇರಾನ್‌ನ ‘ಕಾಮಿಡಿ ಪೀಸ್’ ರೀತಿ ನೋಡಿದ್ದರು

ಇರಾನ್‌ನ ‘ಕಾಮಿಡಿ ಪೀಸ್’ ರೀತಿ ನೋಡಿದ್ದರು

ಒಂದು ದೇಶ ತನ್ನ ಮಾನ ಜಾಗತಿಕವಾಗಿ ಹರಾಜಾದ ಸಂದರ್ಭ ಕೊತ ಕೊತ ಕುದಿಯುವುದು ಮಾಮೂಲು. ಅದರಲ್ಲೂ ಇರಾನ್ ನಾಯಕರಿಗೆ ಬಿಪಿ ಒಂದಷ್ಟು ಹೆಚ್ಚಾಗಿಯೇ ಇದೆ. ಆದರೆ ಈ ಕೋಪಕ್ಕೆ ಮತ್ತಷ್ಟು ಉಪ್ಪು ಸುರಿಯುವ ಕೆಲಸ ಮಾಡಿದ್ದು, ಇಸ್ರೇಲ್ ಹಾಗೂ ಅಮೆರಿಕ ಅಧ್ಯಕ್ಷರು. ಇರಾನ್‌ನಲ್ಲಿ ಸೈಬರ್ ದಾಳಿಯಾಗಿ, ಬೆಂಕಿ ಹೊತ್ತಿದ್ದಾಗ ಇರಾನ್‌ನ ಕಾಮಿಡಿ ಪೀಸ್ ರೀತಿ ನೋಡಿದ್ದರು. ಹೀಗೆ ತಮ್ಮ ಅಣು ವಿದ್ಯುತ್ ಸ್ಥಾವರಗಳ ಮೇಲೆ ನಡೆದ ದಾಳಿ ಹಾಗೂ ತಮಗಾಗಿದ್ದ ಅವಮಾನಕ್ಕೆ ಪ್ರತಿಕಾರ ತೆಗೆದುಕೊಳ್ಳಲು ತಿಂಗಳುಗಟ್ಟಲೇ ಪ್ಲ್ಯಾನ್ ರೂಪಿಸಿತ್ತು ಇರಾನ್. ಈ ಕಾರಣಕ್ಕೆ ಅಮೆರಿಕ ಚುನಾವಣೆಯನ್ನೇ ಟಾರ್ಗೆಟ್ ಮಾಡಿ, ಕೆಲವು ರಾಜ್ಯಗಳಿಂದ ಮತದಾರರ ಮಾಹಿತಿ ಕದ್ದು ಅವರಿಗೆ ಇ-ಮೇಲ್ ಮೂಲಕ ಬೆದರಿಕೆಯನ್ನೂ ಹಾಕಲಾಗುತ್ತಿದೆ ಎನ್ನಲಾಗಿದೆ.

ಟ್ರಂಪ್ ಹೆಸರು ಬಳಸಿದ ಕಿಲಾಡಿಗಳು..!

ಟ್ರಂಪ್ ಹೆಸರು ಬಳಸಿದ ಕಿಲಾಡಿಗಳು..!

ಈಗಾಗಲೇ ಟ್ರಂಪ್‌ ವಿರುದ್ಧ ಅಮೆರಿಕ ಮತದಾರರು ತಿರುಗಿಬಿದ್ದಿದ್ದಾರೆ. ಈ ಹೊತ್ತಲ್ಲೇ ಟ್ರಂಪ್‌ಗೆ ಹ್ಯಾಕರ್ಸ್ ಕೂಡ ತಲೇನೋವಾಗಿದ್ದಾರೆ. ಮತದಾರರಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕುತ್ತಿರುವ ಹ್ಯಾಕರ್‌ಗಳು, ‘ಈ ಬಾರಿ ನೀವು ಟ್ರಂಪ್‌ಗೆ ವೋಟ್ ಹಾಕಬೇಕು. ಇಲ್ಲವಾದರೆ ಮುಂದಿನ ಪರಿಣಾಮ ಗೊತ್ತಲ್ವಾ, ನಾವು ಎಂಟ್ರಿ ಆಗ್ತೀವಿ ಅಷ್ಟೇ' ಎಂಬ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ. ಈ ಮೂಲಕ ಟ್ರಂಪ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲೇ ಅಮೆರಿಕದ ಮತದಾರರು ಕೆಂಡವಾಗಿರುವ ಈ ಸಂದರ್ಭದಲ್ಲಿ, ಟ್ರಂಪ್‌ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂಬ ಆರೋಪ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರದ್ದು.

ಟ್ರಂಪ್‌ಗೆ ಶಕುನ ಸರಿಯಿಲ್ವಾ..?

ಟ್ರಂಪ್‌ಗೆ ಶಕುನ ಸರಿಯಿಲ್ವಾ..?

ಟ್ರಂಪ್‌ಗೆ ಶಕುನ ಸರಿಯಿಲ್ಲ ಅಂತಾ ಕಾಣುತ್ತೆ. ಏಕೆಂದರೆ ಚುನಾವಣೆಗೆ ಕೌಂಟ್‌ಡೌನ್ ಆರಂಭವಾದ ಬೆನ್ನಲ್ಲೇ ಮೇಲಿಂದ ಮೇಲೆ ಟ್ರಂಪ್‌ಗೆ ಸಂಕಷ್ಟಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟ್ರಂಪ್ ಕ್ಯಾಂಪೇನ್ ವೆಬ್‌ ಹ್ಯಾಕ್ ಆಗಿತ್ತು. ಕ್ರಿಪ್ಟೋಕರೆನ್ಸಿ ವಂಚಕರು ಅಂದರೆ ಬಿಟ್‌ಕಾಯಿನ್ ರೀತಿ ವ್ಯವಹಾರ ನಡೆಸುವ ಕಿರಾತಕರು ಟ್ರಂಪ್ ವೆಬ್‌ಗೆ ಕನ್ನ ಹಾಕಿದ್ದರು. ವೆಬ್ ಹ್ಯಾಕ್ ಮಾಡಿದ್ದಲ್ಲದೆ ತರಲೆ ಕೆಲಸವನ್ನೂ ಮಾಡಿದ್ದರು. ಟ್ರಂಪ್ ವೆಬ್ ಹ್ಯಾಕ್ ಆದ ಬಳಿಕ ಟ್ರಂಪ್ ವಿರುದ್ಧವೇ ಸುದ್ದಿ ಹರಡಿದ್ದ ಹ್ಯಾಕರ್ಸ್, ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಪ್ರತಿದಿನ ನಕಲಿ ಸುದ್ದಿ ಹರಡಿದ್ದಾರೆ. ಜಗತ್ತಿಗೆ ಸತ್ಯ ತಿಳಿಯಲು ಅವಕಾಶ ನೀಡುವ ಸಮಯ ಇದು ಎಂದು ಬರೆದುಕೊಂಡಿದ್ದರು. ಈ ಘಟನೆ ನಡೆದು 2 ದಿನಗಳ ಒಳಗೆ ಅಮೆರಿಕದ ಮತದಾರರಿಗೆ ಬೆದರಿಕೆ ಇ-ಮೇಲ್ ಬರುತ್ತಿವೆ. ಅದೂ ಟ್ರಂಪ್ ಪರವಾಗಿ ಎಂಬುದೇ ವಿಶೇಷ.

ಟ್ರಂಪ್‌ಗೆ ಈ ರೀತಿ ಶಾಕ್ ಮೊದಲನೇಲ್ಲ

ಟ್ರಂಪ್‌ಗೆ ಈ ರೀತಿ ಶಾಕ್ ಮೊದಲನೇಲ್ಲ

ಡೊನಾಲ್ಡ್ ಟ್ರಂಪ್‌ಗೆ ಈ ರೀತಿ ಶಾಕ್ ಸಿಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇದೇ ರೀತಿ ಅನುಭವ ಆಗಿದೆ. ಡಚ್‌ನ ಭದ್ರತಾ ಸಂಶೋಧಕರೊಬ್ಬರು ಟ್ರಂಪ್‌ ಟ್ವಿಟ್ಟರ್ ಖಾತೆಗೆ ಲಾಗ್‌ಇನ್ ಆಗಿದ್ದರು. ಟ್ರಂಪ್ ಪಾಸ್‌ವರ್ಡ್ ಊಹೆ ಮಾಡಿದ್ದ ಅವರು, ಲಾಗಿನ್ ಆಗಿಬಿಟ್ಟಿದ್ದರು. ಅಲ್ಲದೆ ಅಮೆರಿಕದ ‘ಸಿಇಆರ್‌ಟಿ' ಎಂಬ ಸೈಬರ್ ಭದ್ರತಾ ಘಟಕಕ್ಕೆ ಈ ಕುರಿತು ಮೆಸ್ಸೇಜ್ ಕೂಡ ಕಳುಹಿಸಿದ್ದರು. ಆದರೆ ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್‌ ಆಗಿದ್ದನ್ನ ಒಪ್ಪಿಕೊಳ್ಳದ ಟ್ರಂಪ್, ನನ್ನ ಟ್ವಿಟ್ಟರ್ ಅಕೌಂಟ್‌ಗೆ ಹಾನಿಯಾಗಿಲ್ಲ. ನನ್ನ ಅಕೌಂಟ್ ಹ್ಯಾಕ್ ಮಾಡಲು 197 IQ ಬೇಕು ಎಂದಿದ್ದರು.

ಅಮೆರಿಕ ಸರ್ಕಾರಿ ಕಂಪ್ಯೂಟರ್‌ಗಳೇ ಹ್ಯಾಕ್..!

ಅಮೆರಿಕ ಸರ್ಕಾರಿ ಕಂಪ್ಯೂಟರ್‌ಗಳೇ ಹ್ಯಾಕ್..!

ಕಳೆದ ವಾರ ಅಮೆರಿಕದಲ್ಲಿ ವಿಚಿತ್ರ ಘಟನೆ ನಡೆದಿತ್ತು. ಖುದ್ದು ಅಮೆರಿಕದ ಫೆಡರಲ್ ಅಧಿಕಾರಿಗಳು ಹಲವು ರಾಜ್ಯಗಳ ಸರ್ಕಾರಿ ಕಂಪ್ಯೂಟರ್‌ಗಳು ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ರಷ್ಯಾ ನಮ್ಮ ಮೇಲೆ ಸೈಬರ್ ದಾಳಿ ಮಾಡಿದೆ ಎಂದು ಫೆಡರಲ್ ಅಧಿಕಾರಿಗಳು ಆರೋಪಿಸಿದ್ದರು. ರಷ್ಯಾದ ನುರಿತ ಹ್ಯಾಕರ್‌ಗಳ ತಂಡವು ಅಮೆರಿಕದ ವಿವಿಧ ವಲಯಗಳನ್ನು ಟಾರ್ಗೆಟ್ ಮಾಡಿದೆ ಎಂದು ಅಮೆರಿಕ ಆರೋಪಿಸಿತ್ತು. ಈಗಾಗಲೇ ಅಮೆರಿಕ ಮತದಾರರ ಮಾಹಿತಿ ಕದ್ದಿರುವ ಆರೋಪ ರಷ್ಯಾ ಮೂಲದ ಹ್ಯಾಕರ್‌ಗಳ ಮೇಲಿದೆ. ಈ ನಡುವೆ ನೀರು ಸರಬರಾಜು ಕೇಂದ್ರಗಳು, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗಿತ್ತು.

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್‌ಪೋರ್ಟ್‌ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ಮೇಲೆ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಕಳೆದ ವಾರ ಆರೋಪಿಸಿತ್ತು.

ಬಿಡೆನ್ ಕೊಟ್ಟ ವಾರ್ನಿಂಗ್ ಏನು..?

ಬಿಡೆನ್ ಕೊಟ್ಟ ವಾರ್ನಿಂಗ್ ಏನು..?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶತ್ರುದೇಶಗಳು ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆ ಎಂದು ಡಿಬೆಟ್ ವೇಳೆ ಬಿಡೆನ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಅಮೆರಿಕ ತಂಟೆಗೆ ಬಂದವರಿಗೆ ಮುಂದಿದೆ ಮಾರಿಹಬ್ಬ ಎಂಬ ಮುನ್ಸೂಚನೆ ಬಿಡೆನ್‌ರಿಂದ ಸಿಕ್ಕಿತ್ತು. ಬಿಡೆನ್ ಈ ರೀತಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಷ್ಯಾ ಹ್ಯಾಕರ್ಸ್ ಕೃತ್ಯ ಬಟಾಬಯಲಾಗಿದೆ. ರಷ್ಯಾ ಮೂಲದ ಹ್ಯಾಕರ್‌ಗಳ ಬಗ್ಗೆ ಬಿಡೆನ್ ಸಹಿತವಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಹಲವು ವರ್ಷಗಳಿಂದ ನಾನಾ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಮಧ್ಯೆ ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸಂಬಂಧಿಸಿದ ವೆಬ್‌ಸೈಟ್ ಕೂಡ ಹ್ಯಾಕ್ ಆಗಿರುವುದು ಆಘಾತ ಕೊಟ್ಟಿದೆ.

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

English summary
US Elections: Some threatening emails that were sent last week to US voters in multiple states, including Florida and Alaska. US accused on Iran about this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X