ಭಾರತಕ್ಕೆ ನೆರವು ನೀಡಲು ಅಮೆರಿಕದಿಂದ ಬರುತ್ತಿದೆ ತಜ್ಞರ ತಂಡ

ವಾಷಿಂಗ್ಟನ್, ಏಪ್ರಿಲ್ 28: ಭಾರತದಲ್ಲಿ ಕೊರೊನಾ ಪ್ರಕರಣ ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆರವು ನೀಡಲು ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಹಾಗೂ ರೋಗ ನಿಯಂತ್ರಣ ನಿವಾರಣಾ ಕೇಂದ್ರದ ತಂಡವನ್ನು ತುರ್ತಾಗಿ ನಿಯೋಜಿಸುತ್ತಿರುವುದಾಗಿ ಅಮೆರಿಕ ತಿಳಿಸಿದೆ.

ಭಾರತ ಸರ್ಕಾರಕ್ಕೆ ಹಾಗೂ ಅಲ್ಲಿನ ಸ್ಥಳೀಯ ಆಡಳಿತಗಳಿಗೆ ಕೊರೊನಾ ನಿಯಂತ್ರಣ ಸಂಬಂಧ ನೆರವು ನೀಡಲು ಈ ತಂಡ ಶೀಘ್ರವೇ ಭಾರತಕ್ಕೆ ಆಗಮಿಸುವುದಾಗಿ ತಿಳಿದುಬಂದಿದೆ.

ಲ್ಯಾಬೊರೇಟರಿ ಸೇವೆ, ಸಾಂಕ್ರಾಮಿಕ ರೋಗಶಾಸ್ತ್ರ, ಸೋಂಕು ನಿವಾರಣೆ ಹಾಗೂ ಕೊರೊನಾ ಸಂಬಂಧಿ ಕ್ರಮಗಳ ಕುರಿತು ಈ ತಂಡ ಭಾರತದಲ್ಲಿ ನೆರವಾಗಲಿದೆ. ಏಡ್ಸ್ , ಟಿಬಿ ಹಾಗೂ ಮಲೇರಿಯಾ ರೋಗ ಸಂಬಂಧಿ ಇರುವ ಜಾಗತಿಕ ನಿಧಿಯ ಹಣವನ್ನು ತುರ್ತಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಬೆಂಬಲ ನೀಡಲಿದೆ.

US To Deploy Experts Team To Aid Indias Covid Situation

ಭಾರತದ ಲಸಿಕಾ ಅಭಿಯಾನ ಹಾಗೂ ಕೊರೊನಾ ನಿಯಂತ್ರಣ ಪ್ರಯತ್ನಗಳಿಗೆ ತಂಡವು ತಾಂತ್ರಿಕ ನೆರವು ನೀಡಲಿದೆ. ಭಾರತದಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮವನ್ನು ವೇಗಗತಿಯಲ್ಲಿ ನಡೆಸಲು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತರಿಸಿಕೊಳ್ಳಲು ಬೇಡಿಕೆ ಇಟ್ಟಿದ್ದ ಲಸಿಕೆಗಳನ್ನು ತಿರುಗಿ ಭಾರತಕ್ಕೆ ನೀಡುವುದಾಗಿ ಅಮೆರಿಕ ಘೋಷಿಸಿದೆ. ಭಾರತಕ್ಕೆ ನಮ್ಮ ನೆರವು ನೀಡಲು ಇದು ಪರಿಣಾಮಕಾರಿ ಮಾರ್ಗ ಎನಿಸುತ್ತಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+