• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಲಸಿಕೆ ಅಭಿವೃದ್ಧಿ : WHO ಜೊತೆ ಕೈಜೋಡಿಸಲ್ಲ ಎಂದ ಅಮೆರಿಕ

|

ವಾಷಿಂಗ್ಟನ್, ಸೆಪ್ಟೆಂಬರ್ 02: ಕೊರೊನಾ ಲಸಿಕೆ ಅಭಿವೃದ್ಧಿ ಅಥವಾ ಮಾರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪಾತ್ರವಿದ್ದರೆ ನಾವು ಆ ಸಂಸ್ಥೆಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.

ಈಗಾಗಲೇ ಅಮರಿಕಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಕುರಿತು ಮೃದು ಧೋರಣೆ ಅನುಸರಿಸುತ್ತಿದೆ. ಈ ಕೊರೊನಾ ವೈರಸ್ ಪರಿಣಾಮದ ಕುರಿತು ಆರೋಗ್ಯ ಸಂಸ್ಥೆಗೆ ಮೊದಲೇ ಮಾಹಿತಿ ಇದ್ದರೂ ಕೂಡ ನೀಡಿಲ್ಲ ಎಂದು ಆರೋಪಿಸಿತ್ತು. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನೂ ಸ್ಥಗಿತಗೊಳಿಸಿತ್ತು.

ಕೊರೊನಾ ನಿಯಂತ್ರಣವಿಲ್ಲದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಲಸಿಕೆ ಅಭಿವೃದ್ಧಿ ಮತ್ತು ಎಲ್ಲಾ ದೇಶಗಳಿಗೆ ಕೊರೊನಾ ಲಸಿಕೆ ಹಂಚಿಕೆ ಕುರಿತು 170ಕ್ಕೂ ಹೆಚ್ಚು ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಮಾತುಕತೆ ನಡೆಸುತ್ತಿದೆ. ಆದರೆ ಅಮೆರಿಕ ಮಾತ್ರ ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸೇರಿ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿಲ್ಲ.

ಯಾರದ್ದೂ ಸಹಾಯವಿಲ್ಲದೆ ನಾವು ಕೊರೊನಾ ವೈರಸ್‌ ಅನ್ನು ಸೋಲಿಸುತ್ತೇವೆ , ಆದರೆ ಚೀನಾ ಪ್ರಭಾವಕ್ಕೊಳಗಾಗಿರುವ ವಿಶ್ವ ಆರೋಗ್ಯ ಸಂಸ್ಥೆಗೆ ಮಾತ್ರ ಬೆಂಬಲನೀಡುವುದಿಲ್ಲ ಎಂದು ಹೇಳಿದ್ದಾರೆ.

ಕೋವ್ಯಾಕ್ಸ್ ಕೊರೊನಾ ಸೋಂಕನ್ನು ನಿವಾರಿಸಬಲ್ಲದು ಎಂಬ ನಂಬಿಕೆ ಇದೆ. ಅಮೆರಿಕ ಔಷಧ ಕಂಪನಿಗಳ ಜೊತೆ ದ್ವಿಪಕ್ಷೀಯ ಒಪ್ಪಂದವನ್ನು ಮುಂದುವರೆಸಲಿದೆ.

ಕೋವ್ಯಾಕ್ಸ್ ಲಸಿಕೆಯನ್ನು ಕೊರೊನಾ ಸೋಂಕಿತರು ಹೆಚ್ಚಿರುವ ಪ್ರದೇಶಗಳಿಗೆ ವಿತರಿಸಲಾಗುತ್ತದೆ. ಇದು ಕಡಿಮೆ ಬೆಲೆಗೆ ಲಭ್ಯವಾಗಲಿದ್ದು, ಉತ್ತಮ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.

ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಅನುದಾನ ನೀಡುತ್ತಿತ್ತು, ಜೊತೆಗೆ ಲಸಿಕೆಯ ಉಪಕ್ರಮಗಳ ಪ್ರಮುಖ ಫಂಡರ್ ಕೂಡ ಆಗಿದ್ದಾರೆ.

English summary
The Trump administration said it will not join a global effort to develop, manufacture and equitably distribute a coronavirus vaccine, in part because the World Health Organization is involved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X