ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷಾಂತ್ಯಕ್ಕೆ 'ಮಾಡೆರ್ನಾ' ಕೊವಿಡ್ ಲಸಿಕೆ ಬಳಕೆಗೆ ಸಿದ್ಧ: ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜುಲೈ 28: ಈ ವರ್ಷಾಂತ್ಯಕ್ಕೆ 'ಮಾಡೆರ್ನಾ' ಕೊವಿಡ್ ಲಸಿಕೆ ಬಳಕೆಗೆ ಸಿದ್ಧವಿರಲಿದೆ ಎಂದು ಅಮೆರಿಕ ಭರವಸೆ ನೀಡಿದೆ. ಈಗಾಗಲೇ 30 ಸಾವಿರ ಮಂದಿ ಮೇಲೆ ಮಾಡೆರ್ನಾ ಲಸಿಕೆ ಪ್ರಯೋಗ ನಡೆಸಿದ್ದು, ಈ ವರ್ಷಾಂತ್ಯಕ್ಕೆ ಲಸಿಕೆ ಲಭ್ಯವಿರಲಿದೆ ಎಂಬ ಮಾಹಿತಿಯನ್ನು ನೀಡಿದೆ.

Recommended Video

Andre Russell wasn't unhappy with me : Dinesh Karthik | Oneindia Kannada

ಅಮೆರಿಕದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಲಸಿಕೆಯನ್ನು ಹೆಚ್ಚು ಬೇಗ ಬಳಕೆ ಸಿದ್ಧಪಡಿಸುವುದು ಅನಿವಾರ್ಯವಾಗಿದೆ.

ಅಮೆರಿಕದಲ್ಲಿ 30 ಸಾವಿರ ಜನರ ಮೇಲೆ ಕೊವಿಡ್ ಲಸಿಕೆ ಪ್ರಯೋಗಅಮೆರಿಕದಲ್ಲಿ 30 ಸಾವಿರ ಜನರ ಮೇಲೆ ಕೊವಿಡ್ ಲಸಿಕೆ ಪ್ರಯೋಗ

ಈ ಲಸಿಕೆಯು ಕೊರೊನಾ ಸೋಂಕನ್ನು ತಡೆಗಟ್ಟಲು ಕಾರಣವಾಗುತ್ತದೆ. ಮಾಡೆರ್ನಾ ಲಸಿಕೆಗೆ ಅಮೆರಿಕ ಸರ್ಕಾರವು 1 ಬಿಲಿಯನ್ ಡಾಲರ್ ಹಣವನ್ನು ನೀಡಿದೆ. ಒಟ್ಟು 150ಕ್ಕೂ ಹೆಚ್ಚು ಲಸಿಕೆಗಳು ಅನೇಕ ಹಂತದಲ್ಲಿ ತಯಾರಾಗುತ್ತಿವೆ. ಸುಮಾರು 12 ಲಸಿಕೆಗಳು ಮಾನವನ ಮೇಲೆ ಪ್ರಯೋಗಗಳನ್ನು ಆರಂಭಿಸಿವೆ.

ಮಾಡೆರ್ನಾ ಚುಚ್ಚುಮದ್ದು

ಮಾಡೆರ್ನಾ ಚುಚ್ಚುಮದ್ದು

ಮಾಡೆರ್ನಾದ ಚುಚ್ಚುಮದ್ದು ವಿಶ್ವದಾದ್ಯಂತ ಕೊರೊನಾದಿಂದ ಘಾಸಿಗೊಳಗಾಗಿರುವ ಲಕ್ಷಾಂತರ ಜನರನ್ನು ಕೊರೊನಾ ಸೋಂಕಿನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ತುರ್ತಾಗಿ ಒಂದು ರೋಗನಿರೋಧಕ ಚುಚ್ಚುಮದ್ದು ಬೇಕಾಗಿದೆ. ಈ ನಿಟ್ಟಿನಲ್ಲಿ ಮಾಡೆರ್ನಾದ ಚುಚ್ಚುಮದ್ದಿನ ಭರವಸೆದಾಯಕ ಫಲಿತಾಂಶ ಜನರಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಯಾವುದೇ ಅಡ್ಡಪರಿಣಾಮಗಳಿಲ್ಲ

ಯಾವುದೇ ಅಡ್ಡಪರಿಣಾಮಗಳಿಲ್ಲ

ಈ ಚುಚ್ಚುಮದ್ದು ಪಡೆದ ಆರೋಗ್ಯ ಕಾರ್ಯರ್ತರ ಪೈಕಿ ಯಾರಲ್ಲೂ ಗಂಭೀರವಾದ ಅಡ್ಡಪರಿಣಾಮ ಕಂಡುಬಂದಿಲ್ಲ. ಅರ್ಧಕ್ಕರ್ಧ ಜನ ಸುಸ್ತು, ತಲೆನೋವು, ಚಳಿ, ಮಾಂಸಖಂಡಗಳಲ್ಲಿ ನೋವು ಅಥವಾ ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವಿನಂಥ ಸಣ್ಣಪುಟ್ಟ ತೊಂದರೆಗಳು ಆಗಿದ್ದಾಗಿ ಹೇಳಿದರು. ಎರಡನೇ ಡೋಸ್​ನ ಚುಚ್ಚುಮದ್ದನ್ನು ಕೊಟ್ಟಾದ ನಂತರ ಅಥವಾ ಹೆಚ್ಚಿನ ಡೋಸ್​ ಕೊಟ್ಟಾದ ನಂತರ ಇಂಥ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಾಡೆರ್ನಾ ಹೇಳಿದೆ.

2020ರ ಅಂತ್ಯಕ್ಕೆ ಮಾಡೆರ್ನಾ ಲಸಿಕೆ ಲಭ್ಯ

2020ರ ಅಂತ್ಯಕ್ಕೆ ಮಾಡೆರ್ನಾ ಲಸಿಕೆ ಲಭ್ಯ

2020ರ ಅಂತ್ಯಕ್ಕೆ ಮಾಡೆರ್ನಾ ಲಸಿಕೆ ಲಭ್ಯವಿರಲಿದೆ. ವಿಶ್ವದಾದ್ಯಂತ ಕೊರೊನಾ ಸೋಂಕು 65,0000ಮಂದಿಯ ಸಾವಿಗೆ ಕಾರಣವಾಗಿದೆ. ಆಗಸ್ಟ್‌ನಲ್ಲಿ, ಆಕ್ಸ್‌ಫರ್ಡ್ ಶಾಟ್‌ನ ಅಂತಿಮ ಅಧ್ಯಯನವು ಪ್ರಾರಂಭವಾಗುತ್ತದೆ. ನಂತರ ಸೆಪ್ಟೆಂಬರ್‌ನಲ್ಲಿ ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಕ್ಟೋಬರ್‌ನಲ್ಲಿ ನೊವಾವಾಕ್ಸ್‌ನಿಂದ ಅಭ್ಯರ್ಥಿಯನ್ನು ಪರೀಕ್ಷಿಸುವ ಯೋಜನೆ ಇದೆ. ಎಲ್ಲವೂ ವೇಳಾಪಟ್ಟಿಯ ಪ್ರಕಾರ ಹೋದರೆ. ಫಿಜರ್ ಇಂಕ್ ಈ ಬೇಸಿಗೆಯಲ್ಲಿ 30,000 ವ್ಯಕ್ತಿಗಳ ಅಧ್ಯಯನವನ್ನು ಯೋಜಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ರೋಗ ನಿರೋಧಕ ಚುಚ್ಚುಮದ್ದು

ರೋಗ ನಿರೋಧಕ ಚುಚ್ಚುಮದ್ದು

ಕೊರೊನಾ ಸೋಂಕು ಭಾರಿ ಪಿಡುಗಾಗಿ ಪರಿಣಮಿಸಿದ 66 ದಿನಗಳ ಬಳಿಕ ಕೊರೊನಾ ವೈರಾಣುವಿನ ಸೀಕ್ವೆನ್ಸ್​ ಅನ್ನು ಬಿಡುಗಡೆ ಮಾಡಿದ ನಂತರದಲ್ಲಿ ಅಂದರೆ ಮಾ.16ರಿಂದ ಮಾಡೆರ್ನಾ ಸಂಸ್ಥೆ ರೋಗನಿರೋಧಕ ಚುಚ್ಚುಮದ್ದಿನ ಅನ್ವೇಷಣೆಯಲ್ಲಿ ತೊಡಗಿಕೊಂಡಿದೆ.

English summary
Moderna's vaccine against COVID-19 could be rolled out by the end of this year, U.S. officials said on Monday, after the drugmaker announced the start of a 30,000-subject trial to demonstrate it is safe and effective, the final hurdle prior to approval by global regulators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X