• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಬೈಡನ್

|

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದಾಗಿದೆ, ಬೈಡನ್ ಗೆಲುವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದೂ ಆಗಿದೆ. ಇಷ್ಟಾದರೂ ಅಮೆರಿಕ ಚುನಾವಣೆ ಬಗೆಗಿನ ಗೊಂದಲಕ್ಕೆ ತೆರೆಬಿದ್ದಿಲ್ಲ. ಅತ್ತ ಡೊನಾಲ್ಡ್ ಟ್ರಂಪ್ ತಾವು ಖುರ್ಚಿ ಬಿಡಲು ತಯಾರಿಲ್ಲದೆ ಕೇಸ್‌ಗಳ ಮೇಲೆ ಕೇಸ್ ಹಾಕುತ್ತಿದ್ದಾರೆ. ಈ ಕಡೆ ಬೈಡನ್ ಪಡೆ ಕೂಡ ತಾವು ಯಾರಿಗೂ ಕಮ್ಮಿ ಇಲ್ಲ ಅಂತಾ ಟ್ರಂಪ್ ವಿರುದ್ಧವೇ ಕಾನೂನು ಸಮರಕ್ಕೆ ಮುಂದಾಗಿದೆ. ಟ್ರಂಪ್ ಸೋತು ಸುಣ್ಣವಾದರೂ ಮೊಂಡಾಟ ಮುಂದುವರಿಸಿರುವ ಹಿನ್ನೆಲೆಯಲ್ಲಿ, ಆದಷ್ಟು ಬೇಗ ಟ್ರಂಪ್ ಅಧಿಕಾರ ಹಸ್ತಾಂತರ ಮಾಡುವಂತೆ ಸೂಚಿಸಲು ಬೈಡನ್ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆ ಪದ್ಧತಿಯ ಪ್ರಕಾರ ಜನವರಿಯಲ್ಲಿ ನಿರ್ಗಮಿತ ಅಧ್ಯಕ್ಷರು ತಮ್ಮ ಅಧಿಕಾರವನ್ನು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹಸ್ತಾಂತರ ಮಾಡಬೇಕಾಗಿದೆ. ಅಂದರೆ ಟ್ರಂಪ್ ಹೆಚ್ಚು ಮಾತನಾಡದೆ ಬೈಡನ್‌ಗೆ ಜನವರಿಯಲ್ಲಿ ಅಧಿಕಾರ ಹಸ್ತಾಂತರ ಮಾಡಬೇಕು. ಆದರೆ ಹಲವು ದಶಕಗಳ ಇತಿಹಾಸ ಹೊಂದಿರುವ ಈ ಪದ್ಧತಿಗೆ ಟ್ರಂಪ್ ಎಳ್ಳುನೀರು ಬಿಡೋದು ಪಕ್ಕಾ.

ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಸಂಕಷ್ಟ: ಕಾನೂನು ಉಲ್ಲಂಘನೆ ಆರೋಪದಡಿ ತನಿಖೆ

ಹೀಗಾಗಿಯೇ ಬೈಡನ್ ಮಾಸ್ಟರ್ ಪ್ಲಾನ್ ಮಾಡಿ, ಕೋರ್ಟ್ ಮೂಲಕವಾಗಿ ಟ್ರಂಪ್‌ಗೆ ಸೂಚನೆ ನೀಡಲು ಮುಂದಾಗಿದ್ದಾರೆ. ಹೀಗೆ ಕಾನೂನು ಹೋರಾಟಕ್ಕೆ ಮುಂದಾಗಿರುವ ಬೈಡನ್‌ಗೂ ಹಲವು ಅಡ್ಡಿ-ಆತಂಕ ಎದುರಾಗಿದ್ದು, ಕಾನೂನು ತಜ್ಞರು ಬೈಡನ್‌ಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಉಲ್ಟಾ ಹೊಡೆದರೆ ಕಷ್ಟ ಕಷ್ಟ..!

ಉಲ್ಟಾ ಹೊಡೆದರೆ ಕಷ್ಟ ಕಷ್ಟ..!

ಕಾನೂನು ತಜ್ಞರ ಸಲಹೆ ಪ್ರಕಾರ ಬೈಡನ್ ಈಗ ಟ್ರಂಪ್ ವಿರುದ್ಧ ಕಾನೂನು ಸಮರ ಆರಂಭಿಸಬಹುದು. ಈ ಕೂಡಲೇ ಅಧಿಕಾರ ಹಸ್ತಾಂತರ ಮಾಡುವಂತೆ ಕೋರ್ಟ್‌ನಲ್ಲಿ ಹೋರಾಟ ನಡೆಸಬಹುದು. ಆದರೆ ಬೈಡನ್‌ಗೆ ಕೋರ್ಟ್‌ನಲ್ಲಿ ಎಲ್ಲಾ ಉಲ್ಟಾ ಹೊಡೆದರೆ ದೊಡ್ಡ ಗಂಡಾಂತರ ಎದುರಾಗಲಿದೆ. ಅಂದರೆ ಈಗಾಗಲೇ ಟ್ರಂಪ್ ಚುನಾವಣೆ ಹಾಗೂ ಮತ ಎಣಿಕೆ ಕುರಿತು ತಕರಾರು ತೆಗೆದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹೊತ್ತಲ್ಲೇ ಬೈಡನ್ ಕೋರ್ಟ್ ಮೊರೆ ಹೋದರೆ, ಮತ್ತೊಂದು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕೋರ್ಟ್ ಈಗ ಬಾಕಿ ಇರುವ ಅರ್ಜಿ ಪರಿಗಣನೆಗೆ ತೆಗೆದುಕೊಂಡು ಟ್ರಂಪ್ ಪರ ತೀರ್ಪು ನೀಡಿದರೆ ಬೈಡನ್‌ಗೆ ಆಪತ್ತು. ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿ ಗಮನಿಸಿಕೊಂಡು ಬೈಡನ್ ಸುಮ್ಮನೆ ಇರುವುದೇ ಒಳಿತು.

ಮತದಾನದಲ್ಲಿ ಮೋಸ ಎಂಬುದೇ ಬಂಡವಾಳ

ಮತದಾನದಲ್ಲಿ ಮೋಸ ಎಂಬುದೇ ಬಂಡವಾಳ

ಟ್ರಂಪ್ ತಾವು ಸೋತರು ಯಾಕಿಷ್ಟು ಬಿಂದಾಸ್ ಆಗಿದ್ದಾರೆ ಎಂದರೆ, ಮತದಾನ ಹಾಗೂ ಮತ ಎಣಿಕೆಯ ಕುರಿತು ತಾವು ಮಾಡಿರುವ ಆರೋಪಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯಸಿಗುವ ಭರವಸೆ ಅವರದ್ದು. ಟ್ರಂಪ್ ಚುನಾವಣೆಗೆ ಮೊದಲೇ ‘ನಾನು ಸುಮ್ಮನೆ ಖುರ್ಚಿ ಬಿಟ್ಟು ಹೋಗಲ್ಲ' ಎಂದು ವಾರ್ನಿಂಗ್ ಕೊಟ್ಟಿದ್ದರು. ಈಗ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಟ್ರಂಪ್. ಜಾರ್ಜಿಯಾ, ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಖಭಂಗ ಅನುಭವಿಸಿರುವ ಟ್ರಂಪ್, ಸುಮ್ಮನೆ ಕೂತಿಲ್ಲ. ಹೀಗಾಗಿ ಬೈಡನ್ ಸದ್ಯದ ಪರಿಸ್ಥಿತಿ ಗಮನಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿ ಎಂಬ ಸಲಹೆ ಕಾನೂನು ತಜ್ಞರದ್ದಾಗಿದೆ.

ಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನ

ಟ್ರಂಪ್ ಪಕ್ಷದಲ್ಲೇ ಆಕ್ರೋಶ

ಟ್ರಂಪ್ ಪಕ್ಷದಲ್ಲೇ ಆಕ್ರೋಶ

ಡೊನಾಲ್ಡ್ ಟ್ರಂಪ್ ಸೋತಿದ್ದರೂ ಈ ರೀತಿ ಭಂಡತನ ಪ್ರದರ್ಶನ ಮಾಡುತ್ತಾ. ಅಮೆರಿಕದ ಚುನಾವಣಾ ವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು ಅಮೆರಿಕನ್ನರನ್ನ ಮಾತ್ರವಲ್ಲ ಟ್ರಂಪ್ ಪಕ್ಷದ ನಾಯಕರನ್ನ ಕೂಡ ಕೆರಳಿಸಿದೆ. ಟ್ರಂಪ್ ಮನಸ್ಸಿಗೆ ಬಂದಂತೆ ಟ್ವೀಟ್ ಮಾಡುತ್ತಾ, ಮತ ಎಣಿಕೆ ಹಾಗೂ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಪೆಟ್ಟುಕೊಡುತ್ತಿದೆ. ಇದು ಭವಿಷ್ಯದಲ್ಲಿಯೂ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಮಾಡಲಿದೆ ಎಂಬುದು ರಿಪಬ್ಲಿಕನ್ ಪಕ್ಷದ ನಾಯಕರ ಆತಂಕ. ಆದರೆ ಟ್ರಂಪ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ತಾವು ಟ್ವೀಟ್ ಮಾಡುತ್ತಾ, ಗಂಭೀರ ಆರೋಪಗಳನ್ನ ಬೈಡನ್ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಹಾಕುತ್ತಾ ಬಿಂದಾಸ್ ಆಗಿದ್ದಾರೆ.

ಶ್‌..! ಇದು ಬೈಡನ್ ಜಮಾನ, ಬದಲಾಗಲಿದೆ ಅಮೆರಿಕ..!

ಟ್ರಂಪ್ ವಿರುದ್ಧ ಅನೇಕ ಮೊಕದ್ದಮೆ

ಟ್ರಂಪ್ ವಿರುದ್ಧ ಅನೇಕ ಮೊಕದ್ದಮೆ

ಟ್ರಂಪ್ ವಿರುದ್ಧ ಅನೇಕ ಮೊಕದ್ದಮೆಗಳಿದ್ದು, ಪೋರ್ನ್ ಸ್ಟಾರ್ ಜತೆ ವ್ಯವಹಾರ, ಅಕ್ರಮ ಹಣ ವಹಿವಾಟು ಇದರಲ್ಲಿ ಸೇರಿವೆ. ಟ್ರಂಪ್ ಕೂಡಾ ಚುನಾವಣೆಗೆ ಸಂಬಂಧಿಸಿದಂತೆ ತಕರಾರು ಅರ್ಜಿಗಳನ್ನು ಹಾಕುತ್ತಿದ್ದಾರೆ. ಬೈಡನ್ ಹೊರ ತರುವ ಕಾನೂನುಗಳ ವಿರುದ್ಧ ಟ್ರಂಪ್ ತಿರುಗೇಟು ನೀಡಲು ಆರಂಭಿಸಬಹುದು. ಸರ್ಕಾರ ಏನಾದರೂ ಟ್ರಂಪ್ ವಿರುದ್ಧ ಬಲವಾಗಿ ಕಾನೂನು ಸಮರ ಆರಂಭಿಸಿದರೆ, ಟ್ರಂಪ್ ವಿಶ್ರಾಂತಿ ಜೀವನ ಕೋರ್ಟ್ ಕಟ್ಲೆಗಳಲ್ಲೇ ಮುಕ್ತಾಯವಾಗಲಿದೆ.

'ಅಮೆರಿಕ ಗ್ರೇಟ್' ಮಾಡಲು ಹೊರಟ ಟ್ರಂಪ್ ಸೋಲಿನಲ್ಲಿ ಈ ಪಾಠಗಳು ಇವೆಯೇ?

   ಗನ್ ಇಟ್ಕೊಂಡು ಓಡಾಡಿ ಅಂತ ರವಿ ಬೆಳಗೆರೆಗೆ ಹೇಳಿದ್ದೆ ನಾನು | H Vishwanath | Oneindia Kannada

   English summary
   The 46th American president Joe Biden Planning to file lawsuit against Trump. But legal experts say that this move could backfire.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X