ಅಮೆರಿಕದ ಅಲಾಸ್ಕಾದಲ್ಲಿ ಮೈನಡುಗಿಸುವ ಭೀಕರ ಭೂಕಂಪ
Recommended Video

ಅಲಾಸ್ಕಾ(ಅಮೆರಿಕ), ಡಿಸೆಂಬರ್ 01: ಅಮೆರಿಕದ ಅಲಾಸ್ಕಾದ ನಗರದ ಆಂಕೊರೇಜ್ ಎಂಬಲ್ಲಿ ಭೀಕರ ಭೂಕಂಪ ಸಂಭವಿಸಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲೋಜಿಕಲ್ ಸರ್ವೆ ಪ್ರಕಾರ 6.7 ತೀವ್ರತೆಯ ಭೂಕಂಪ ದಾಖಲಾಗಿದ್ದು, ಯುಎಸ್ ನ್ಯಾಶನಲ್ ವೆದರ್ ಸರ್ವಿಸ್ ನೀಡಿದ ಮಾಹಿತಿ ಪ್ರಕಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯ ಬಗ್ಗೆ ಗೊಂದಲವಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.
Severos Daños tras fuerte Sismo de 7.0° registrado a 12 kms de Anchorage, Alaska, #EEUU, alcanzando una profundidad de 38 kms, el 30.11.2018, por Gigabit Game desde Wasilla. #Powerful #Earthquake #Temblor #Damage #zabedrosky #Phenomena pic.twitter.com/P4sqKhtiDC
— Astronomía ECU (@AstronomiaEcu) December 1, 2018
ಶುಕ್ರವಾರ ಸಂಜೆ ಭೂಕಂಪ ಸಭವಿಸಿದ್ದು, 7 ಮೈಲಿ ಆಳದಲ್ಲಿ ಭೂಮಿ ಕಂಪಿಸಿದೆ ಎನ್ನಲಾಗಿದೆ. ಭೂಕಂಪ ಸಂಭವಿಸುತ್ತಿದ್ದಂತೆಯೇ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ನಂತರ ಅದನ್ನು ಹಿಂತೆಗೆದುಕೊಳ್ಳಲಾಯಿತು. ಭೂಕಂಪದಲ್ಲಿ ಸಂಭವಿಸಿದ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಭೂಕಂಪದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಭೀತಿ ಮೂಡಿಸಿದೆ.












Click it and Unblock the Notifications