• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಕೊರೊನಾ ರುದ್ರನರ್ತನ: 10 ಸಾವಿರ ಸನಿಹದಲ್ಲಿ ಸಾವಿನ ಸಂಖ್ಯೆ!

|

ವಾಷ್ಟಿಂಗ್ಟನ್, ಏಪ್ರಿಲ್ 6: ಅಮೆರಿಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದು ಅಂಕಿ ಅಂಶಗಳನ್ನು ಗಮನಿಸಿದರೆ ಅರ್ಥವಾಗುತ್ತಿದೆ. ವಿಶ್ವದ ದೊಡ್ಡಣ್ಣನಿಗೆ ಕೊರೊನಾ ಭಾರಿ ಸವಾಲಾಗಿದ್ದು, ಇದರಿಂದ ಹೊರಬರಲು ಎಲ್ಲ ರೀತಿಯ ಪ್ರಯತ್ನಗಳನ್ನು ಡೊನಾಲ್ಡ್ ಟ್ರಂಪ್ ಮಾಡುತ್ತಿದ್ದಾರೆ.

   ಪ್ರಧಾನಿಗಳ ಕರೆಗೆ ಕಿವಿಗೊಟ್ಟ ನಮ್ಮ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ | President | Ramnath Kovind

   ಆದರೆ, ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗಿರುವ ಲಕ್ಷಣವೇ ಕಾಣುತ್ತಿಲ್ಲ. ಸತತ ಆರನೇ ದಿನವೂ ಸಾವಿರಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿರುವ ವರದಿಯಾಗಿದೆ. ಭಾನುವಾರ ಯುಎಸ್‌ನಲ್ಲಿ 1165 ಜನರು ಸಾವನ್ನಪ್ಪಿದ್ದಾರೆ.

   ಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾ

   ಯುಎಸ್‌ನಲ್ಲಿ ಒಟ್ಟು 336,673 ಲಕ್ಷ ಸೋಂಕಿತರನ್ನು ಹೊಂದಿದ್ದು, ಒಟ್ಟು 9,616 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತವಾಗಿ ಅಮೆರಿಕ ಹೋಗುತ್ತಿರುವ ವೇಗ ನೋಡಿದ್ರೆ ಇನ್ನು ಮೂರು ಅಥವಾ ನಾಲ್ಕು ದಿನದಲ್ಲಿ ಸಾವಿನ ಸಂಖ್ಯೆ 10 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

   ನಿನ್ನೆ ಒಂದು ದಿನ ಅಮೆರಿಕದಲ್ಲಿ 25,316 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದುವರೆಗೂ ಯುಎಸ್‌ನಲ್ಲಿ ಕೇವಲ 17,977 ಜನರು ಮಾತ್ರ ಚೇತರಿಕೆ ಕಂಡಿದ್ದಾರೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಯುಎಸ್‌ ಮೊದಲ ಸ್ಥಾನದಲ್ಲಿದೆ.

   English summary
   US has 6th day with 1000 plus deaths, Total deaths to touch 10,000 mark soon.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X