ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 5-11 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲು ಅಂತಿಮ ಅನುಮೋದನೆ

|
Google Oneindia Kannada News

ವಾಷಿಂಗ್ಟನ್‌, ನವೆಂಬರ್‌ 03: ಅಮೆರಿಕದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಕೋವಿಡ್-19 ವಿರುದ್ಧವಾಗಿ ಫೈಜರ್ ಲಸಿಕೆಯನ್ನು ವಿತರಿಸಲು ಅಂತಿಮ ಅನುಮೋದನೆ ನೀಡಲಾಗಿದೆ. ಈ ಮೂಲಕ ವಿಶ್ವದಲ್ಲೇ ಅಧಿಕವಾಗಿ ಕೊರೊನಾ ವೈರಲ್‌ ದಾಳಿಗೆ ಒಳಗಾಗಿರುವ ಅಮೆರಿಕವು ತನ್ನ ದೇಶದ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿದೆ.

ಆಹಾರ ಹಾಗೂ ಔಷಧ ಆಡಳಿತವು ಈಗಾಗಲೇ ಅಮೆರಿಕದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಕೋವಿಡ್-19 ವಿರುದ್ಧವಾಗಿ ಲಸಿಕೆಯನ್ನು ನೀಡಲು ಅನುಮೋದನೆ ನೀಡಿದೆ. ಈ ಡೋಸ್‌ ವಯಸ್ಕರಿಗೆ ಹಾಗೂ ಹಿರಿಯರಿಗೆ ನೀಡುವ ಕೋವಿಡ್‌ ಲಸಿಕೆಗಿಂತ ಕಡಿಮೆ ಆಗಿರಲಿದೆ. ಆದರೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಔಪಚಾರಿಕವಾಗಿ ಎಫ್‌ಡಿಎ ತೆರವುಗೊಳಿಸಿದ ಲಸಿಕೆಗಳನ್ನು ಯಾರು ಪಡೆಯಬೇಕು ಎಂದು ಶಿಫಾರಸು ಮಾಡಿದೆ.

ಅಮೆರಿಕಾದಲ್ಲಿ 5 - 11 ವರ್ಷದೊಳಗಿನ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡಲು ಅನುಮೋದನೆಅಮೆರಿಕಾದಲ್ಲಿ 5 - 11 ವರ್ಷದೊಳಗಿನ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡಲು ಅನುಮೋದನೆ

ಆ ವಯೋಮಾನದ 28 ಮಿಲಿಯನ್ ಯುವಕರಿಗೆ ಫೈಜರ್‌ ಕೋವಿಡ್‌ ಡೋಸ್‌ಗಳನ್ನು ನೀಡಬೇಕಾಗುತ್ತದೆ ಎಂದು ಸಲಹಾ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದ ಕೆಲವೇ ಗಂಟೆಗಳ ನಂತರ ಈ ಬಗ್ಗೆ ಆದೇಶವನ್ನು ಸಿಡಿಸಿ ನಿರ್ದೇಶಕ ಡಾ. ರೋಚೆಲ್ ವಾಲೆನ್ಸ್ಕಿ ಮಾಡಿದ್ದಾರೆ. ಈ ಆದೇಶವು 12 ವರ್ಷಕ್ಕಿಂತ ಸಣ್ಣ ವಯಸ್ಸಿ ಮಕ್ಕಳು ಕೊರೊನಾ ವೈರಸ್‌ ಸೋಂಕಿನ ವಿರುದ್ದ ರಕ್ಷಣೆಯನ್ನು ಪಡೆಯಲು ಸಹಕಾರಿ ಆಗಿದೆ.

US gives final clearance to Covid Vaccine for kids 5 to 11

ಈ ಬಗ್ಗೆ ಮಂಗಳವಾರ ರಾತ್ರಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಡಿಸಿ ನಿರ್ದೇಶಕ ಡಾ. ರೋಚೆಲ್ ವಾಲೆನ್ಸ್ಕಿ, "ಲಸಿಕೆ ಹಾಗೂ ತಮ್ಮ ಮಕ್ಕಳಿಕೆ ಕೋವಿಡ್‌ ವಿರುದ್ಧವಾಗಿ ಲಸಿಕೆ ನೀಡುವ ಪ್ರಾಮುಖ್ಯತೆಯ ಬಗ್ಗೆ ತಿಳಿಯಲು ಪೋಷಕರು ತಮ್ಮ ಮಕ್ಕಳ ವೈದ್ಯರು, ಶಾಲಾ ದಾದಿ ಅಥವಾ ಸ್ಥಳೀಯ ಔಷದಾಲಯದ ಸಿಬ್ಬಂದಿಗಳೊಂದಿಗೆ ಮಾತನಾಡಿಕೊಳ್ಳಲು, ಪ್ರಶ್ನೆಗಳು ಇದ್ದರೆ ಕೇಳಿ ಪರಿಹರಿಸಿಕೊಳ್ಳಲು ನಾನು ಮನವಿ ಮಾಡುತ್ತೇವೆ. ನಾನು ತಾಯಿ ಎಂಬ ನೆಲೆಗಟ್ಟಿನಲ್ಲಿ ನಿಂತು ಈ ವಿಷಯವನ್ನು ನಾನು ಪ್ರಸ್ತಾಪ ಮಾಡುತ್ತಿದ್ದೇನೆ," ಎಂದು ಕೂಡಾ ತಿಳಿಸಿದ್ದಾರೆ.

ಯುಎಸ್‌ ನೂತನ ಪ್ರಯಾಣ ಮಾರ್ಗಸೂಚಿ: ಹಲವು ದೇಶಗಳಿಗೆ ತಂದಿದೆ ತಾಪತ್ರಯ!ಯುಎಸ್‌ ನೂತನ ಪ್ರಯಾಣ ಮಾರ್ಗಸೂಚಿ: ಹಲವು ದೇಶಗಳಿಗೆ ತಂದಿದೆ ತಾಪತ್ರಯ!

"ಕೊರೊನಾ ವೈರಸ್‌ ಸೋಂಕಿನ ಗಂಭೀರ ಪರಿಸ್ಥಿತಿ, ಗಂಭೀರ ಲಕ್ಷಣ, ಸಾವು ಪ್ರಮಾಣಗಳು ವಯಸ್ಕರಿಗೆ ಹೋಲಿಕೆ ಮಾಡಿದಾಗ ಮಕ್ಕಳಲ್ಲಿ ಕಡಿಮೆ ಇದೆ. ಸಾಮಾನ್ಯವಾಗಿ ಶಾಲೆಯನ್ನು ವರ್ಷಗಳಿಂದ ನೋಡದ ಅದೇಷ್ಟು ದ್ವಿತೀಯ ದರ್ಜೆಯ ಮಕ್ಕಳುಗಳು ಇದ್ದಾರೆ. ಅವೆಲ್ಲವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮನೆಗ ಈ ಕೋವಿಡ್ ಲಸಿಕೆಯು ಸಹಕಾರಿ ಆಗಲಿದೆ," ಎಂದು ಉಲ್ಲೇಖ ಮಾಡಿದ್ದಾರೆ.

ಕೋವಿಡ್‌ ವಿರು‌ದ್ಧದ ಹೋರಾಟದ ಪ್ರಮುಖ ಹಾದಿ

"ತಮ್ಮ ಮಕ್ಕಳ ಬಗ್ಗೆ ಹಲವಾರು ತಿಂಗಳುಗಳಿಂದ ಆತಂಕಕ್ಕೆ ಒಳಗಾಗಿರುವ ಪೋಷಕರಿಗೆ ಈ ಕೋವಿಡ್‌ ಲಸಿಕೆಯು ಕೊಂಚ ಸಮಾಧಾನವನ್ನು ನೀಡಲಿದೆ. ಮಕ್ಕಳು ಇತರರಿಗೆ ಕೊರೊನಾ ವೈರಸ್‌ ಸೋಂಕನ್ನು ಹರಡವುದುನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್‌ ವಿರುದ್ಧದ ನಮ್ಮ ಹೋರಾಟಕ್ಕೆ ಇದು ಪ್ರಮುಖ ಹಾದಿಯಾಗಿದೆ," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸಂತಸ ವ್ಯಕ್ತಪಡಿಸಿದ್ದಾರೆ.

"ತಾಯಿಯಾಗಿ ಮತ್ತು ವೈದ್ಯರಾಗಿ, ಪೋಷಕರು, ಆರೈಕೆ ಮಾಡುವವರು, ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಇಂದಿನ ಅನುಮೋದನೆಗಾಗಿ ಎದುರು ನೋಡುತ್ತಿದ್ದಾರೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ," ಎಂದು ಆಹಾರ ಮತ್ತು ಔಷಧ ಆಡಳಿತದ ಕಾರ್ಯನಿರ್ವಾಹಕ ಮುಖ್ಯಸ್ಥ ಜಾನೆಟ್ ವುಡ್‌ಕಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಪ್ರಯೋಗಗಳಲ್ಲಿ 2,000 ಮಕ್ಕಳ ಬಳಕೆ

ಫೈಜರ್ ಮತ್ತು ಅದರ ಪಾಲುದಾರ ಬಯೋಎನ್‌ಟೆಕ್ ಸಂಸ್ಥೆಗಳಿಂದ ಈ ವಾರದಲ್ಲಿ ಯುಎಸ್ ಸರ್ಕಾರವು 50 ಮಿಲಿಯನ್ ಹೆಚ್ಚಿನ ಕೊರೊನಾವೈರಸ್ ಲಸಿಕೆಯ ಡೋಸ್‌ಗಳನ್ನು ಖರೀದಿಸಿರುವ ಬಗ್ಗೆ ಘೋಷಿಸಿದೆ. ಈ ಲಸಿಕೆಯನ್ನು ಐದು ವರ್ಷದೊಳಗಿನ ಮಕ್ಕಳಿಗೆ ನೀಡುವುದಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಫೈಜರ್ ಲಸಿಕೆ ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ನಡೆಸಿದ ವೈದ್ಯಕೀಯ ಪ್ರಯೋಗಗಳಲ್ಲಿ 2,000 ಮಕ್ಕಳನ್ನು ಬಳಸಿಕೊಳ್ಳಲಾಗಿತ್ತು. ಈ ವೇಳೆ ಲಸಿಕೆಯು ಮಕ್ಕಳ ಮೇಲೆ ಶೇ.90ರಷ್ಟು ಪರಿಣಾಮಕಾರಿ ಆಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಈ ಲಸಿಕೆಯು ರೋಗದ ಲಕ್ಷಣಗಳಿಂದ ಮಕ್ಕಳನ್ನು ರಕ್ಷಿಸುತ್ತದೆ ಎಂದು ತಿಳಿದು ಬಂದಿದೆ. ಇದರ ಜೊತೆ ಲಸಿಕೆಯ ಸುರಕ್ಷತೆಗೆ ಸಂಬಂಧಿಸಿದಂತೆ 3,000 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಲಸಿಕೆಯಿಂದ ಯಾವುದೇ ರೀತಿ ಅಡ್ಡ ಪರಿಣಾಮ ಅಥವಾ ಅಪಾಯ ಇಲ್ಲ ಎಂಬುವುದು ತಿಳಿದಿದೆ.

(ಒನ್‌ಇಂಡಿಯಾ ಸುದ್ದಿ)

English summary
US gives final clearance to Covid Vaccine for kids 5 to 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X