ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಸ್ಥಾನದ ಜೊತೆಗೆ ಟ್ರಂಪ್ ಕೈ ತಪ್ಪಿತು ಮತ್ತೊಂದು ಅಧಿಕಾರ!

|
Google Oneindia Kannada News

ವಾಶಿಂಗ್ಟನ್, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ನೀಡಿದ ವಿಶೇಷ ಸುರಕ್ಷತೆಯನ್ನು ಟ್ವಿಟರ್ ಸಂಸ್ಥೆಯು ತೆಗೆದು ಹಾಕಿದೆ. ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ಸೋಲು ಕಂಡ ಟ್ರಂಪ್ ಅವರಿಗಿದ್ದ ವಿಶೇಷ ಸವಲತ್ತುಗಳು ಇನ್ನು ಮುಂದೆ ಇರುವುದಿಲ್ಲ ಎಂದು ಟ್ವಿಟರ್ ತಿಳಿಸಿದೆ.

ಜನವರಿ.20ರಂದು ಜೋ ಬಿಡೆನ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಟ್ರಂಪ್ ತಮ್ಮ ಅಧಿಕಾರ ಕಳೆದುಕೊಂಡ ಹಿನ್ನೆಲೆ ಟ್ವಿಟರ್ ಈ ತೀರ್ಮಾನ ತೆಗೆದುಕೊಂಡಿದೆ. ಅಮೆರಿಕಾ ಅಧ್ಯಕ್ಷ ಸ್ಥಾನದಲ್ಲಿದ್ದ ಸಂದರ್ಭದಲ್ಲಿ ಟ್ರಂಪ್ ಅವರಿಗೆ ವಿಶೇಷ ಹಕ್ಕು ಮತ್ತು ಸೌಲಭ್ಯಗಳನ್ನು ನೀಡಲಾಗಿತ್ತು.

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರುಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

Recommended Video

ಚುನಾವಣೆ ಸೋಲೇ ವಿಚ್ಛೇದನಕ್ಕೆ ಕಾರಣನಾ? | Melaina to divorce Donald Trump? | Oneindia Kannada

ಅಮೆರಿಕಾದ ಮಾಜಿ ಅಧ್ಯಕ್ಷ ಎನಿಸಿರುವ ಡೊನಾಲ್ಡ್ ಟ್ರಂಪ್ ರಿಗೆ ಈ ಮೊದಲಿದ್ದ ಯಾವುದೇ ವಿಶೇಷ ಸೌಲಭ್ಯಗಳು ಇರುವುದಿಲ್ಲ. ಸಾಮಾನ್ಯ ಟ್ವಿಟರ್ ಬಳಕೆದಾರರಿಗೆ ಇರುವ ಷರತ್ತುಗಳೇ ಡೊನಾಲ್ಡ್ ಟ್ರಂಪ್ ರಿಗೂ ಅನ್ವಯವಾಗಲಿದೆ. ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಲ್ಲಿ ಖಾತೆಯನ್ನೇ ಬ್ಲಾಕ್ ಮಾಡುವುದಾಗಿ ಟ್ವಿಟರ್ ಸಂಸ್ಥೆಯು ಸ್ಪಷ್ಟಪಡಿಸಿದೆ.

US Ex-President Donald Trump To Lose Public Interest Protections On Twitter

ರಾಷ್ಟ್ರದ ಶ್ರೇಷ್ಠ ನಾಯಕರಿಗೆ ವಿಶೇಷ ಸುರಕ್ಷತೆ:

ಟ್ವಿಟರ್ ನಿಯಮ ಮತ್ತು ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ಟ್ವಿಟರ್ ಖಾತೆ ಬಳಕೆದಾರರ ಪಾಲನೆ ಮಾಡಬೇಕು. ಈ ಹಂತದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ಸಾಮಾನ್ಯ ಬಳಕೆದಾರರ ನಡುವೆ ವ್ಯತ್ಯಾಸ ಇರುತ್ತದೆ. ಶ್ರೇಷ್ಠ ನಾಯಕರು ಸಾರ್ವಜನಿಕರಿಗೆ ಅಗತ್ಯವಾದ ಮಾಹಿತಿ, ಸಾರ್ವಜನಿಕ ಹಿತಾಸಕ್ತಿ ಸಂದೇಶಗಳನ್ನು ಟ್ವಿಟರ್ ಮೂಲಕ ಹಂಚಿಕೆ ಮಾಡುತ್ತಾರೆ. ಇಂಥ ಸಂದೇಶಗಳನ್ನು ವೀಕ್ಷಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುವ ಮುನ್ನ ಪರಾಮರ್ಶೆ ಮಾಡಲಾಗುತ್ತದೆ. ಈಗ ಅಮೆರಿಕದಲ್ಲಿ ಟ್ರಂಪ್ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ಹಿನ್ನೆಲೆ ಅವರ ಸಂದೇಶಗಳ ಮೇಲೆಯೂ ನಿಗಾ ವಹಿಸಲಾಗುತ್ತದೆ.

ವಿಶ್ವದಾದ್ಯಂತ ತಮ್ಮ ನಾಯಕರು ಹಾಗೂ ಅಭ್ಯರ್ಥಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳಿಗೆ ಏನು ಹೇಳುತ್ತಾರೆ. ಯಾವ ಮಾಹಿತಿ ನೀಡುತ್ತಾರೆ ಎನ್ನುವುದರ ಬಗ್ಗೆ ಜನರು ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ಈ ಹಿನ್ನೆಲೆ ಎಚ್ಚರಿಕೆ ಮತ್ತು ವಿಶೇಷ ವರ್ಗದಲ್ಲಿ ಸಂದೇಶಗಳನ್ನು ನೀಡುವುದಕ್ಕೆ ನಾಯಕರು ಮತ್ತು ಅಧಿಕಾರಿಗಳಿಗೆ ಅವಕಾಶ ನೀಡಲಾಗಿರುತ್ತದೆ. ವೈಯಕ್ತಿಕ ಬಳಕೆದಾರರಿಗೆ ಈ ಅನುಮತಿ ಇರುವುದಿಲ್ಲ.

ಟ್ರಂಪ್ ಹಿಡಿತದಲ್ಲಿದ್ದ 2@plotus, @flotus, ಮತ್ತು @whitehouse ಖಾತೆಗಳನ್ನು ಕೂಡಾ ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಕಳೆದ ಶನಿವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಚುನಾವಣೆಯಲ್ಲಿ 290 ಮತಗಳನ್ನು ಪಡೆದ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಮೂಲದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

English summary
US Ex-President Donald Trump To Lose Public Interest Protections On Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X