ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಸ್ಥಾನ ಸೋತ ಬಳಿಕ ಅಲಸ್ಕಾದಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 11: ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರನ್ನು ಅಲಸ್ಕಾದಲ್ಲಿ ಡೊನಾಲ್ಡ್ ಟ್ರಂಪ್ ಮಣಿಸಿದ್ದಾರೆ ಎಂದು ಎಡಿಸನ್ ರಿಸರ್ಚ್ ಬುಧವಾರ ಹೇಳಿದೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನ ಕಳೆದಿದ್ದರೂ ಅದನ್ನು ಇನ್ನೂ ಒಪ್ಪಿಕೊಂಡಿಲ್ಲ. ಅಧ್ಯಕ್ಷ ಸ್ಥಾನಕ್ಕೇರಲು ಅಗತ್ಯವಿರುವ 270 ಎಲೆಕ್ಟೊರಲ್ ಮತಗಳನ್ನು ಬೈಡನ್ ಕ್ರಮಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ತಾವು ಸೋತಿರುವುದಾಗಿ ಇದುವರೆಗೂ ಜನಾಭಿಪ್ರಾಯವನ್ನು ಒಪ್ಪಿಕೊಂಡಿಲ್ಲ.

ರಾಜಕೀಯ ಜೀವನಕ್ಕೆ ನೆರವಾಗಲು ವೃತ್ತಿ ತ್ಯಜಿಸಿದ ಕಮಲಾ ಹ್ಯಾರಿಸ್ ಪತಿರಾಜಕೀಯ ಜೀವನಕ್ಕೆ ನೆರವಾಗಲು ವೃತ್ತಿ ತ್ಯಜಿಸಿದ ಕಮಲಾ ಹ್ಯಾರಿಸ್ ಪತಿ

ಅಲಸ್ಕಾದಲ್ಲಿ ಟ್ರಂಪ್ ವಿಜೇತರಾಗಿದ್ದಾರೆ. ಆದರೆ ಇಲ್ಲಿ ಸಿಗುವ ಮೂರು ಎಲೆಕ್ಟೊರಲ್ ಮತಗಳಿಂದ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಜೋ ಬೈಡನ್ ಪ್ರಸ್ತುತ 279 ಎಲೆಕ್ಟೊರಲ್ ಮತಗಳನ್ನು ಹೊಂದಿದ್ದರೆ ಡೊನಾಲ್ಡ್ ಟ್ರಂಪ್ 217 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ. ಹಲವು ದಶಕಗಳಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಲಸ್ಕಾದಲ್ಲಿ ಗೆಲುವು ಕಂಡಿಲ್ಲ. 1968ರಿಂದಲೂ ಇಲ್ಲಿ ರಿಪಬ್ಲಿಕನ್ ಪಕ್ಷವೇ ಜಯಗಳಿಸುತ್ತಿದೆ. ಈ ಮೂಲಕ ರಿಪಬ್ಲಿಕನ್ ಪಕ್ಷಕ್ಕೆ ಪ್ರತಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ಪ ಆದರೂ ಮೂರು ಖಚಿತ ಎಲೆಕ್ಟೊರಲ್ ಮತಗಳನ್ನು ನೀಡುತ್ತಿದೆ.

US Elections: Donald Trump Won Alaska After Losing Presidency, Gets 3 Eelectoral Votes

ಭಾರತದಲ್ಲಿದ್ದಾರೆ ಜೋ ಬೈಡನ್ ದೂರದ ಸಂಬಂಧಿಕರುಭಾರತದಲ್ಲಿದ್ದಾರೆ ಜೋ ಬೈಡನ್ ದೂರದ ಸಂಬಂಧಿಕರು

ಡೊನಾಲ್ಡ್ ಟ್ರಂಪ್ ಇದುವರೆಗೂ ತಮ್ಮ ಸೋಲು ಒಪ್ಪಿಕೊಳ್ಳದೆ ಇರುವುದು ಮತ್ತು ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪ ಮುಂದುವರಿಸಿರುವುದು ಅವರು ಜನವರಿ 20ರಂದು ನಡೆಯಬೇಕಿರುವ ಅಧಿಕಾರ ಹಸ್ತಾಂತರವನ್ನು ಸುಗಮವಾಗಿ ನಡೆಯುವಂತೆ ಮಾಡಲು ಅವಕಾಶ ನೀಡುತ್ತಾರೆಯೇ ಎಂಬ ಅನುಮಾನ ಮೂಡಿದೆ.

English summary
US Elections: US President Donald Trump won Alaska and got 3 electoral votes after losing presidency to Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X