• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊನೆಯ ದಿನದವರೆಗೂ ಬೈಡನ್‌ರನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ ಡೊನಾಲ್ಡ್ ಟ್ರಂಪ್ !

|

ವಾಷಿಂಗ್ಟನ್, ನವೆಂಬರ್ 9: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದಾರೆ. ಆದರೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರದಿಂದ ಕೆಳಕ್ಕಿಳಿಯುವ ಮನಸ್ಸಿಲ್ಲ. ಅಧಿಕಾರ ಹಸ್ತಾಂತರಕ್ಕೆ ಜನವರಿಯವರೆಗೂ ಸಮಯವಿದೆ. ಅಲ್ಲಿಯವರೆಗಿನ ಅವಧಿಯಲ್ಲಿ ಟ್ರಂಪ್ ಕಾರ್ಯವೈಖರಿ ಹೇಗಿರಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಜೋ ಬೈಡನ್ ವಿರುದ್ಧದ ಸೋಲಿನ ಬಳಿಕ ಶ್ವೇತ ಭವನ ಕಚೇರಿಯಲ್ಲಿನ ತಮ್ಮ ಕೊನೆಯ ತಿಂಗಳುಗಳಲ್ಲಿ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧದ ತಮ್ಮ ಹೇಳಿಕೆಗಳನ್ನು ಮತ್ತು ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ. ಈ ಮೂಲಕ ಡೆಮಾಕ್ರಟಿಕ್ ಪಕ್ಷದ ಆಡಳಿತ, ರಾಜತಾಂತ್ರಿಕ ನಿರ್ಧಾರಗಳು ಮತ್ತು ವ್ಯಾಪಾರ ಚಟುವಟಿಕೆಯ ನಿಲುವುಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕ ಚುನಾವಣೆ: ಸೋಲೊಪ್ಪಿಕೊಳ್ಳುವಂತೆ ಟ್ರಂಪ್‌ಗೆ ಮೆಲಾನಿಯಾ ಸಲಹೆ

ಕೊರೊನಾ ವೈರಸ್ ಪಿಡುಗು ಮತ್ತು ಅದರ ಪರಿಣಾಮದಿಂದ ಅಮೆರಿಕಕ್ಕೆ ಉಂಟಾದ ಆರ್ಥಿಕ ನಷ್ಟದ ವಿಚಾರವಾಗಿ ಚೀನಾ ವಿರುದ್ಧದ ವಾಗ್ದಾಳಿಯನ್ನು ಡೊನಾಲ್ಡ್ ಟ್ರಂಪ್ ಮುಂದುವರಿಸಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡಲು ಚೀನಾವೇ ಕಾರಣ ಎಂದು ಡೊನಾಲ್ಡ್ ಟ್ರಂಪ್ ಅನೇಕ ಬಾರಿ ಹೇಳಿದ್ದರು. ಇದು ಚೀನಾ ಕೆಂಗಣ್ಣಿಗೂ ಕಾರಣವಾಗಿತ್ತು. ತಮ್ಮ ಚೀನಾ ವಿರೋಧಿ ಧೋರಣೆಯನ್ನು ಅವರು ಹಲವು ಸಲ ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಮುಂದೆ ಓದಿ.

ಅಧಿಕಾರ ಹಸ್ತಾಂತರಕ್ಕೂ ತೊಂದರೆ

ಅಧಿಕಾರ ಹಸ್ತಾಂತರಕ್ಕೂ ತೊಂದರೆ

'ಜನವರಿ 20ರ ವೇಳೆಗೆ ಅಮೆರಿಕದ ಹಲವು ನೀತಿಗಳಲ್ಲಿ ಕಿಡಿಗೇಡಿತನ ಮಾಡಲು ತುಂಬಾ ಅವಕಾಶಗಳಿವೆ ಎಂದು ನನಗನ್ನಿಸುತ್ತದೆ' ಎಂದು ಬೀಜಿಂಗ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮಾಜಿ ವಾಣಿಜ್ಯ ಅಧಿಕಾರಿ ಮತ್ತು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರ್ ಜೇಮ್ಸ್ ಗ್ರೀನ್ ಹೇಳಿದ್ದಾರೆ. 'ಸಹಕಾರಯುತ ಹಸ್ತಾಂತರ ಪ್ರಕ್ರಿಯೆಗಳು ನಡೆಯುವುದರ ಬಗ್ಗೆ ಅನುಮಾನವಿದೆ. ಟ್ರಂಪ್ ಆಡಳಿತವು ತಾನು ಪಾಲಿಸಲು ಆಸಕ್ತಿ ತೋರಿಸದೆ ಇರುವ ನಿಯಮಗಳಲ್ಲಿ ಇದೂ ಒಂದಾಗಲಿದೆ' ಎಂದು ಅವರು ಹೇಳಿದ್ದಾರೆ.

ಚೀನಾ ಮೇಲೆ ಮತ್ತೊಂದು ದೂಷಣೆ

ಚೀನಾ ಮೇಲೆ ಮತ್ತೊಂದು ದೂಷಣೆ

ಚೀನಾ ವಿರುದ್ಧ ಕೋಪ ತೀರಿಸಿಕೊಳ್ಳಲು ಟ್ರಂಪ್ ಆಡಳಿತವು ಸೆನೆಟ್ ಅನುಮತಿಯ ಅಗತ್ಯವಿಲ್ಲದ ನೇಮಕಾತಿಗಳು, ತ್ವರಿತ ಕಾರ್ಯಕಾರಿ ಆದೇಶಗಳು ಮತ್ತು ನಿಯಮಗಳನ್ನು ರೂಪಿಸುವ ವಿದೇಶಾಂಗ ನೀತಿಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಘರ್ ಮುಸ್ಲಿಮರ ಸಾಮೂಹಿಕ ಬಂಧನ ಮತ್ತು ಹತ್ಯಾಕಾಂಡಕ್ಕೆ ಚೀನಾವನ್ನು ತಪ್ಪಿತಸ್ಥ ಎಂದು ದೂಷಣೆ ಮಾಡಲು ಈ ಅವಧಿಯನ್ನು ಅವರು ಉಪಯೋಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಅಮೆರಿಕ ಚುನಾವಣಾ ಫಲಿತಾಂಶ

ಚೀನಾ ವಿರುದ್ಧ ಮತ್ತಷ್ಟು ಪ್ರಹಾರ?

ಚೀನಾ ವಿರುದ್ಧ ಮತ್ತಷ್ಟು ಪ್ರಹಾರ?

ಚೀನಾದ ಮೇಲಿನ ವ್ಯಾಪಾರ ನಿರ್ಬಂಧದ ನಡೆ ಕೂಡ ಟ್ರಂಪ್ ಮನದಲ್ಲಿದೆ. ನಾಗರಿಕ, ಸೇನಾ ರಫ್ತಿನ ಮೇಲಿನ ನಿರ್ಬಂಧಗಳ ವಿಸ್ತರಣೆ, ಚೀನಾದ ಮತ್ತಷ್ಟು ಆಪ್‌ಗಳ ನಿಷೇಧ ಸೇರಿದಂತೆ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ವಿವಿಧ ಕ್ರಮಗಳನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬೈಡನ್ ಆಡಳಿತಕ್ಕೆ ಸವಾಲು

ಬೈಡನ್ ಆಡಳಿತಕ್ಕೆ ಸವಾಲು

ಇದೆಲ್ಲವೂ ಜನವರಿಯ ಮಧ್ಯಭಾಗದ ಬಳಿಕ ಅಧಿಕಾರ ವಹಿಸಿಕೊಳ್ಳಲಿರುವ ಜೋ ಬೈಡೆನ್ ಆಡಳಿತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಚೀನಾದೆಡೆಗೆ ತುಸು ಮೃದು ಧೋರಣೆ ಹೊಂದಿರುವ ಬೈಡನ್‌ಗೆ ಟ್ರಂಪ್ ನೀತಿಗಳನ್ನು ಸರಿಪಡಿಸಲು ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಚೀನಾ ಬೆಳೆದಿರುವ ಪರಿ ಗಮನಿಸಿದರೆ ಟ್ರಂಪ್ ಅವರಂತೆಯೇ ಬೈಡನ್ ಕೂಡ ನೀತಿ ಅನುಸರಿಸಿದರೂ ಅಚ್ಚರಿಯಿಲ್ಲ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಸಾರಾ ಕ್ರೆಪ್ಸ್ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಿಚೆಲ್ ಒಬಾಮಾ ಸಂದೇಶ

English summary
US Elections: Donald Trump may continue to taget China before leaving white house to create trouble for Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X