• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆ

|

ವಾಷಿಂಗ್ಟನ್, ನವೆಂಬರ್ 5: ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿಯ ಚುನಾವಣೆಯಲ್ಲಿ ಮರು ಆಯ್ಕೆಯಾಗುವಲ್ಲಿ ವಿಫಲವಾದರೆ ಮತ್ತೊಂದು ಕೆಟ್ಟ ಇತಿಹಾಸ ನಿರ್ಮಿಸಲಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಮರು ಆಯ್ಕೆಯಾಗುವಲ್ಲಿ ಸೋತ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿ ಅವರದಾಗಲಿದೆ. ಅಮೆರಿಕ ಇತಿಹಾಸದಲ್ಲಿ ಮರು ಆಯ್ಕೆಯಾಗುವಲ್ಲಿ ವಿಫಲರಾದ ದೃಷ್ಟಾಂತಗಳಿವೆ. ಆ ಸಾಲಿಗೆ ಡೊನಾಲ್ಡ್ ಟ್ರಂಪ್ ಸೇರಿದರೂ ಅಚ್ಚರಿಯಿಲ್ಲ.

ಜಾರ್ಜ್ ಎಚ್ ಡಬ್ಲ್ಯೂಬುಷ್ 1992ರಲ್ಲಿ ಎರಡನೆಯ ಅವಧಿಗೆ ಆಯ್ಕೆಯಾಗುವಲ್ಲಿ ಸೋತಿದ್ದರು. ಆಗ ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಚುನಾವಣೆಯಲ್ಲಿ ಗೆದ್ದಿದ್ದರು. ಬುಷ್ ಅವರ ಬಳಿಕ ಎಲ್ಲ ಮೂರು ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್‌ ಡಬ್ಲ್ಯೂ ಬುಷ್ ಮತ್ತು ಬರಾಕ್ ಒಬಾಮಾ ತಮ್ಮ ಮರು ಚುನಾವಣೆಗಳಲ್ಲಿ ಗೆದ್ದಿದ್ದರು.

ಅಮೆರಿಕ ಚುನಾವಣೆಯಲ್ಲಿ ಗೆದ್ದ ಕರ್ನಾಟಕ ಮೂಲದ ಲಕ್ಷಾಧೀಶ ಉದ್ಯಮಿ

ರಿಪಬ್ಲಿಕನ್ ಪಕ್ಷದ ಹರ್ಬರ್ಟ್ ಹೂವರ್ ಅವರು 1932ರಲ್ಲಿ ಡೆಮಾಕ್ರಟಿಕ್ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರಿಂದ ಸೋಲು ಕಂಡಿದ್ದರು. ಭಾರಿ ಆರ್ಥಿಕ ಹಿಂಜರಿತದ ನಡುವೆ ರೂಸ್‌ವೆಲ್ಟ್ ದಿಗ್ವಿಜಯ ಸಾಧಿಸಿದ್ದರು. ಎರಡನೆಯ ಅವಧಿಗೆ ಗೆಲ್ಲುವಲ್ಲಿ ಹೂವರ್ ವಿಫಲರಾಗಿದ್ದರು.

1976ರಲ್ಲಿ ರಿಪಬ್ಲಿಕನ್ ಪಕ್ಷದ ಗೆರಾಲ್ಡ್ ಫೋರ್ಡ್ ಅವರು ಡೆಮಾಕ್ರಟಿಕ್‌ನ ಜಿಮ್ಮಿ ಕಾರ್ಟರ್ ಎದುರು ಸೋಲು ಅನುಭವಿಸಿದ್ದರು. 1974ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಹಗರಣದ ಬಳಿಕ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಉಪಾಧ್ಯಕ್ಷ ಗೆರಾಲ್ಡ್ ಫೋರ್ಡ್ ನೇಮಕವಾಗಿದ್ದರು. ಈ ಮೂಲಕ ಎಲೆಕ್ಟೊರಲ್ ಕಾಲೇಜ್‌ ಮೂಲಕ ಚುನಾಯಿತರಾಗದ ಏಕೈಕ ಅಧ್ಯಕ್ಷ ಎಂದೆನಿಸಿಕೊಂಡಿದ್ದರು.

ತಿಂಗಳ ಹಿಂದೆಯೇ ಕೋವಿಡ್‌ನಿಂದ ಸತ್ತಿದ್ದ ಅಭ್ಯರ್ಥಿಗೆ ಅಮೆರಿಕ ಚುನಾವಣೆಯಲ್ಲಿ ಜಯ!

ಜಿಮ್ಮಿ ಕಾರ್ಟರ್ 1980ರಲ್ಲಿ ರೊನಾಲ್ಡ್ ರೀಗನ್‌ಗೆ ಸೋಲೊಪ್ಪಿಕೊಂಡಿದ್ದರು. 1968ರಲ್ಲಿ ರಿಪಬ್ಲಿಕನ್ ಪಕ್ಷದ ಆಡಳಿತ ಶುರುವಾಗಿದ್ದನ್ನು 1992ರಲ್ಲಿ ಡೆಮಾಕ್ರಟಿಕ್‌ನ ಜಾರ್ಜ್ ಎಚ್ ಡಬ್ಲ್ಯೂ ಬುಷ್ ಅಂತ್ಯಗೊಳಿಸಿದ್ದರು. ಆದರೆ ನಂತರದ ಅವಧಿಯಲ್ಲಿ ಬಿಲ್ ಕ್ಲಿಂಟನ್ ಎದುರು ಸೋಲು ಕಂಡಿದ್ದರು.

English summary
US Elections: Donald Trump may become the first US president to fail in the re election since 1992.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X