ಯುಎಸ್ ಚುನಾವಣೆ ದಿನ ಪನೀರ್ ಟಿಕ್ಕಾ ಟ್ರೆಂಡ್ ಆಗಿದ್ದೇಕೆ?
2020ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸಾರ್ವತ್ರಿಕ ಮತದಾನ ಜಾರಿಯಲ್ಲಿರುವಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಏನೆಲ್ಲ ಟ್ರೆಂಡ್ ಆಗುತ್ತದೆ ಎಂಬುದು ಕೂಡಾ ಕುತೂಹಲ ಕೆರಳಿಸಿದೆ. ಎಲ್ಲೆಡೆ ಮತದಾನದ ಬಗ್ಗೆ ಟ್ವೀಟ್ ಗಳು ಬರುತ್ತಿವೆ. ಈ ನಡುವೆ ಭಾರತೀಯ ಖಾದ್ಯ ಪನೀರ್ ಟಿಕ್ಕಾ ಟ್ವಿಟ್ಟರ್ ನಲ್ಲಿ ಟ್ರೆಂಡ್ ನಲ್ಲಿತ್ತು. ಯುಎಸ್ ಚುನಾವಣೆಯಲ್ಲಿ ಪನ್ನೀರ್ ಟಿಕ್ಕಾಗೇನು ಕೆಲಸ? ಮುಂದೆ ಓದಿ.
ಭಾರತೀಯ ಮೂಲದ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ ಅವರು ಚುನಾವಣೆ ದಿನಕ್ಕೂ ಮುನ್ನ ರಾತ್ರಿ ಕಮಲಾ ಹ್ಯಾರೀಸ್ ಅವರಿಗೆ ಗೌರವ ಸಲ್ಲಿಸಿ, ಬೆಂಬಲ ವ್ಯಕ್ತಪಡಿಸಲು ಪನೀರ್ ಟಿಕ್ಕಾಮಾಡುತ್ತಿದ್ದೇನೆ ಎಂದು ಖಾದ್ಯವೊಂದರ ಚಿತ್ರವನ್ನು ಹಂಚಿಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಅವರು ಇತ್ತೀಚೆಗೆ ತಮಗೆ ಭಾರತೀಯ ಖಾದ್ಯಗಳ ಪೈಕಿ ಯಾವುದೇ ಥರವಾದ ಟಿಕ್ಕಾ ಇಷ್ಟ ಎಂದಿದ್ದರು. ಇದಕ್ಕಾಗಿ ಈ ಖಾದ್ಯ ತಯಾರಿಸುತ್ತಿರುವೆ ಎಂದು ಪ್ರಮೀಳಾ ಹೇಳಿಕೊಂಡಿದ್ದರು.
Compulsive, night-before-election activity: make comfort food. That’s paneer tikka tonight, in honor of electing #KamalaHarris Veep tomorrow since she just said on Instagram that her favorite North Indian food is any kind of tikka! Let’s go, people! VOTE! #BidenHarris2020 pic.twitter.com/gqyT7BotgG
— Pramila Jayapal (@PramilaJayapal) November 3, 2020
ಉತ್ತರ ಭಾರತೀಯ ಖಾದ್ಯದಲ್ಲಿ ಟಿಕ್ಕಾ ಇಷ್ಟ ಎಂದು ಇನ್ಸ್ಟಾಗ್ರಾಂನಲ್ಲಿ ಕಮಲಾ ಹೇಳಿಕೊಂಡಿದ್ದರು. ಅವರ ಬೆಂಬಲಕ್ಕಾಗಿ ಈ ಖಾದ್ಯ ಮಾಡಿದ್ದೇನೆ ನಾಳೆ ಕಮಲಾ ಗೆಲುವು ಸಾಧಿಸಲಿ ಹೋಗಿ ವೋಟ್ ಮಾಡಿ #BidenHarris2020 ಎಂದು ಹ್ಯಾಶ್ ಟ್ಯಾಗ್ ಹಾಕಿ ಪ್ರಮೀಳಾ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆ ಬರಲು ಆರಂಭಿಸಿ, ಟ್ರೆಂಡ್ ಆಗಲು ಆರಂಭಿಸಿತು. ಪ್ರಮೀಳಾ ಹಂಚಿಕೊಂಡಿದ್ದ ಚಿತ್ರ ಪನೀರ್ ಟಿಕ್ಕಾ ಅಲ್ಲ, ನಿಜವಾದ ಟಿಕ್ಕಾ ಹೀಗಿರುತ್ತೆ ನೋಡಿ ಎಂದು ಹಲವಾರು ಮಂದಿ ಟ್ವೀಟ್ ಮಾಡಿ ಹಾಸ್ಯ ಮಾಡತೊಡಗಿದರು.
By popular demand, the recipe for Paneer Tikka Masala, slightly adapted from the fabulous @twosleevers! You can either eat the tikka on its own, or add the masala (sauce) which is like a curry. Enjoy! pic.twitter.com/0tNyEZOWN4
— Pramila Jayapal (@PramilaJayapal) November 3, 2020
ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಪ್ರಮೀಳಾ ಅವರು, ಬಹು ಜನಗಳ ಬೇಡಿಕೆ ಮೇರೆಗೆ ನಾನು ಪನೀರ್ ಟಿಕ್ಕಾ ಮಸಾಲಾ ರೆಸಿಪಿ ಇಲ್ಲಿದೆ. ಟಿಕ್ಕಾ ಬೇಕಾದರೂ ತಿನ್ನಿ ಅಥವಾ ಮಸಾಲಾ(ಸಾಸ್) ಬೆರೆಸಿ ಸಾಂಬಾರ್ ರೀತಿ ತಿನ್ನಿ ಎಂದು ಬೇರೆ ಚಿತ್ರ ಹಾಕಿ ಟ್ವೀಟ್ ಮಾಡಿದ್ದಾರೆ.
Made Paneer tikka role today in honour of US elections pic.twitter.com/TroOHpWfrd
— Varun Singh Shaktawat (@currentlyunsafe) November 3, 2020
who's gonna tell her that's not paneer tikka... https://t.co/mejabynS4G
— Saanvi is looking for sherlock moots •Zaira stan• (@daisysonofjohn) November 3, 2020












Click it and Unblock the Notifications