ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್ ಪರಾಮರ್ಶನಾ ತಂಡಗಳಲ್ಲಿ ಭಾರತ ಮೂಲದ 20 ಮಂದಿಗೆ ಸ್ಥಾನ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 11: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ವಿವಿಧ ತಂಡಗಳಲ್ಲಿ ಭಾರತ ಮೂಲದ ಪ್ರಜೆಗಳಿಗೆ ಆದ್ಯತೆ ದೊರಕಿದೆ. ತಮ್ಮ ಸಾಂಸ್ಥಿಕ ಪರಮಾರ್ಶನ ತಂಡಗಳಿಗೆ (ಎಆರ್‌ಟಿಎಸ್) ಮೂವರು ಮುಖ್ಯಸ್ಥರು ಸೇರಿದಂತೆ ಭಾರತ ಮೂಲದ 20 ಸದಸ್ಯರನ್ನು ಬೈಡನ್ ನೇಮಿಸಿದ್ದಾರೆ. ಪ್ರಸ್ತುತ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿನ ಪ್ರಮುಖ ಸಂಯುಕ್ತ ಸಂಸ್ಥೆಗಳಿಂದ ಸುಗಮವಾಗಿ ಅಧಿಕಾರ ವರ್ಗಾವಣೆಯನ್ನು ಖಾತರಿಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿ ಈ ತಂಡಗಳ ಮೇಲಿದೆ.

ಇದು ಅಧ್ಯಕ್ಷಗಿರಿಯ ಹಸ್ತಾಂತರ ಪ್ರಕ್ರಿಯೆ ಇತಿಹಾಸದಲ್ಲಿಯೇ ಅತ್ಯಂತ ವೈವಿಧ್ಯಮ ಪರಾಮರ್ಶನಾ ತಂಡಗಳಲ್ಲಿ ಒಂದಾಗಿವೆ ಎಂದು ಬೈಡನ್ ಅವರ ಪರಿವರ್ತನಾ ತಂಡ ಹೇಳಿದೆ.

ಬೈಡನ್ ಕೋವಿಡ್ ಟಾಸ್ಕ್ ಫೋರ್ಸ್: ನಿರೀಕ್ಷೆಯಂತೆಯೇ ಕನ್ನಡಿಗ ವಿವೇಕ್ ಮೂರ್ತಿಗೆ ಸ್ಥಾನಬೈಡನ್ ಕೋವಿಡ್ ಟಾಸ್ಕ್ ಫೋರ್ಸ್: ನಿರೀಕ್ಷೆಯಂತೆಯೇ ಕನ್ನಡಿಗ ವಿವೇಕ್ ಮೂರ್ತಿಗೆ ಸ್ಥಾನ

ಎಆರ್‌ಟಿಯ ನೂರಾರು ಸದಸ್ಯರಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಮತ್ತು ಇದರಲ್ಲಿನ ಅಂದಾಜು ಶೇ 40ರಷ್ಟು ಪ್ರತಿನಿಧಿ ಸಮುದಾಯಗಳು ಕಪ್ಪು ವರ್ಣೀಯರು, ಎಲ್‌ಜಿಬಿಟಿಕ್ಯೂ ಹಾಗೂ ದೈಹಿಕ ವೈಕಲ್ಯಕ್ಕೆ ಸೇರಿದವರನ್ನು ಒಳಗೊಂಡಿವೆ. ಈ ರೀತಿಯ ವೈವಿಧ್ಯ ಸರ್ಕಾರದ ಹಿಂದಿನ ತಂಡಗಳ ಇತಿಹಾಸದಲ್ಲಿ ಇಲ್ಲ.

ಟ್ರಂಪ್ ಹಠದ ನಡುವೆಯೂ ಸ್ಥಿತ್ಯಂತರ ಆರಂಭ: ಜೋ ಬೈಡನ್ಟ್ರಂಪ್ ಹಠದ ನಡುವೆಯೂ ಸ್ಥಿತ್ಯಂತರ ಆರಂಭ: ಜೋ ಬೈಡನ್

ಡೊನಾಲ್ಡ್ ಟ್ರಂಪ್ ಅವರಿಂದ ಅಧಿಕಾರ ಹಸ್ತಾಂತರವಾದ ಮೊದಲ ದಿನದಿಂದಲೇ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಅವರ ಸಂಪುಟ ತಮ್ಮ ಆಡಳಿತ ಆರಂಭಿಸಲು ಅನುಕೂಲಕರವಾಗುವಂತೆ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಪ್ರತಿ ಸಂಸ್ಥೆಯು ನೋಡಿಕೊಳ್ಳಲಿದೆ. ಮುಂದೆ ಓದಿ.

ಮೂವರು ಮುಖ್ಯಸ್ಥರು

ಮೂವರು ಮುಖ್ಯಸ್ಥರು

ವಿವಿಧ ಎಆರ್‌ಟಿಗಳಲ್ಲಿ ಮೂರು ತಂಡಗಳಿಗೆ ಭಾರತ ಮೂಲದ ಅಮೆರಿಕನ್ನರು ಮುಖ್ಯಸ್ಥರಾಗಿದ್ದಾರೆ. ಪ್ರತಿಷ್ಠಿತ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಅರುಣ್ ಮಜುಂದಾರ್ ಅವರು ಎನರ್ಜಿ ಎಆರ್‌ಟಿ ಇಲಾಖೆ ತಂಡದ ನಾಯಕತ್ವ ವಹಿಸಿದ್ದಾರೆ. ನ್ಯಾಷನಲ್ ಡ್ರಗ್ ಕಂಟ್ರೋಲ್ ಪಾಲಿಸಿ ಕಚೇರಿಯ ತಂಡವನ್ನು ರಾಹುಲ್ ಗುಪ್ತಾ ಮುನ್ನಡೆಸಲಿದ್ದಾರೆ. ಸಿಬ್ಬಂದಿ ನಿರ್ವಹಣೆ ಕಚೇರಿಯ ತಂಡಕ್ಕೆ ಕಿರಣ್ ಅಹುಜಾ ಮುಖ್ಯಸ್ಥರಾಗಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ರಾಜ್ಯ ಇಲಾಖೆ

ವಿಜ್ಞಾನ, ತಂತ್ರಜ್ಞಾನ, ರಾಜ್ಯ ಇಲಾಖೆ

ರಾಜ್ಯ ಇಲಾಖೆ ತಂಡದಲ್ಲಿ ಪುನೀತ್ ತಲ್ವಾರ್, ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕಚೇರಿಯ ಎರಡು ಹೊಣೆಗಳನ್ನು ಪಾವ್ ಸಿಂಗ್ ಅವರಿಗೆ ನೀಡಲಾಗಿದೆ. ಇದೇ ರೀತಿ ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ನ ಎರಡು ಎಆರ್‌ಟಿಗಳಿಗೆ ಅರುಣ್ ವೆಂಕಟರಾಮನ್ ಅವರನ್ನು ನೇಮಿಸಲಾಗಿದೆ.

ವಾಣಿಜ್ಯ, ಕಾರ್ಮಿಕ, ನ್ಯಾಯಾಂಗ

ವಾಣಿಜ್ಯ, ಕಾರ್ಮಿಕ, ನ್ಯಾಯಾಂಗ

ವಾಣಿಜ್ಯ ಇಲಾಖೆಗೆ ಪ್ರವೀಣಾ ರಾಘವನ್ ಮತ್ತು ಆತ್ಮನ್ ತ್ರಿವೇದಿ ಅವರನ್ನು ನೇಮಿಸಿದ್ದರೆ, ಶಿಕ್ಷಣ ಇಲಾಖೆಗೆ ಭಾರತ ಮೂಲದ ಶೀತಲ್ ಶಾ ಅವರನ್ನು ನೇಮಕ ಮಾಡಲಾಗಿದೆ. ಇಂಧನ ಇಲಾಖೆಗೆ ಆರ್ ರಮೇಶ್ ಮತ್ತು ರಮಾ ಜಕಾರಿಯಾ, ಹೋಮ್‌ಲ್ಯಾಂಡ್ ಭದ್ರತಾ ಇಲಾಖೆಗೆ ಶುಭಶ್ರೀ ರಾಮನಾಥನ್, ನ್ಯಾಯಾಂಗ ಇಲಾಖೆಗೆ ರಾಜ್ ಡೆ ಮತ್ತು ಕಾರ್ಮಿಕ ಇಲಾಖೆಗೆ ಸೀಮಾ ನಂದಾ ಹಾಗೂ ರಾಜ್ ನಾಯಕ್ ಅವರನ್ನು ನೇಮಕ ಮಾಡಲಾಗಿದೆ.

ಕೃಷಿ, ನಾಸಾ, ಬಜೆಟ್

ಕೃಷಿ, ನಾಸಾ, ಬಜೆಟ್

ಫೆಡರಲ್ ರಿಸರ್ವ್‌, ಬ್ಯಾಂಕಿಂಗ್ ಮತ್ತು ಭದ್ರತಾ ನಿಯಂತ್ರಣಗಳ ಎಆರ್‌ಟಿಗೆ ರೀನಾ ಅಗರವಾಲ್ ಹಾಗೂ ಸತ್ಯಂ ಖನ್ನಾ ನೇಮಕವಾಗಿದ್ದಾರೆ. ನಾಸಾಕ್ಕೆ ಭವ್ಯಾ, ರಾಷ್ಟ್ರೀಯ ಭದ್ರತಾ ಸಮಿತಿಗೆ ದಿಲ್‌ಪ್ರೀತ್ ಸಿಧು, ಮ್ಯಾನೇಜ್‌ಮೆಂಟ್ ಮತ್ತು ಬಜೆಟ್ ಕಚೇರಿಗೆ ದಿವ್ಯಾ ಕುಮಾರಯ್ಯ, ಕೃಷಿ ಇಲಾಖೆಗೆ ಕುಮಾರ್ ಚಂದ್ರನ್ ಮತ್ತು ಅಮೆರಿಕ ಅಂಚೆ ಸೇವೆಗೆ ಅನೀಶ್ ಚೋಪ್ರಾ ನೇಮಕವಾಗಿದ್ದಾರೆ.

English summary
US Elections: 20 Indian Americans have been named in president-elect Joe Biden's Agency Review Teams, including three as team leads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X