• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

26/11 ಮುಂಬೈ ದಾಳಿ ಮಾಸ್ಟರ್‌ಮೈಂಡ್ ಬಗ್ಗೆ ಮಾಹಿತಿ ಕೊಟ್ಟರೆ 5 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕಾ

|

ವಾಷಿಂಗ್ಟನ್‌, ನವೆಂಬರ್ 28: ಮುಂಬೈನಲ್ಲಿ ರಕ್ತದೋಕುಳಿ ಹರಿಸಿದ್ದ 26/11 ದಾಳಿ ನಡೆದು 12 ವರ್ಷಗಳ ನಂತರವೂ ಅಮೆರಿಕಾವು ತನ್ನ ಪ್ರಜೆಗಳ ಸಾವಿನ ನೋವನ್ನು ಮರೆತಂತಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತದ ಜೊತೆಗೆ ಕೈ ಜೋಡಿಸಲು ಮುಂದಾಗಿದೆ. ಹೀಗಾಗಿ ಮುಂಬೈ ನರಮೇಧದ ಮಾಸ್ಟರ್‌ ಮೈಂಡ್ ಲಷ್ಕರ್‌-ಎ-ತೋಯಿಬಾದ ಸಾಜಿದ್ ಮಿರ್ ಅವರ ತಲೆಯ ಮೇಲೆ ಅಮೆರಿಕಾ ಭಾರೀ ಬಹುಮಾನವನ್ನು ಘೋಷಿಸಿದೆ.

ಮಾಸ್ಟರ್‌ ಮೈಂಡ್ ಸಾಜಿದ್ ಮಿರ್ ಕುರಿತು ಮಾಹಿತಿ ನೀಡಿದವರಿಗೆ ಐದು ಮಿಲಿಯನ್ ಡಾಲರ್ ನೀಡುವುದಾಗಿ ಬಹುಮಾನವನ್ನು ಘೋಷಿಸಿದೆ.

ಪಾಕಿಸ್ತಾನ್ ಉಗ್ರರಿಗೆ ಇವನೇ ಅನ್ನ-ನೀರು ಕೊಡುವುದು

ಯುಎಸ್ ರಿವಾರ್ಡ್ಸ್ ಫಾರ್ ಜಸ್ಟೀಸ್ ಕಾರ್ಯಕ್ರಮವು ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, ''ಪಾಕಿಸ್ತಾನ ಮೂಲದ ವಿದೇಶಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯಿಬಾದ (ಎಲ್‌ಇಟಿ) ಯ ಹಿರಿಯ ಸದಸ್ಯ ಸಾಜಿದ್ ಮಿರ್ 2008 ರ ನವೆಂಬರ್‌ನಲ್ಲಿ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಸಾಜಿದ್ ಮಿರ್ ಅವರನ್ನು ಯಾವುದೇ ದೇಶದಲ್ಲಿ ಬಂಧಿಸಿದರೆ ಅಥವಾ ಶಿಕ್ಷೆಯ ಬಗ್ಗೆ ಮಾಹಿತಿಯನ್ನು ನೀಡಿದರೆ ಅವರಿಗೆ 5 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ನೀಡಲಾಗುತ್ತದೆ'' ಎಂದು ಹೇಳಿದೆ.

ನವೆಂಬರ್ 26, 2008 ರಂದು ಮುಂಬೈನ 12 ಪ್ರದೇಶಗಳಲ್ಲಿ ದಾಳಿ ಮಾಡಿದ ಪಾಕಿಸ್ತಾನ ಮೂಲದ 10 ಉಗ್ರರು ಹತ್ಯಾಕಾಂಡವನ್ನು ಸೃಷ್ಟಿಸಿದರು. ತಾಜ್ ಮಹಲ್ ಹೋಟೆಲ್, ಒಬೆರಾಯ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ (ಚಾಬಾದ್) ಮನೆ, ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ಮೇಲೆ ನಡೆದ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು. ಈ ದಾಳಿಯಲ್ಲಿ ಐವರು ಅಮೆರಿಕನ್ನರು ಕೂಡ ಸಾವನ್ನಪ್ಪಿದರು.

ದಾಳಿಗೆ ಕಾರಣವಾಗಿದ್ದ 10 ಉಗ್ರರಲ್ಲಿ ಒಂಬತ್ತು ಉಗ್ರರು ಹೊಡೆದುರುಳಿಸಲಾಯಿತು. ಜೀವಂತವಾಗಿ ಸಿಕ್ಕಿದ್ದ ಅಜ್ಮಲ್ ಅಮೀರ್ ಕಸಬ್ ಎಂಬ ಉಗ್ರನನ್ನು ಸೆರೆಹಿಡಿದು ಮರಣದಂಡನೆ ವಿಧಿಸಲಾಯಿತು. ಕಸಬ್‌ನನ್ನು ನವೆಂಬರ್ 11, 2012 ರಂದು ಪುಣೆಯ ಯರವಾಡ ಕೇಂದ್ರೀಯ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.

English summary
Twelve years after the 26/11 Mumbai attacks, the United States has announced a reward of up to USD 5 million for information on mastermind Sajid Mir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X