ವಿಶ್ವಸಂಸ್ಥೆ ವರದಿಯಲ್ಲಿ ಭಾರತೀಯ ವಲಸೆ ಕಾರ್ಮಿಕರ ಬಿಕ್ಕಟ್ಟಿನ ಉಲ್ಲೇಖ
ವಾಷಿಂಗ್ಟನ್, ಸೆಪ್ಟೆಂಬರ್ 19: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಿದ್ಧಪಡಿಸಿರುವ ಗುಲಾಮಗಿರಿಗೆ ಸಂಬಂಧಿಸಿದ ವರದಿಯೊಂದರಲ್ಲಿ ಭಾರತದ ವಲಸೆ ಕಾರ್ಮಿಕರನ್ನೂ ಉಲ್ಲೇಖಿಸಲಾಗಿದೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಭಾರತದಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಬರೆಯಲಾಗಿದೆ.
100 ಮಿಲಿಯನ್‌ಗೂ ಅಧಿಕ ಕಾರ್ಮಿಕರು ಆರ್ಥಿಕವಾಗಿ ವಂಚನೆಗೆ ಒಳಗಾಗಿದ್ದಾರೆ, ಜತೆಗೆ ಪೊಲೀಸರು ಕೂಡ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.

ಆದರೆ ಅದಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, ಇದನ್ನು ವಿಶೇಷ ವರದಿ ಎಂದು ಹೇಳಲು ಸಾಧ್ಯವಿಲ್ಲ, ಆಯಾ ರಾಜ್ಯಗಳ ಜತೆ ಈ ಕುರಿತು ಯಾವುದೇ ಮಾತುಕತೆಯೂ ನಡೆದಿಲ್ಲ.
ವರದಿಯಲ್ಲಿ ಭಾರತದಲ್ಲಿ 100 ಮಿಲಿಯನ್‌ಗೂ ಹೆಚ್ಚು ವಲಸೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದರು. ಅದರಲ್ಲಿ ಬಹಳ ಮಂದಿ ಅಲ್ಪ ಸಂಖ್ಯಾತರಿದ್ದಾರೆ. ಮನೆಗೆ ತೆರಳಲು ಸಾವಿರಾರು ಕಿ.ಮೀ ನಡೆದಿದ್ದಾರೆ.
ಅವರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಹಾಗೆಯೇ ಅವರನ್ನು ಕೊರೊನಾ ಸೋಂಕನ್ನು ಹರಡುವವರು ಎಂದು ಹೇಳಿ ಪೊಲೀಸರು ಅವರ ಮೇಲೆ ದೌರ್ಜನ್ಯವೆಗಿದ್ದಾರೆ ಎಂದು ಹೇಳಲಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ದೇಶಗಳಲ್ಲಿ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಹಾಗೂ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.












Click it and Unblock the Notifications