• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

|

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಲನ್ನು ಅರಗಿಸಿಕೊಳ್ಳಲಾಗದೆ ಪದೇ ಪದೇ ಮಾಡುತ್ತಿದ್ದ ಟ್ವೀಟ್ ಗಳನ್ನು ಟ್ವಿಟ್ಟರ್ ತೆಗೆದು ಹಾಕತೊಡಗಿದ್ದು ಗೊತ್ತಿರಬಹುದು. ಈ ನಡುವೆ ''ನಾನು ಈ ಚುನಾವಣೆಯಲ್ಲಿ ಭಾರಿ ಅಂತರರಿಂದ ಗೆದ್ದೆ'' ಎಂಬರ್ಥ ಟ್ವೀಟ್ ಮಾಡಿದ್ದಲ್ಲದೆ ಮತ್ತೊಮ್ಮೆ ನಾನು ಲಕ್ಷಾಂತರ ಮತಗಳನ್ನು ಕಳೆದುಕೊಂಡಿದ್ದೇನೆ, ಮತ ಎಣಿಕೆಯಲ್ಲಿ ಅಕ್ರಮವಾಗಿದೆ ನಾನು ಗೆದ್ದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಭಾರಿ ಕುತೂಹಲ ಕೆರಳಿಸಿದ್ದ ಪೆನ್ಸಿಲ್ವೇಲಿಯಾದ ಫಲಿತಾಂಶ ಶನಿವಾರದಂದು ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ (270 +) ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ.

ಮತದಾನ ನಿಲ್ಲಿಸಿ, ಮತ ಎಣಿಕೆ ನಿಲ್ಲಿಸಿ ಎಂದು ಅಬ್ಬರಿಸುತ್ತಿದ್ದ ಟ್ರಂಪ್ ಅವರು ಕೊನೆ ತನಕ ಹೋರಾಟ ನಡೆಸುವುದಾಗಿ ಟ್ವೀಟ್ ಮಾಡುತ್ತಲೇ ಇದ್ದರು. I WON THIS ELECTON, BY A LOT! ಎಂದು ಟ್ರಂಪ್ ಟ್ವೀಟ್ ಮಾಡಿದ್ದಕ್ಕೆ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಂ ಜಾಫರ್ ಅವರು ಟ್ರಾಲ್ ಮಾಡಿದ್ದಾರೆ. ಹೌದು ನಿಮ್ಮ ಮಾತು ನಿಜ ಐಪಿಎಲ್ 2020ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಕುಡಾ BY A LOT ಗೆದ್ದುಕೊಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಬೈಡನ್ ಹ್ಯಾರೀಸ್ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

   Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada

   ಮತ ಎಣಿಕೆ ಕೇಂದ್ರಗಳಲ್ಲಿ ನಮ್ಮ ವೀಕ್ಷಕರನ್ನು ಬಿಡಲಿಲ್ಲ, ಸುಮಾರು 71,000,000 ಮಾನ್ಯತೆ ಪಡೆದ ಮತಗಳು ಎಣಿಕೆಯಾಗಿಲ್ಲ. ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ. ಲಕ್ಷಾಂತರ ಅಂಚೆ ಮತಗಳು ಬೇಡದವರ ಕೈ ಸೇರಿವೆ ಎಂದು ಟ್ರಂಪ್ ತಮ್ಮ ಪ್ರಲಾಪ ಆರಂಭಿಸಿದ್ದಾರೆ.

   English summary
   Twitter Reactions on Donald Trump over his 'I won this election, by a lot!' tweet following Joe Biden's projected victory in the US Presidential elections.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X