• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೊನಾಲ್ಡ್ ಟ್ರಂಪ್ ಪುತ್ರ ಬ್ಯಾರನ್‌ಗೂ ಕೊರೊನಾ ಸೋಂಕು ದೃಢ

|

ವಾಷಿಂಗ್ಟನ್, ಅಕ್ಟೋಬರ್ 15: ಡೊನಾಲ್ಡ್ ಟ್ರಂಪ್ ಪುತ್ರ ಬ್ಯಾರನ್ ಟ್ರಂಪ್‌ಗೂ ಕೊರೊನಾ ಸೋಂಕು ತಗುಲಿದೆ ಎಂದು ಮೆನಾಲಿಯಾ ಮಾಹಿತಿ ನೀಡಿದ್ದಾರೆ.

ನಮ್ಮ ಭಯ ಸತ್ಯವಾಗಿದೆ, ನಮ್ಮ 14ವರ್ಷದ ಪುತ್ರನಿಗೂ ಸೋಂಕು ತಗುಲಿದೆ. ಆದರೆ ಅವನಿಗೆ ಯಾವುದೇ ಲಕ್ಷಣಗಳಿಲ್ಲ, ಕಡಿಮೆ ವಯಸ್ಸಿರುವ ಕಾರಣ ಬೇಗ ಚೇತರಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಇರುವುದಾಗಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊರೊನಾ ನೆಗೆಟಿವ್

ಮೆಲಾನಿಯಾ ಟ್ರಂಪ್ ಹಾಗೂ ಡೊನಾಲ್ಡ್ ಟ್ರಂಪ್ ಇಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಆತನಿಗೆ ಸೋಂಕು ತಗುಲಿರುವುದು ತಿಳಿದಿದೆ, ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಅವನು ಹೊಂದಿದ್ದಾನೆ. ಕೊರೊನಾ ವಿರುದ್ಧ ಹೋರಾಡುತ್ತಾನೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

ವಿದ್ಯಾರ್ಥಿಗಳಿಗೂ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಬೇಗ ಶಾಲೆಗಳನ್ನು ತೆರೆಯುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.ನವೆಂಬರ್ 3 ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಟ್ರಂಪ್ ಪ್ರಚಾರದಲ್ಲಿ ತೊಡಗಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಬಿಡನ್ ಬುಧವಾರ ಯಾವುದೇ ಪ್ರಚಾರ ಸಭೆಯನ್ನು ಹಮ್ಮಿಕೊಂಡಿರಲಿಲ್ಲ.ನಮ್ಮಿಬ್ಬರಿಗೂ ಕೊರೊನಾ ಸೋಂಕು ತಗುಲಿದ್ದಾಗ, ಪುತ್ರನಿಗೂ ಬರಬಹುದು ಎಂಬ ಸೂಚನೆ ಲಭ್ಯವಾಗಿತ್ತು.

   ಸತತ ಏರಿಕೆ ನಂತರ ದೊಡ್ಡ ಬ್ರೇಕ್ ಕಂಡ Sensex | Oneindia Kannada

   ಆಗ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದ್ದ ಕಾರಣ ಕೊಂಚ ನಿರಾಳರಾಗಿದ್ದೆವು, ಆದರೆ ಈಗ ಪಾಸಿಟಿವ್ ಬಂದಿದೆ. ಮೂವರಿಗೂ ಒಟ್ಟಿಗೆ ಸೋಂಕು ತಗುಲಿದ ಕಾರಣ ನಾವೆಲ್ಲರೂ ಒಟ್ಟಿಗೆ ಇರಲು ಸಮಯ ಸಿಕ್ಕಂತಾಗಿದೆ, ಹಾಗೆಯೇ ಒಬ್ಬರನ್ನೊಬ್ಬರ ಆರೋಗ್ಯವನ್ನು ವಿಚಾರಿಸಿಕೊಳ್ಳಬಹುದು, ಕಾಳಜಿವಹಿಸಬಹುದು ಎಂದು ಮೆಲಾನಿಯಾ ಹೇಳಿದ್ದಾರೆ.

   English summary
   Melania Trump says her 14-year-old son, Barron, had tested positive for the coronavirus but has since tested negative.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X