• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಹುಬಲಿ ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಫೆಬ್ರವರಿ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಪ್ರವಾಸಕ್ಕೂ ಮುನ್ನ ಎಡಿಟೆಡ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಶ್ವದೆಲ್ಲೆಡೆ ಸದ್ದು ಮಾಡಿದ ಪ್ರಭಾಸ್ ಅಭಿನಯದ ಚಿತ್ರ ಬಾಹುಬಲಿಯ ಎಡಿಟೆಡ್ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.

ಭಾರತದ ಉತ್ತಮ ಸ್ನೇಹಿತರ ಜೊತೆ ಸಮಯ ಕಳೆಯಲು ಎದುರು ನೋಡುತ್ತಿದ್ದೇನೆ ಎಂದು ಬರೆದು ಮೀಮ್ಸ್ ತಯಾರಿಸುವ Sol ಟ್ವೀಟ್ ಐಡಿಯಿಂದ ಸಂಕಲನಗೊಂಡ ಬಾಹುಬಲಿಯ ದೃಶ್ಯಗಳುಳ್ಳ ವಿಡಿಯೋವನ್ನು ಟ್ರಂಪ್ ಹಂಚಿಕೊಂಡಿದ್ದಾರೆ.

Fact Check: ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ನಿಜವೇ?Fact Check: ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ನಿಜವೇ?

ವಿಡಿಯೋದಲ್ಲಿ ಪ್ರಭಾಸ್(ಬಾಹುಬಲಿ) ಬದಲಿಗೆ ಟ್ರಂಪ್ ಮುಖವನ್ನು ಹಾಕಲಾಗಿದೆ. ಯುದ್ಧದಲ್ಲಿ ಹೋರಾಡುವುದು, ತಾಯಿ ಮಗನ ಸಂಬಂಧ ಎಲ್ಲವನ್ನು ಈ ವಿಡಿಯೋ ಹೊಂದಿದೆ. ಯುಎಸ್ಎ, ಇಂಡಿಯಾ ಯುನೈಟೆಡ್ ಎಂದು ಬಾಹುಬಲಿ ವಿಡಿಯೋ ಎಡಿಟ್ ಮಾಡಲಾಗಿದೆ.

ಟ್ರಂಪ್ ಅಲ್ಲದೆ, ಇವಾಂಕಾ ಟ್ರಂಪ್, ಮೆಲೇನಿಯಾ ಟ್ರಂಪ್ ಕೂಡಾ ಇದ್ದಾರೆ. ಮೋದಿ ಹಾಗೂ ಜಶೋದಾಬೆನ್ ಕೂಡಾ ಇದ್ದಾರೆ. ಬಾಹುಬಲಿ ಹಿಂದಿ ಆವೃತ್ತಿ ಚಿತ್ರದ ಪ್ರಮುಖ ದೃಶ್ಯಗಳುಳ್ಳ ವಿಡಿಯೋವನ್ನು ಬಳಸಲಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ.

ಡೊನಾಲ್ಡ್‌ ಟ್ರಂಪ್‌ಗೆ 'ಟಾಟಾ' ಮಾಡಲು 69 ಲಕ್ಷ ಜನರಿಗೆ ಕೆಲಸ!: ಕಾಂಗ್ರೆಸ್‌ನ ಹೊಸ ಜಾಹೀರಾತು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ.

English summary
Trump retweeted a short video in which his face was superimposed on the hit movie-character Bahubali, showing the president as a great saviour bringing peace to his kingdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X