• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೊನಾಲ್ಡ್‌ ಟ್ರಂಪ್‌ಗೆ 'ಟಾಟಾ' ಮಾಡಲು 69 ಲಕ್ಷ ಜನರಿಗೆ ಕೆಲಸ!: ಕಾಂಗ್ರೆಸ್‌ನ ಹೊಸ ಜಾಹೀರಾತು

|

ನವದೆಹಲಿ, ಫೆಬ್ರವರಿ 22: ತಮ್ಮ ಭಾರತ ಭೇಟಿಯ ವೇಳೆ 6 ರಿಂದ 10 ಮಿಲಿಯನ್ ಜನರು ಸೇರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅದನ್ನು ಕೇಂದ್ರ ಸರ್ಕಾರವನ್ನು ಅಣಕಿಸಲು ಕಾಂಗ್ರೆಸ್ ಬಳಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯದ ಜಾಹೀರಾತು ಪ್ರಕಟಿಸಿದೆ.

   Rahul Gandhi Selected As AICC President?Again!! | Rahul Gandhi | AICC | Oneindia Kannada

   'ಮೋದಿಜಿ ಅವರು ಭರವಸೆ ನೀಡಿರುವ 2 ಕೋಟಿ ಉದ್ಯೋಗದಲ್ಲಿ 69 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈಗಲೇ ಅರ್ಜಿ ಸಲ್ಲಿಸಿ. ಕೂಡಲೇ' ಎಂದು ಕಾಂಗ್ರೆಸ್ ವ್ಯಂಗ್ಯದ ಟ್ವೀಟ್ ಮಾಡಿದೆ.

   ಉದ್ಯೋಗಾವಕಾಶದ ಜಾಹೀರಾತಿನ ಸ್ವರೂಪದಲ್ಲಿ 'ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನಾ ಸಮಿತಿ' ಎಂಬ ಶೀರ್ಷಿಕೆ ಹಾಕಿರುವ ಕಾಂಗ್ರೆಸ್, ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ. ಉದ್ಯೋಗದ ಸ್ವರೂಪವನ್ನು 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರತ್ತ ಕೈಬೀಸುವುದು' ಎಂದು ಲೇವಡಿ ಮಾಡಲಾಗಿದೆ.

   Fact Check: ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ನಿಜವೇ?

   ಇದಕ್ಕಾಗಿ 69 ಲಕ್ಷ ಹುದ್ದೆಗಳು ಖಾಲಿ ಇದ್ದು, ಇದಕ್ಕೆ 'ಅಚ್ಚೇ ದಿನ'ವನ್ನು ಸಂಭಾವನೆಯಾಗಿ ನೀಡಲಾಗುತ್ತದೆ. ದಿನಾಂಕ 24ರ ಫೆಬ್ರವರಿ 2020. ಸಮಯ ಮಧ್ಯಾಹ್ನ 12 ಗಂಟೆಯಿಂದ. ಸ್ಥಳ: ಮೊಟೆರಾ ಕ್ರೀಡಾಂಗಣದ ಇಂಡಿಯಾ ರೋಡ್ ಶೋದಲ್ಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

   69 ಲಕ್ಷ ಜನರಿಗೆ ಉದ್ಯೋಗ

   69 ಲಕ್ಷ ಜನರಿಗೆ ಉದ್ಯೋಗ

   ಡೊನಾಲ್ಡ್ ಟ್ರಂಪ್ ಅವರು ಭಾರತದ ಭೇಟಿ ವೇಳೆ ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣವನ್ನು ಅಹಮದಾಬಾದ್‌ನ ಮೊಟೆರಾದಲ್ಲಿ ಉದ್ಘಾಟಿಸಲಿದ್ದು, ಆ ವೇಳೆ 70 ಲಕ್ಷ ಜನರು ಭಾಗವಹಿಸಬಹುದು ಎಂದು ಅಂದಾಜಿಸಿದ್ದಾರೆ. ಅಹಮದಾಬಾದ್ ಪಾಲಿಕೆ ಆಯುಕ್ತ ವಿಜಯ್ ನೆಹ್ರಾ ಅವರು ಒಂದು ಲಕ್ಷ ಜನರು ಸೇರುವುದು ಖಚಿತವಾಗಿದೆ ಎಂದು ತಿಳಿಸಿದ್ದರು. ಹೀಗಾಗಿ ಕಾಂಗ್ರೆಸ್ 70 ಲಕ್ಷ ಜನರಲ್ಲಿ ಒಂದು ಲಕ್ಷವನ್ನು ಕಳೆದು 69 ಲಕ್ಷ ಜನರಿಗೆ ಉದ್ಯೋಗಾವಕಾಶವಿದೆ ಎಂಬ ಜಾಹೀರಾತು ನೀಡಿದೆ.

   ಟ್ರಂಪ್ ಭೇಟಿಯ ಕುರಿತು ರಾಜ್ಯ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಹ ಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ.

   ಇದಕ್ಕೆ ಜನರ ಹಣ ವ್ಯಯಿಸಬೇಕೇ?

   ಇದಕ್ಕೆ ಜನರ ಹಣ ವ್ಯಯಿಸಬೇಕೇ?

   ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವಂತೆ, ಮಾನ್ಯ ನರೇಂದ್ರ ಮೋದಿ ಅವರು ಟ್ರಂಪ್ ಅವರ ಭೇಟಿಯ ಸಮಯದಲ್ಲಿ ರೋಡ್ ಶೋಗೆ ಸುಮಾರು ಎಪ್ಪತ್ತು ಲಕ್ಷ ಜನರನ್ನು ಸೇರಿಸುವ ಭರವಸೆ ನೀಡಿದ್ದಾರಂತೆ.

   * ಇದು ಸಾಧ್ಯವೇ?

   * ಇದು ಅಗತ್ಯವೇ?

   * ಜನತೆಯ ಹಣವನ್ನು ವ್ಯರ್ಥ ಮಾಡುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಾರೆ.

   ಶಾಲೆಗೆ ಮೆಲಾನಿಯಾ ಟ್ರಂಪ್ ಭೇಟಿ: ಕೇಜ್ರಿವಾಲ್ ಹೆಸರನ್ನೇ ತೆಗೆದುಹಾಕಿದ ಕೇಂದ್ರ ಸರ್ಕಾರ

   ಭರವಸೆ ನೀಡಿರಿ, ಮುರಿಯಿರಿ

   ಭರವಸೆ ನೀಡಿರಿ, ಮುರಿಯಿರಿ

   ಈ ಕಾಲಗಣನೆಯನ್ನು ನೀವು ಅರ್ಥೈಸಿಕೊಳ್ಳಿರಿ

   * ಭರವಸೆಗಳನ್ನು ನೀಡಿರಿ

   * ಭರವಸೆಗಳನ್ನು ಮುರಿಯಿರಿ

   * ಭರವಸೆ ನೀಡಿದ್ದನ್ನು ಮರೆತುಬಿಡಿ, ಎಂದು ಕರ್ನಾಟಕ ಕಾಂಗ್ರೆಸ್ ಮತ್ತೊಂದು ಟ್ವೀಟ್‌ನಲ್ಲಿ ಟೀಕಿಸಿದೆ.

   'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ

   ಸುಳಿನ ಖಾತೆಗೆ ಹೊಸ ಸೇರ್ಪಡೆ

   ಸುಳಿನ ಖಾತೆಗೆ ಹೊಸ ಸೇರ್ಪಡೆ

   ಮೋದಿ ಜುಮ್ಲಾ ಟ್ರ್ಯಾಕರ್

   * 2 ಕೋಟಿ ಉದ್ಯೋಗ

   * ಪ್ರತಿಯೋಬ್ಬರ ಖಾತೆಗೆ 15 ಲಕ್ಷ ರೂ.

   * 100 ಸ್ಮಾರ್ಟ್ ಸಿಟಿಗಳು

   * ಅಚ್ಚೇ ದಿನ್

   * ಟ್ರಂಪ್ ರೋಡ್ ಶೋ ಗೆ 70 ಲಕ್ಷ ಜನ ಸೇರಿಸುವುದು (ಹೊಸ ಸೇರ್ಪಡೆ) ಎಂದು ಮೋದಿ ಅವರ ಸುಳ್ಳಿನ ದಾಖಲೆಗಳು ಎಂಬುದಾಗಿ ರಾಜ್ಯ ಕಾಂಗ್ರೆಸ್ ಹೇಳಿದೆ.

   English summary
   Hiring now to wave at US President Donald Trump, 69 Vacancies; Congress jibes at Narendra Modi Government over Donal Trump's visit.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X