• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕು ತಗುಲುವುದು 'ದೇವರ ಆಶೀರ್ವಾದ': ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 08: ಕೊರೊನಾ ಸೋಂಕು ತಗುಲುವುದು ದೇವರ ಆಶೀರ್ವಾದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಧ್ಯಕ್ಕೆ ಡೊನಾಲ್ಡ್ ಟ್ರಂಪ್ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಆ ತಲೆಬಿಸಿ ನಡುವೆಯೂ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

ಬಹುಶಃ ಇದು ದೇವರ ಆಶೀರ್ವಾದವಿರಬೇಕು, ಹೀಗಾಗಿಯೇ ನಾನು ಗೆದ್ದುಬಂದಿದ್ದೇನೆ. ನವೆಂಬರ್ 3 ರಂದು ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ನಂತರ ಜನತೆಯನ್ನು ಹಿಂಡಿ, ಹಿಪ್ಪೆ ಮಾಡುತ್ತಿರುವ ಜಾಡ್ಯ ಕೊರೋನ ನಿಗ್ರಹಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಟ್ರಂಪ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಮುಂಚಿತವಾಗಿಯೇ ದೇಶ ಲಸಿಕೆ ಹೊಂದಿರಬೇಕು ಎಂಬುದು ಜನತೆಯ ಆಡಳಿತದ ಆಶಯವಾಗಿದೆ. ಚುನಾವಣೆಯ ಸಮಯದಲ್ಲಿ ಎಲ್ಲರೂ ರಾಜಕಿಯ ಆಟ ಆಡಲು ಬಯಸುತ್ತಾರೆ ಆದರೂ ಚುನಾವಣೆಯ ನಂತರ ಎಲ್ಲವೂ ಸರಿಯಾಗಲಿದೆ ಎಂಬ ಅದಮ್ಯ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಕೊರೊನಾ ದಿಂದ ಅಮೆರಿಕದಲ್ಲಿ ಈವರೆಗೆ 2 ಲಕ್ಷ ಜನರು ಮೃತಪಟ್ಟಿದ್ದಾರೆ ಜಾಗತಿಕವಾಗಿ ಹೆಚ್ಚು ಬಾದಿತ ರಾಷ್ಟ್ರವಾಗಿದೆ.

ಟ್ರಂಪ್‌ಗೆ ಹತ್ತಿರದಲ್ಲಿರುವ ಸುಮಾರು 19 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಚೀನಾ ಬೆಲೆ ತೆರಬೇಕಾಗುತ್ತದೆ

ಚೀನಾ ಬೆಲೆ ತೆರಬೇಕಾಗುತ್ತದೆ

ಇಡೀ ವಿಶ್ವಕ್ಕೆ ಕೊರೊನಾ ಹರಡಿದ ಚೀನಾ ರಾಷ್ಟ್ರ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಸಿದ್ದಾರೆ.

ವಿಡಿಯೋ ಸಂದೇಶ

ವಿಡಿಯೋ ಸಂದೇಶ

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಡಿಯೇ ಸಂದೇಶವೊಂದನ್ನು ಹಂಚಿಕೊಂಡಿರುವ ಟ್ರಂಪ್ ಅವರು ಕೊರೊನಾ ಸಾಂಕ್ರಾಮಿಕ ವಿಚಾರದಲ್ಲಿ ಚೀನಾ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ಮುಕ್ತಗೊಳಿಸುತ್ತೇನೆ

ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ಮುಕ್ತಗೊಳಿಸುತ್ತೇನೆ

ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ಮುಕ್ತಗೊಳಿಸಲು ನಾನು ಹೊರಟಿದ್ದೇನೆ. ಅದಕ್ಕಾಗಿ ನೀವು ಬೆಲೆ ತೆರಬೇಕಿಲ್ಲ. ಕೊರೋನಾ ಸೋಂಕಿಗೊಳಗಾಗಿರುವುದು ನಿಮ್ಮ ತಪ್ಪಲ್ಲ. ಇದು ಚೀನಾ ಮಾಡಿದ ತಪ್ಪು. ಇಡೀ ವಿಶ್ವಕ್ಕೆ ಕೊರೊನಾ ಹರಡಿದ ಆ ರಾಷ್ಟ್ರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸಂಭಾವ್ಯ ಔಷಧದ ಬಗ್ಗೆ ಅರಿವು

ಸಂಭಾವ್ಯ ಔಷಧದ ಬಗ್ಗೆ ಅರಿವು

ಇದೇ ವೇಳೆ ತಮಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ದೇವರ ಆಶೀರ್ವಾದ ಎಂದಿರುವ ಅವರು, ರೋಗಕ್ಕೆ ನೀಡುವ ಸಂಭಾವ್ಯ ಔಷಧ, ಚಿಕಿತ್ಸೆಯ ಬಗ್ಗೆ ತಮಗೆ ಈ ಮೂಲಕ ಅರಿವು ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.

English summary
U.S. President Donald Trump on Wednesday declared that catching the coronavirus was a "blessing from God" that exposed him to experimental treatments he vowed would become free for all Americans, in his first video message since leaving hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X