• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Mark Esper Terminated..! ಟ್ರಂಪ್ ಕೋಪಕ್ಕೆ ಮತ್ತೊಬ್ಬ ಅಧಿಕಾರಿ ಉಡೀಸ್..!

|

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದಿದ್ದಾರೆ. ಒಂದು ಕಡೆ ಬೈಡನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತನಾಡುತ್ತಿರುವಾಗಲೇ, ಅಮೆರಿಕದ ರಕ್ಷಣಾ ಕಾರ್ಯದರ್ಶಿಯನ್ನು ವಜಾ ಮಾಡಿದ್ದಾರೆ. ಇನ್ನೇನು ಮುಂದಿನ ಜನವರಿಯಲ್ಲಿ ಟ್ರಂಪ್ ಅಧ್ಯಕ್ಷೀಯ ಖುರ್ಚಿ ತೊರೆದು ಹೊರಡಬೇಕಿದೆ. ಆದರೆ ಸದ್ಯಕ್ಕೆ ಅವರೇ ಕಾರ್ಯನಿರತ ಅಧ್ಯಕ್ಷರು. ಬೈಡನ್‌ಗೆ ಜನವರಿಲ್ಲಿ ಅಧಿಕಾರ ಹಸ್ತಾಂತರ ಮಾಡುವವರೆಗೂ ಟ್ರಂಪ್‌ಗೆ ಕಾರ್ಯನಿರತ ಅಧ್ಯಕ್ಷರ ಅಧಿಕಾರಗಳು ಇರುತ್ತವೆ.

ಆದರೆ ಸೋತು ಸುಣ್ಣವಾದರೂ ವಿವಾದಗಳ ಬೆನ್ನುಬಿಡದ ಟ್ರಂಪ್ ಒಂದಾದ ಮೇಲೆ ಒಂದೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಎಸ್ಪರ್ ಜಾಗಕ್ಕೆ ಕ್ರಿಸ್ಟೋಫರ್ ಮಿಲ್ಲರ್ ನೇಮಕವಾಗಿದ್ದು, ಕ್ರಿಸ್ಟೋಫರ್ ಮಿಲ್ಲರ್ ಇನ್ನುಮುಂದೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಹುದ್ದೆ ನಿಭಾಯಿಸುವರು. ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರದ ಮುಖ್ಯಸ್ಥರಾಗಿರುವ ಮಿಲ್ಲರ್‌ಗೆ ಹೊಸ ಜವಾಬ್ದಾರಿ ನೀಡಲಾಗಿದೆ.

ಟ್ರಂಪ್ ನಿರ್ಗಮನ ಪ್ರಕ್ರಿಯೆ ಹೇಗಿರುತ್ತದೆ? ಬಲವಂತವೋ- ಬರೀ ಸ್ವಂತವೋ?

ವಿಶೇಷ ಪಡೆಗಳ ಅಧಿಕಾರಿಯಾಗಿಯೂ ಕ್ರಿಸ್ಟೋಫರ್ ಮಿಲ್ಲರ್ ಕಾರ್ಯನಿರ್ವಹಿಸಿದ್ದರು. ಆದರೆ ಇಷ್ಟೆಲ್ಲಾ ಗೌಪ್ಯ ವಿಚಾರವನ್ನ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯವನ್ನ ಟ್ರಂಪ್ ಘೋಷಣೆ ಮಾಡಿದ್ದು ಮಾತ್ರ ಟ್ವಿಟ್ಟರ್‌ನಲ್ಲಿ. ಇದು ಟ್ರಂಪ್ ವಿರುದ್ಧ ಹೊತ್ತಿಕೊಂಡಿರುವ ಕಿಚ್ಚಿಗೆ ತುಪ್ಪ ಸುರಿದಿದೆ. ಸ್ವತಃ ಟ್ರಂಪ್ ಪಕ್ಷದವರೇ ಡೊನಾಲ್ಡ್ ಟ್ರಂಪ್‌ರ ಈ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಅಧಿಕಾರಿಗಳು ಶಾಶ್ವತವಲ್ಲ..!

ಅಮೆರಿಕದಲ್ಲಿ ಅಧಿಕಾರಿಗಳು ಶಾಶ್ವತವಲ್ಲ..!

ಭಾರತದ ಸರ್ಕಾರಿ ಕಚೇರಿಗಳಲ್ಲಿ ಒಂದು ಮಾತು ಸಾಮಾನ್ಯವಾಗಿ ಕೇಳಿಬರುತ್ತೆ. ಅದೇನೆಂದರೆ, ಸರ್ಕಾರ ಈಗ ಇರುತ್ತೆ. ಮುಂದಿನ 5 ವರ್ಷಕ್ಕೆ ಬಿದ್ದು ಹೋಗುತ್ತೆ. ಆದರೆ ಅಧಿಕಾರಿಗಳು ನಿವೃತ್ತರಾಗುವ ತನಕ ಶಾಶ್ವತವೆಂದು. ಆದರೆ ಈ ಮಾತು ಅಮೆರಿಕದ ಪಾಲಿಗೆ ಅಕ್ಷರಶಃ ಸುಳ್ಳು. ಏಕೆಂದರೆ ಅಲ್ಲಿ ಅಧಿಕಾರಿಗಳು ಕೂಡ ಕಾಂಟ್ರ್ಯಾಕ್ಟ್ ಲೇಬರ್‌ಗಳ ರೀತಿ. ಅಂದರೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರ ರೀತಿ.

ಅಮೆರಿಕದಲ್ಲಿ 4 ವರ್ಷಗಳಿಗೆ ಒಮ್ಮೆ ಸರ್ಕಾರ ಬದಲಾದಾಗ ಹಿಂದಿನ ಅಧ್ಯಕ್ಷರೇ ಉಳಿದರೆ, ಅಧಿಕಾರಿಗಳು ತಮ್ಮ ಸ್ಥಾನದಲ್ಲಿ ಉಳಿಯುವರು. ಅಕಸ್ಮಾತ್ ಹಿಂದಿನ ಅಧ್ಯಕ್ಷರು ಸೋತರೆ, ಇಲ್ಲವೇ ಅವರ ಅಧಿಕಾರದ ಅವಧಿ ಮುಗಿದರೆ ಅಧಿಕಾರಿಗಳು ಕೂಡ ನಿವೃತ್ತರಾಗುವರು. ಇಂತಹ ವ್ಯವಸ್ಥೆಯಲ್ಲಿ ಆಗಾಗ ಅಧಿಕಾರಿಗಳನ್ನು ಬದಲಾಯಿಸಿದರೆ ಆಡಳಿತ ಯಂತ್ರ ಕುಸಿಯುವುದರಲ್ಲಿ ಅನುಮಾನವಿಲ್ಲ.

ಈಗ ಟ್ರಂಪ್ ನಿರ್ಧಾರಗಳಿಂದ ಎದುರಾಗುತ್ತಿರುವ ಪರಿಣಾಮಗಳು ಕೂಡ ಇದೇ ರೀತಿಯಾಗಿದೆ. ಕೊರೊನಾ ಕೂಪದಲ್ಲಿ ನರಳುತ್ತಿರುವ ಅಮೆರಿಕದಲ್ಲಿ ಈ ರೀತಿ ಅಧಿಕಾರಿಗಳನ್ನು ಪದೇ ಪದೆ ಬದಲಾಯಿಸಿದರೆ ಆಡಳಿತ ಹಳ್ಳ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ.

ಟ್ರಂಪ್ ಮಾತು ಕೇಳದಿದ್ದರೆ ಉಡೀಸ್..!

ಟ್ರಂಪ್ ಮಾತು ಕೇಳದಿದ್ದರೆ ಉಡೀಸ್..!

ಅಮೆರಿಕದಲ್ಲಿ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನ ಇರುತ್ತದೆ. ಅವರ ನೇಮಕ ಹಾಗೂ ಅವರ ಉಚ್ಛಾಟನೆಯ ವಿಧಾನಗಳು ಸರ್ಕಾರದ ಹಂತದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಅದಕ್ಕೊಂದು ಸಂಸ್ಕೃತಿ ಇದೆ. ಆದರೆ ಟ್ರಂಪ್‌ ಇದ್ಯಾವುದನ್ನೂ ಪಾಲಿಸುವ ವ್ಯಕ್ತಿಯಲ್ಲ. ತಮಗೆ ಇಷ್ಟಬಂದ ಅಧಿಕಾರಿಗೆ ಹುದ್ದೆ ಕೊಡುತ್ತಾರೆ, ಬೇಡ ಎಂದು ಅಂದುಕೊಂಡರೆ ಕ್ಷಣಮಾತ್ರದಲ್ಲಿ ಆ ಅಧಿಕಾರಿಗೆ ಗೇಟ್‌ಪಾಸ್ ಕೊಡ್ತಾರೆ.

ಶ್‌..! ಇದು ಬೈಡನ್ ಜಮಾನ, ಬದಲಾಗಲಿದೆ ಅಮೆರಿಕ..!

ಆದರೆ ಟ್ರಂಪ್ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸುವುದು ತಮ್ಮ ವೈಟ್‌ಹೌಸ್ ಕಚೇರಿಯಲ್ಲಿ ಅಲ್ಲ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ..! ಹೌದು ಈ ರೀತಿ ಟ್ರಂಪ್ ಮನಸ್ಸಿಗೆ ಬಂದಂತೆ ಅಧಿಕಾರಿಗಳು ಉಚ್ಛಾಟನೆ ಮಾಡುತ್ತಿರುವುದು ಭಾರಿ ವಿವಾದ ಎಬ್ಬಿಸಿದೆ. ಈ ಹಿಂದೆ ಕೂಡ ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಹಲವು ಅಧಿಕಾರಿಗಳನ್ನು ಅವರ ಹುದ್ದೆಯಿಂದ ಕಿತ್ತು ಬಿಸಾಡಿದ್ದರು.

ಈಗ ಮಾರ್ಕ್ ಎಸ್ಪರ್ ಸರದಿ. ಟ್ರಂಪ್ ಕೈಗೊಂಡಿದ್ದ ಹಲವು ನಿರ್ಧಾರಗಳನ್ನು ಎಸ್ಪರ್ ವಿರೋಧಿಸಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಎಸ್ಪರ್‌ಗೆ ಗೇಟ್‌ಪಾಸ್ ಕೊಟ್ಟಿದ್ದಾರೆ.

ವೈಟ್‌ಹೌಸ್‌ ತೊರೆಯಲು ಕೌಂಟ್‌ಡೌನ್

ವೈಟ್‌ಹೌಸ್‌ ತೊರೆಯಲು ಕೌಂಟ್‌ಡೌನ್

ಡೊನಾಲ್ಡ್ ಟ್ರಂಪ್ ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದಾರೆ. ಈ ಮೂಲಕ ಜೋ ಬೈಡನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗೆ ಅಮೆರಿಕದ ನಿರ್ಗಮಿತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಬೈಡನ್‌ಗೆ ಅಧಿಕಾರ ಹಸ್ತಾಂತರ ಮಾಡಬೇಕಿದೆ. ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ 2021ರ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೋತರೂ ಟ್ರಂಪ್ ಬಿಂದಾಸ್, ಮುಂದುವರಿದ ಬೈಡನ್ ಸಂಭ್ರಮಾಚರಣೆ

ಈ ಕಾರ್ಯಕ್ರಮದ ಬಳಿಕ ಬೈಡನ್‌ಗೆ ಟ್ರಂಪ್ ಅಧಿಕಾರ ಹಸ್ತಾಂತರ ಮಾಡಬೇಕು. ಅಲ್ಲಿಗೆ ಸುಮಾರು 10 ವಾರ ಮಾತ್ರ ಬಾಕಿ ಉಳಿದಿದೆ. ಆದರೆ ಟ್ರಂಪ್ ಮಾಡುತ್ತಿರುವ ಎಡವಟ್ಟುಗಳೇ ಬೇರೆ. ಅಧಿಕಾರ ಹಸ್ತಾಂತರಕ್ಕೂ ಮುನ್ನ ಹಲವು ವಿವಾದಾತ್ಮಕ ನಿರ್ಧಾರಗಳನ್ನ ಕೈಗೊಳ್ಳುತ್ತಿದ್ದಾರೆ. ಇದು ಬೈಡನ್‌ ಅಧಿಕಾರಕ್ಕೆ ಬಂದ ನಂತರ ಭಾರಿ ಸಂಕಷ್ಟ ತಂದೊಡ್ಡಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

 ಟ್ರಂಪ್ ವಿರುದ್ಧ ಲೀಗಲ್ ಫೈಟ್..?

ಟ್ರಂಪ್ ವಿರುದ್ಧ ಲೀಗಲ್ ಫೈಟ್..?

ಒಂದಲ್ಲ ಎರಡಲ್ಲ, ಡೊನಾಲ್ಡ್ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳು ಸಾವಿರಾರು. ಇಡೀ ಅಮೆರಿಕದ ಇತಿಹಾಸದಲ್ಲೇ ಟ್ರಂಪ್ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎಂಬ ಕೆಟ್ಟ ಹೆಸರು ಪಡೆದಿದ್ದಾರೆ. ಈ ಹಿಂದೆ ನಿಕ್ಸನ್ ಅವರನ್ನೇ ವಿವಾದಗಳ ಸರದಾರ ಎನ್ನಲಾಗುತ್ತಿತ್ತು. ಆದರೆ ಈ ಪಟ್ಟವನ್ನೂ ಟ್ರಂಪ್ ಕಸಿದುಕೊಂಡಿದ್ದಾರೆ.

ಬೈಡನ್ ಗೆದ್ದಾಗ ಗಾಲ್ಫ್ ಆಟ, ಟ್ರಂಪ್ ಮುಂದಿನ ನಡೆ ಏನು ಎತ್ತ?

ಅತ್ತ ಮನಸ್ಸಿಗೆ ಬಂದಂತೆ ನಿರ್ಧಾರ ತೆಗೆದುಕೊಳ್ಳುವುದು ಹಾಗೂ ತಮ್ಮ ನಿರ್ಧಾರಗಳಿಂದ ಬೇಕಂತಲೇ ಅಮೆರಿಕದ ಘನತೆಗೆ ಧಕ್ಕೆಯಾಗುವಂತೆ ಮಾಡುವುದು ಟ್ರಂಪ್‌ಗೆ ರೂಢಿಯಾಗಿದೆ ಎಂದು ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಟ್ರಂಪ್ ವರ್ತಿಸುತ್ತಿದ್ದಾರೆ. ಆದರೆ ಇದನ್ನೆಲ್ಲಾ ನೂತನ ಅಧ್ಯಕ್ಷ ಜೋ ಬೈಡನ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಟ್ರಂಪ್ ವಿರುದ್ಧ ಕಾನೂನು ಹೋರಾಟಕ್ಕೆ ಬೈಡನ್ ಪಡೆ ಅಣಿಯಾಗುತ್ತಿದೆ. ಒಂದು ಬಾರಿ ಬೈಡನ್ ಅಧಿಕಾರ ವಹಿಸಿಕೊಂಡರೆ ಟ್ರಂಪ್‌ಗೆ ಗಂಡಾಂತರ ಪಕ್ಕಾ.

English summary
Donald Trump has fired US Secretary of defence Mark Esper and replaces him with Christopher Miller. Trump announced this news on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X