• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಕ್ಷಣಾ ಇಲಾಖೆಗೆ ತನ್ನ ಆಪ್ತರನ್ನು ನೇಮಿಸಿದ ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ನವೆಂಬರ್ 11:ಡೊನಾಲ್ಡ್ ಟ್ರಂಪ್ ಸರ್ಕಾರದ ರಕ್ಷಣಾ ಕಾರ್ಯದರ್ಶಿಯನ್ನು ಕೈಬಿಟ್ಟ ಬೆನ್ನಲ್ಲೇ ರಕ್ಷಣ ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ಅಧ್ಯಕ್ಷೀಯ ಚುನಾವಣೆ ಸೋಲಿನ ಬಳಿಕ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿರುವುದು ಆತಂಕ ಹಾಗೂ ಅಚ್ಚರಿಗೆ ಕಾರಣವಾಗಿದೆ.ಅಧಿಕಾರ ಬಿಟ್ಟುಕೊಡಲು ಟ್ರಂಪ್ ಹಿಂದಡಿ ಹಾಕುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಮಾಡಿರುವುದು ಭವಿಷ್ಯದ ಬಗ್ಗೆ ಇನ್ನಷ್ಟು ಆತಂಕ ಮೂಡಿಸಿದೆ.

ಮತ್ತೊಂದು ಕೇಸು ದಾಖಲಿಸಿದ ಟ್ರಂಪ್, ಬೈಡನ್‌ಗೆ ಹೊಸ ತಲೆನೋವು..!

ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಅಮೆರಿಕ ಸರ್ಕಾರದಲ್ಲಿ ಈಗಾಗಲೇ ಕೆಲವರು ರಾಜೀನಾಮೆ ನೀಡುತ್ತಿದ್ದಾರೆ. ಆ ಜಾಗಗಳಿಗೆ ಟ್ರಂಪ್ ತನ್ನ ಅತ್ಯಂತ ಆಪ್ತ ಬಳಗವನ್ನು ನೇಮಿಸುತ್ತಿದ್ದಾರೆ.

ಇನ್ನೊಂದು ವಿಶೇಷವೆಂದರೆ ಬರಾಕ್ ಒಬಾಮಾ ಅವರನ್ನು ಜಾಗತಿಕ ಭಯೋತ್ಪಾದಕ ಎಂದು ಹೇಳಿದ್ದ ಕ್ರಿಸ್ಟೋಫರ್ ಮಿಲ್ಲರ್ ಅವರನ್ನು ಈಗ ರಕ್ಷಣಾ ಇಲಾಖೆಗೆ ನೇಮಿಸಲಾಗಿದೆ.ಎಲ್ಲವೂ ಸರಾಗವಾಗಿ ನಡೆದರೆ ಜನವರಿಯಲ್ಲಿ ಜೋ ಬೈಡನ್ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಆಗ ಮತ್ತೆ ಅಮೆರಿಕ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ.

ಆ ಅವಧಿಯೊಳಗೆ ಸೀಮಿತ ಅಧಿಕಾರವಿದ್ದರೂ ಈ ಬದಲಾವಣೆ ಮೂಲಕ ಏನು ಮಾಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

English summary
The Trump administration has carried out sweeping changes atop the Defense Department's civilian leadership structure, removing several of its most senior officials and replacing them with perceived loyalists to the President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X