ಅಮೆರಿಕನ್ನರಿಗೆ ಉಕ್ರೇನ್‌ನಿಂದ ಕೂಡಲೇ ಹೊರಡಲು ಬೈಡನ್ ಸೂಚನೆ

ವಾಷಿಂಗ್ಟನ್, ಫೆಬ್ರವರಿ 11: ಉಕ್ರೇನ್‌ನಿಂದ ಅಮೆರಿಕದ ಪ್ರಜೆಗಳು ಈ ಕೂಡಲೇ ಹೊರಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೂಚನೆ ನೀಡಿದ್ದಾರೆ.

ರಷ್ಯಾದೊಂದಿಗೆ ತೀವ್ರ ಮಿಲಿಟರಿ ಸಂಘರ್ಷ ನಡೆಯುವ ಸಾಧ್ಯತೆ ಇರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇದು ಉಗ್ರ ಸಂಘಟನೆಗಳ ಜತೆಗಿನ ಸಂಘರ್ಷವಲ್ಲ, ಜಗತ್ತಿನ ಅತಿ ದೊಡ್ಡ ಸೇನಾ ಬಲವನ್ನು ಹೊಂದಿರುವ ರಾಷ್ಟ್ರದೊಂದಿಗೆ ನಾವು ಈಗ ಮುಖಾಮುಖಿಯಾಗಿದ್ದೇವೆ, ಇದು ಸಂಪೂರ್ಣ ಭಿನ್ನ ಪರಿಸ್ಥಿತಿಯಾಗಿದ್ದು, ಯಾವುದೇ ಸಮಯದಲ್ಲಿ ವಿಚಿತ್ರ ತಿರುವುದು ಎದುರಾಗಬಹುದು ಎಂದು ಬೈಡನ್ ಹೇಳಿದ್ದಾರೆ.

ಅಮೆರಿಕ ಸೇನೆ ಹಾಗೂ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಉಕ್ರೇನ್ ಮೇಲೆ ರಷ್ಯಾ ಪಡೆಗಳು ಸೇನಾ ಟ್ಯಾಂಕ್‌ಗಳ ಜತೆಗೆ ದೊಡ್ಡ ಮಟ್ಟದಲ್ಲಿ ಆಕ್ರಮಣ ನಡೆಸಲಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಕೈಗೊಳ್ಳುವ ಯಾವುದೇ ಕ್ರಮವು ಅಮೆರಿಕದ ನಾಗರಿಕರ ಮೇಲೆ ಪರಿಣಾಮ ಬೀರಲಿದೆ ಎಂದು ಬೈಡನ್ ತಿಳಿಸಿದ್ದಾರೆ.

Things Could Go Crazy: Joe Biden Asks Americans To Leave Ukraine Soon

ಅಮೆರಿಕ ಸರ್ಕಾರವು ತನ್ನ ಪ್ರಜೆಗಳಿಗೆ ಹೊರಡಿಸಿರುವ ಸಲಹಾ ಪತ್ರದ ಪ್ರಕಾರ, ರಷ್ಯಾದ ಸೇನಾ ಕಾರ್ಯಾಚರಣೆಯ ಅಪಾಯ ಹಾಗೂ ಕೋವಿಡ್ 19 ಕಾರಣಗಳಿಂದಾಗಿ ಅಮೆರಿಕನ್ನರು ಉಕ್ರೇನ್‌ಗೆ ಪ್ರಯಾಣಿಸಬಾರದು ಎಂದು ಉಲ್ಲೇಖಿಸಲಾಗಿದೆ.

ಉಕ್ರೇನ್ ಗಡಿಯಲ್ಲಿ ರಷ್ಯಾದ ಸೈನಿಕರ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಸಂಭವನೀಯ ದಾಳಿಯ ಸಮಯ ಸನ್ನಿಹಿತವಾಗುತ್ತಿದೆ, ಇದು ಯುರೋಪ್‌ಗೆ ಭದ್ರತೆಗೆ ಅಪಾಯಕಾರಿ ಕ್ಷಣ ಎಂದು ಹೇಳಲಾಗುತ್ತಿದೆ.

ಉಕ್ರೇನ್‌ನಲ್ಲಿ ಅಮೆರಿಕ ನಾಗರಿಕರ ರಕ್ಷಣೆಗೆ ಅಮೆರಿಕ ಸೇನೆಯನ್ನು ಕಳುಹಿಸಲು ಸಾಧ್ಯವಿಲ್ಲ, ಅಮೆರಿಕ ಹಾಗೂ ರಷ್ಯಾ ಸೇನಾ ಪಡೆಗಳು ಮುಖಾಮುಖಿಯಾದರೆ ಅದು ವಿಶ್ವ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ನೆರೆಯ ಉಕ್ರೇನ್‌ ಮೇಲೆ ರಷ್ಯಾದ ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇ.70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್‌ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ.

ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ 2000 ಯೋಧರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ರವಾನಿಸಿದೆ. ಇದು ತ್ವೇಷ ಪರಿಸ್ಥಿತಿಯ ಸಂಕೇತವಾಗಿದೆ.

ರಷ್ಯಾ ಸಜ್ಜು: ಈಗಾಗಲೇ ರಷ್ಯಾ ಸೇನೆ ಉಕ್ರೇನ್‌ ಗಡಿಯಲ್ಲಿ 1 ಲಕ್ಷದಷ್ಟು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಮುಂದಿನ ಕೆಲ ದಿನಗಳಲ್ಲಿ ಇಲ್ಲಿ ಮೈಕೊರೆವ ಹಿಮ ಆವರಿಸಿಕೊಳ್ಳಲಿದ್ದು, ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ನೆರವು ನೀಡಲಿದೆ.

ಅಂದಾಜಿನ ಪ್ರಕಾರ ದಾಳಿಗೆ ಅಗತ್ಯವಾದ ಸೇನೆಯ ಪೈಕಿ ಶೆ.70ರಷ್ಟನ್ನು ರಷ್ಯಾ ಈಗಾಗಲೇ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ಒಂದು ವೇಳೆ ದಾಳಿ ನಡೆದಿದ್ದೇ ಹೌದಾದಲ್ಲಿ ಕನಿಷ್ಠ 50 ಸಾವಿರ ನಾಗರಿಕರು ಸಾವನ್ನಪ್ಪಲಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.

ಅಮೆರಿಕ ಸೇನೆ ರವಾನೆ: ಈ ನಡುವೆ ಸಂಭವನೀಯ ಯುದ್ಧದ ವೇಳೆ ರಷ್ಯಾದ ಮೇಲೆ ಪ್ರತಿದಾಳಿ ನಡೆಸಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಈಗಾಗಲೇ ಘೋಷಣೆ ಮಾಡಿರುವರಾದರೂ, ನ್ಯಾಟೋ ಪಡೆಯ ಬಾಧ್ಯತೆಯನ್ನು ಪೂರೈಸುವ ಸಲುವಾಗಿ 2000 ಯೋಧರನ್ನು ಯುರೋಪ್‌ಗೆ ರವಾನಿಸಿದೆ. ಅವರು ಜರ್ಮನಿ ಮತ್ತು ಪೋಲೆಂಡ್‌ಗೆ ಬಂದು ಇಳಿದಿದ್ದಾರೆ ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ.

ರಷ್ಯಾ-ಉಕ್ರೇನ್‌ ಬಿಕ್ಕಟ್ಟಿಗೆ ಏನು ಕಾರಣ?
- ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಉಕ್ರೇನ್‌ ಯುರೋಪ್‌ ಒಕ್ಕೂಟದತ್ತ ವಾಲುತ್ತಿರುವುದು ರಷ್ಯಾ ಆಕ್ರೋಶಕ್ಕೆ ಕಾರಣ
- ಉಕ್ರೇನ್‌ಗೆ ನ್ಯಾಟೋದ ಪಾಲುದಾರ ಸ್ಥಾನಮಾನ ಪ್ರಸ್ತಾಪಕ್ಕೆ ರಷ್ಯಾದ ತೀವ್ರ ವಿರೋಧ. ಪ್ರಸ್ತಾಪ ಹಿಂಪಡೆವಂತೆ ಬೆದರಿಕೆ
- ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೆ ಮಿಲಿಟಿ ನೆರವು ನೀಡುತ್ತಿರುವುದನ್ನು ರಷ್ಯಾ ತೀವ್ರ ವಿರೋಧಿಸುತ್ತಿದೆ
- ಉಕ್ರೇನ್‌ನಲ್ಲಿ ತನ್ನ ಕೈಗೊಂಬೆ ಸರ್ಕಾರ ರಚಿಸುವ ರಷ್ಯಾ ಯತ್ನಕ್ಕೆ ಅಮೆರಿಕ, ಯುರೋಪ್‌ ದೇಶಗಳ ಅಡ್ಡಗಾಲು ಪ್ರಯತ್ನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+