• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೂತು ಹಾಕಲು ಜಾಗವಿಲ್ಲ, ಸಾಮೂಹಿಕ ಸಮಾಧಿಗೆ ಲೆಕ್ಕವಿಲ್ಲ

|

ಕೊರೊನಾ ವಕ್ಕರಿಸಿದ್ದೇ ವಕ್ಕರಿಸಿದ್ದು, ಅಮೆರಿಕದ ಸ್ಥಿತಿಗತಿ ಅಧೋಗತಿಯಾಗಿದೆ. ಅತ್ತ ಆರ್ಥಿಕತೆ ಪತನವಾಗಿ, ನಂಬರ್ 1 ಪಟ್ಟದಿಂದ ಅಮೆರಿಕ ಕೆಳಗಿಳಿಯುವ ಸಾಧ್ಯತೆ ದಟ್ಟವಾಗಿದ್ದರೆ. ಇತ್ತ ಕೊರೊನಾ ಸೋಂಕಿನಿಂದಾಗಿ ಲಕ್ಷ ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸದ್ಯದ ಅಂಕಿ-ಅಂಶಗಳ ಪ್ರಕಾರ ಅಮೆರಿಕದಲ್ಲಿ ಈವರೆಗೂ 1 ಕೋಟಿ 36 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ 2 ಲಕ್ಷ 72 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್ ಕತೆ ಭಯಾನಕವಾಗಿದೆ.

ಇದೊಂದೇ ರಾಜ್ಯದಲ್ಲಿ ಸುಮಾರು 7 ಲಕ್ಷ ಮಂದಿಗೆ ಸೋಂಕು ವಕ್ಕರಿಸಿದ್ದರೆ, 34 ಸಾವಿರಕ್ಕೂ ಹೆಚ್ಚು ಜನ ನ್ಯೂಯಾರ್ಕ್ ಒಂದರಲ್ಲೇ ಅಸುನೀಗಿದ್ದಾರೆ. ದಿಢೀರ್ ಸಾವಿನ ಸಂಖ್ಯೆ ಹೆಚ್ಚಳದಿಂದಾಗಿ ಸೋಂಕಿತರ ಶವ ಹೂತು ಹಾಕಲು ಜಾಗವಿಲ್ಲದೆ ಪರದಾಡುವಂತಾಗಿದೆ. ಅದರಲ್ಲೂ ನ್ಯೂಯಾರ್ಕ್‌ನ ಹಾರ್ಟ್‌ ದ್ವೀಪದ ಸಾಮೂಹಿಕ ಸಮಾಧಿ ಕಥೆ ಎಂತಹ ಗಟ್ಟಿ ಗುಂಡಿಗೆಯವರ ಕಣ್ಣಲ್ಲೂ ನೀರು ತರಿಸುತ್ತದೆ. ಅದೆಷ್ಟೋ ಕುಟುಂಬಗಳು ಸಾಮೂಹಿಕ ಸಮಾಧಿ ಕೆಳಗೆ ತಣ್ಣಗೆ ಮಲಗಿವೆ. ಇನ್ನೂ ಹಲವರಿಗೆ ತಮ್ಮವರ ಸಮಾಧಿ ಎಲ್ಲಿದೆ ಎಂಬುದು ಕೂಡ ಇನ್ನೂ ತಿಳಿಯದಾಗಿದೆ.

1.95 ಕೋಟಿ ಜನಸಂಖ್ಯೆ 7 ಲಕ್ಷ ಸೋಂಕಿತರು

1.95 ಕೋಟಿ ಜನಸಂಖ್ಯೆ 7 ಲಕ್ಷ ಸೋಂಕಿತರು

ಅಮೆರಿಕದ ಇತರ ರಾಜ್ಯಗಳಿಗೆ ಅಥವಾ ನಗರಕ್ಕೆ ಹೋಲಿಕೆ ಮಾಡಿದರೆ ನ್ಯೂಯಾರ್ಕ್ ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಸುಮಾರು 1.95 ಕೋಟಿ ಲಕ್ಷಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಕೇವಲ 1.95 ಕೋಟಿ ಜನಸಂಖ್ಯೆಯಲ್ಲಿ ಈವರೆಗೂ 7 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ 34 ಸಾವಿರಕ್ಕೂ ಹೆಚ್ಚು ಜನ ಡೆಡ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಭಯಾನಕವಾಗುತ್ತಿದೆ. ಕಳೆದ ಕೆಲ ದಿನಗಳಿಂದ ನ್ಯೂಯಾರ್ಕ್‌ನಲ್ಲಿ ಊಹೆಗೂ ಮೀರಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ವಾಣಿಜ್ಯ ರಾಜಧಾನಿ ಸ್ಥಿತಿ ಅಯೋಮಯ

ವಾಣಿಜ್ಯ ರಾಜಧಾನಿ ಸ್ಥಿತಿ ಅಯೋಮಯ

ಭಾರತಕ್ಕೆ ಮುಂಬೈ ಇದ್ದಂತೆ ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್. ಏಕೆಂದರೆ ಇಲ್ಲೇ ಅಮೆರಿಕದ ಸ್ಟಾಕ್ ಮಾರ್ಕೆಟ್ ಇರುವುದು. ಮುಂಬೈನ ದಲಾಲ್ ಸ್ಟ್ರೀಟ್ ರೀತಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಲ್ ಸ್ಟ್ರೀಟ್ ಇದೆ. ಮುಗಿಲೆತ್ತರದ ಕಟ್ಟಡಗಳು, ಊಹಿಸಲು ಆಗದಷ್ಟು ಅಗಲವಾದ ರಸ್ತೆಗಳು. ಹೀಗೆ ಅಮೆರಿಕದ ನ್ಯೂಯಾರ್ಕ್ ನಗರ ಒಂದು ವೆಲ್ ಪ್ಲಾನ್ಡ್ ಸಿಟಿ. ಆದರೆ ಈಗ ಅಲ್ಲಿನ ರಸ್ತೆಗಳ ಮೇಲೆ ಓಡಾಡಲು ಜನರು ಹೆದರುತ್ತಿದ್ದಾರೆ. ಸ್ಟಾಕ್ ಮಾರ್ಕೆಟ್ ಕತೆ ಹೇಳತೀರದಾಗಿದೆ. ಲಕ್ಷ ಲಕ್ಷ ಜನರಿಗೆ ಕೊರೊನಾ ವಕ್ಕರಿಸಿದ್ದೇ ತಡ ಜನರು ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಕ್ರಿಸ್‌ಮಸ್‌ಗೆ ಮುನ್ನ ಹಲವು ನಿರ್ಬಂಧಗಳನ್ನು ಇಲ್ಲಿ ಹೇರಲಾಗಿದ್ದು, ಈ ಬಾರಿ ಕ್ರಿಸ್‌ಮಸ್ ಸಂಭ್ರಮ ಕೂಡ ಕಳೆಗಟ್ಟಿಲ್ಲ. ಶೇರು ವ್ಯವಹಾರ ದಿಕ್ಕುತಪ್ಪಿರುವುದು ನ್ಯೂಯಾರ್ಕ್‌ನ ಉದ್ಯಮಿಗಳನ್ನ ಕಂಗಾಲಾಗಿಸಿದೆ.

ಅಮೆರಿಕದಲ್ಲೇ ಅತಿಹೆಚ್ಚು ಸಾವು

ಅಮೆರಿಕದಲ್ಲೇ ಅತಿಹೆಚ್ಚು ಸಾವು

ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನ್ಯೂಯಾರ್ಕ್ ನಗರದಲ್ಲಿ ಸಾವಿನ ಸಂಖ್ಯೆ ಅಧಿಕವಾಗಿದೆ. ಟೆಕ್ಸಾಸ್ ರಾಜ್ಯದಲ್ಲಿ ಸುಮಾರು 12 ಲಕ್ಷದ 50 ಸಾವಿರ ಸೋಂಕಿತರು ಈವರೆಗೂ ಪತ್ತೆಯಾಗಿದ್ದಾರೆ. ಆದರೆ ಸೋಂಕಿಗೆ ಬಲಿಯಾದವರ ಸಂಖ್ಯೆ ಮಾತ್ರ 22 ಸಾವಿರದಷ್ಟು. ಆದರೆ ಟೆಕ್ಸಾಸ್‌ಗಿಂತ ಅರ್ಧದಷ್ಟು ಕಡಿಮೆ ಸೋಂಕಿತರ ಸಂಖ್ಯೆ ಇರುವ ನ್ಯೂಯಾರ್ಕ್‌ನಲ್ಲಿ 34 ಸಾವಿರ ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇದು ಅಲ್ಲಿನ ಆರೋಗ್ಯ ವ್ಯವಸ್ಥೆಯ ಪರಿಸ್ಥಿತಿಯನ್ನ ಬಿಂಬಿಸುತ್ತದೆ. ಅತಿಹೆಚ್ಚು ಜನರು ವಾಸವಿರುವ ಈ ರಾಜ್ಯದಲ್ಲಿ ಸರಿಯಾದ ಆಸ್ಪತ್ರೆ ಸೌಕರ್ಯ ಇಲ್ಲದಿರುವುದೇ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಐಸಿಯು ಬೆಡ್‌ಗಳನ್ನು ಝೂಮ್ ಹಾಕಿ ಹುಡಕಬೇಕಿದೆ.

  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೋನಾ | Oneindia Kannada
  ಅಮೆರಿಕನ್ನರಿಗೆ ಮುಂದಿದೆ ಮಾರಿಹಬ್ಬ..!

  ಅಮೆರಿಕನ್ನರಿಗೆ ಮುಂದಿದೆ ಮಾರಿಹಬ್ಬ..!

  ಅಮೆರಿಕದಲ್ಲಿ ಚಳಿಗಾಲ ಮುಗಿಯುವವರೆಗೂ ಕೊರೊನಾ ಮರಣ ಮೃದಂಗಕ್ಕೆ ಬ್ರೇಕ್ ಬೀಳುವುದಿಲ್ಲ. ಹೀಗೆ ಮುಂದಿನ ದಿನಗಳಲ್ಲಿ ಇನ್ನೂ ಭಯಾನಕ ಪರಿಸ್ಥಿತಿ ಎದುರಾಗುವ ಕುರಿತು ಸಾಂಕ್ರಾಮಿಕ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಅಮೆರಿಕದಲ್ಲಿ ಕೊರೊನಾ ಸೋಂಕು ಹರಡುವ ವೇಗವೂ ಏರಿಕೆ ಕಂಡಿದೆ. ಹೇಳಿಕೊಳ್ಳುವುದಕ್ಕೆ ಅಮೆರಿಕ ಶ್ರೀಮಂತ ರಾಷ್ಟ್ರವಾದರೂ ಅಲ್ಲಿನ ಆರೋಗ್ಯ ವ್ಯವಸ್ಥೆಯ ಬಣ್ಣ ಈಗ ಬಯಲಾಗಿದೆ. ವಿಶ್ವದ ಎದುರು ಅಮೆರಿಕ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ವಾರಗಳಲ್ಲಿ ಲಸಿಕೆ ಸಿಗದಿದ್ದರೆ, ಅಮೆರಿಕದ ಸ್ಥಿತಿ ಇನ್ನೂ ಭಯಾನಕವಾಗಲಿದೆ.

  English summary
  Thousands of people have died of Corona in New York State in the America. Because of sudden rise of death toll, there is shortage of place for cremation.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X